Categories: ಮಂಗಳೂರು

ಬೆಳ್ತಂಗಡಿ: ೨೦.೩೬ ಕೋಟಿ ರೂ. ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ

ಬೆಳ್ತಂಗಡಿ: ಕುಸಿದು ಬಿದ್ದು ಸಂಪರ್ಕ ಕಡಿದುಕೊಂಡ ಕುತ್ಲೂರು ಸೇತುವೆ ಒಂದೇ ವರ್ಷದಲ್ಲಿ ನಿರ್ಮಾಣಕ್ಕಾಗಿ ಅನುದಾನ ಒದಗಿಸಲಾಗಿದೆ. ಉಳಿದಂತೆ ನಾರಾವಿ ಭಾಗದ ಸರ್ವಋತು ಅಭಿವೃದ್ಧಿಗೆ ಆದ್ಯತೆ ನೀಡಿದ ಪರಿಣಾಮ ನಾರಾವಿ ಗ್ರಾ.ಪಂ. ವ್ಯಾಪ್ತಿಯೊಂದಕ್ಕೆ ಸುಮಾರು ೧೭ ಕೋ.ರೂ. ಅನುದಾನ ಒದಗಿಸಲಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ವತಿಯಿಂದ ಬೆಳ್ತಂಗಡಿ ತಾಲೂಕಿನ ಒಟ್ಟು ೧೧ ಕಡೆಗಳಲ್ಲಿ ಹಮ್ಮಿಕೊಳ್ಳಲುದ್ದೇಶಿಸಿದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಡಿ.೧೭ರಂದು ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ತಾಲೂಕಿನ ೮೧ ಗ್ರಾಮಗಳಿಗೆ ಸಾವಿರಾರು ಕೋ.ರೂ. ಅನುದಾನ ತರುವ ಮೂಲಕ ರಾಜ್ಯದಲ್ಲೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರವು ಅತೀ ಹೆಚ್ಚು ಅನುದಾನ ತಂದಿರುವ ಕ್ಷೇತ್ರವಾಗಿದೆ. ರಸ್ತೆ, ಕಿಂಡಿಅಣೆಕಟ್ಟು, ಕೈಗಾರಿಕಾ ಕ್ಷೇತ್ರ, ನೀರಾವರಿ ಸೌಲಭ್ಯ ಪೂರಕ ಯೋಜನೆಗಳನ್ನು ತಾಲೂಕು ಕಾಣುವಂತಾಗಲು ಗ್ರಾಮಸ್ಥರ ಬೆಂಬಲ ಅಗತ್ಯ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಹೊಸಂಗಡಿ ಗ್ರಾ.ಪಂ. ಅಧ್ಯಕ್ಷ ಕರುಣಾಕರ ಪೂಜಾರಿ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ವಿಠಲ ಸಿ. ಪೂಜಾರಿ, ಆರಂಬೋಡಿ ಗ್ರಾ.ಪಂ. ಅಧ್ಯಕ್ಷೆ ವಿಜಯಾ ರಮೇಶ್, ಪಡಂಗಡಿ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್, ವೇಣೂರು ಗ್ರಾ.ಪಂ.ಅಧ್ಯಕ್ಷ ನೇಮಯ್ಯ ಕುಲಾಲ್, ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ, ನಾರಾವಿ ಗ್ರಾ.ಪಂ. ಅಧ್ಯಕ್ಷೆ ಆಶಾಲತಾ, ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಧಾಕರ್ ಭಂಡಾರಿ, ಬಿಜೆಪಿ ಮುಖಂಡ ಶ್ರೀನಿವಾಸ ಕಿಣಿ, ನಾರಾವಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಶೇಖರ ಹೆಗ್ಡೆ, ಮರೋಡಿ ಗ್ರಾ.ಪಂ. ಅಧ್ಯಕ್ಷೆ ಪದ್ಮಶ್ರೀ ಜೈನ್, ಹಿರಿಯರಾದ ಡಾಕಯ್ಯ ಪೂಜಾರಿ, ಬಳೆಂಜ ಗ್ರಾ.ಪಂ. ಅಧ್ಯಕ್ಷೆ ಹೇಮಂತ ಪೂಜಾರಿ, ಕುವೆಟ್ಟು ಆಶಾಲತಾ, ಕೊಯ್ಯೂರು ಗ್ರಾ.ಪಂ ಅಧ್ಯಕ್ಷ ಜಗನ್ನಾಥ, ಉಪಾಧ್ಯಕ್ಷ, ಸದಸ್ಯರು ಉಪಸ್ಥಿತರಿದ್ದರು.

ಅಭಿವೃದ್ಧಿ ಕಾಮಗಾರಿ ವಿವರ
ಮರೋಡಿ ಗ್ರಾಮದ ಕುಂಜೋಡಿ-ನಾರಾವಿ ರಸ್ತೆ ಡಾಮರೀಕರಣ-೧.೩೮ ಕೋ.ರೂ., ಹೊಸಂಗಡಿ ಗ್ರಾಮದ ಪಣಿಮೇರು-ಆರಂಬೋಡಿ ರಸ್ತೆ ಡಾಮರೀಕರಣ-೭೫.೩೦ ಲಕ್ಷ ರೂ., ವೇಣೂರು ಗ್ರಾಮದ ಬಡಾರ ರಸ್ತೆ ಮರು ಡಾಮರೀಕರಣ-೧ ಕೋ.ರೂ., ಬಳೆಂಜ ಗ್ರಾಮದ ತಾರದಡ್ಡ-ನಿಟ್ಟಡೆ ಬೊಳ್ಳಜೆ ರಸ್ತೆ ಅಭಿವೃದ್ಧಿ-೨ ಕೋ.ರೂ., ಪಡಂಗಡಿ ಗ್ರಾಮದ ಪುತ್ತೆಯಿಂದ-ಕುದುರೆಂಜ ಸಂಪರ್ಕ ರಸ್ತೆ ಅಭಿವೃದ್ಧಿ-೧.೫೦ ಕೋ.ರೂ., ಪಣಕಜೆ-ಅಂಬೆಟ್ಟು-ಬಳ್ಳಮಂಜವರೆಗೆ ರಸ್ತೆ ಅಭಿವೃದ್ಧಿ-೪ ಕೋ.ರೂ., ಬಾರ್ಯ ಮೂರುಗೊಳಿ-ಪಂಚಲಾಜೆ ಪ.ಜಾ. ಕಾಲೊನಿ ಸಂಪರ್ಕ ರಸ್ತೆ ಅಭಿವೃದ್ಧಿ-೨ ಕೋ.ರೂ., ಪುತ್ತಿಲ ಗ್ರಾಮದ ಹೇರಾಜೆ ಸಂಪರ್ಕ ರಸ್ತೆ ಅಭಿವೃದ್ಧಿ- ೧.೫೦ ಕೋ.ರೂ., ಬಾರ್ಯ ಗೋದಾಮು ಗುಡ್ಡೆ ರಸ್ತೆ ಮರುಡಾಮರೀಕರಣ-೯೮ ಲಕ್ಷ ರೂ., ಬಾರ್ಯ ಕುಟ್ಟಿಕಳದಿಂದ ಪೆದಮಲೆ ರಸ್ತೆ ಮರು ಡಾಮರೀಕರಣ-೧.೨೫ ಕೋ.ರೂ., ಕೊಯ್ಯೂರು ಬಜಿಲವರೆಗೆ ರಸ್ತೆ ಅಭಿವೃದ್ಧಿ- ೪ ಕೋ.ರೂ. ಕಾಮಗಾರಿಗೆ ಶಾಸಕ ಹರೀಶ್ ಪೂಂಜ ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು.

Sneha Gowda

Recent Posts

ದೇಶದದ್ಯಾಂತ ಪ್ರಜ್ವಲಿಸಿದ ಪ್ರಜ್ವಲ್‌ ಪೆನ್‍ಡ್ರೈವ್; ಈತ ಅದೆಂಥಾ ವಿಕೃತಕಾಮಿಯಾಗಿರಬೇಡ

ಹಾಸನದ ಸಂಸದರೂ ಆಗಿರೋ  ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಹಾಗೂ ಭವಾನಿ ದಂಪತಿಯ ಹಿರಿಯ ಮಗ ಪ್ರಜ್ವಲ್. ಈತನ ಕಾಮಕಾಂಡದ…

3 mins ago

ಜಾತಿ ನಿಂದನೆ ಕೇಸ್ ಹೆದರಿದ ಯುವಕ ಆತ್ಮಹತ್ಯೆಗೆ ಶರಣು

ಜಾತಿ ನಿಂದನೆ ಕೇಸ್‌ ದಾಖಲಿಸಿದ್ದಕ್ಕೆ ಹೆದರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಲಾಡಮುಗಳಿ ಗ್ರಾಮದಲ್ಲಿ…

34 mins ago

ಚಾರ್ಜ್​ಗೆ ಇಟ್ಟ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ: ಹತ್ತಿರದ ಶಾಮಿಯಾನ‌ ಅಂಗಡಿ ಸುಟ್ಟು ಭಸ್ಮ

ಚಾರ್ಜ್​ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟಗೊಂಡ ಘಟನೆ ಮಂಡ್ಯದ ಮಳವಳ್ಳಿ ಪಟ್ಟಣದ NES ಬಡಾವಣೆಯಲ್ಲಿ ನಡೆದಿದೆ.

48 mins ago

ದನದ ಮಾಂಸ ರಫ್ತಿನಲ್ಲಿ ಬಿಜೆಪಿ 2ನೇ ಸ್ಥಾನ: ಸಂತೋಷ್‌ ಲಾಡ್‌

ಬಿಜೆಪಿ ಸರಕಾರದ ಸಾಧನೆ ಕೇವಲ ಎರಡೇ ಎರಡು. ಒಂದು ದನದ ಮಾಂಸ ರಫ್ತಿನಲ್ಲಿ 2ನೇ ಸ್ಥಾನ. ಎರಡು ಮೋದಿ ಸ್ವಜಾಹೀರಾತಿಗಾಗಿ…

59 mins ago

ಚಾಮರಾಜನಗರ: ಸಾರಿಗೆ ಬಸ್‌ ತಡೆದು ವಿದ್ಯಾರ್ಥಿಗಳಿಂದ ಪ್ರತಿಭಟನೆ

ಬೆಳಗ್ಗೆ ಕಾಲೇಜುಗಳಿಗೆ ತೆರಳಲು ಸಮರ್ಪಕ ಬಸ್ ಸೌಕರ್ಯವಿಲ್ಲ ಎಂದು ಆರೋಪಿಸಿ ಕಾಲೇಜು ವಿದ್ಯಾರ್ಥಿಗಳು ಕೆ.ಎಸ್. ಆರ್. ಟಿ ಸಿ ಬಸ್…

1 hour ago

ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಉದ್ಯಮಿ ಹೃದಯಾಘಾತದಿಂದ ಮೃತ್ಯು

ಪುಣೆಯಿಂದ ಕುಂದಾಪುರಕ್ಕೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಉದ್ಯಮಿಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಿನ್ನೆ ಹೊನ್ನಾವರದಲ್ಲಿ ನಡೆದಿದೆ.

1 hour ago