Categories: ಮಂಗಳೂರು

ಬೆಳ್ತಂಗಡಿ ತಾ.ಪಂ ಮಾಜಿ ಉಪಾಧ್ಯಕ್ಷ ಸಂತೋಷ್‌ ಕುಮಾರ್ ಆತ್ಮಹತ್ಯೆ

ಬೆಳ್ತಂಗಡಿ : ತಾಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ, ಲಾಯಿಲ ನಿವಾಸಿ ಸಂತೋಷ್ ಕುಮಾರ್ ( 44)ಅವರು ಶನಿವಾರ ಲಾಯಿಲ ಗ್ರಾಮದ ಆದರ್ಶ ನಗರದ ಸರಕಾರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ವಂತ ಅಟೋ ರಿಕ್ಷಾ ಹೊಂದಿದ್ದ ಸಂತೋಷ್ ಅವರು ಕೆಲ‌ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಬೆನ್ನುಮೂಳೆ ಮುರಿತಕ್ಕೊಳಗಾಗಿ ಸೊಂಟದಿಂದ ಕೆಳಗೆ ಸ್ವಾಧೀನ‌ ಕಳೆದುಕೊಂಡು ಮಲಗಿದ್ದಲ್ಲೇ ಇದ್ದರು.

ಕೊಕ್ಕಡದ ಸೇವಾಧಾಮ ಬೆನ್ನುಮೂಳೆ ಮುರಿತಕ್ಕೊಳಗಾದವರ ಆರೈಕೆ ಕೇಂದ್ರದಿಂದ ಚಿಕಿತ್ಸೆ ಮತ್ತು ಫಿಸಿಯೋಥೆರಫಿ ಪಡೆದು ಚೇತರಿಸಿಕೊಂಡು ಸ್ವಾವಲಂಬಿಯಾಗಿ ದುಡಿಯುತ್ತಿದ್ದರು.

ಶನಿವಾರ ಬೆಳಗ್ಗೆ ಆದರ್ಶ ನಗರದ ಸರಕಾರಿ‌ ಬಾವಿ ಬಳಿ ಆಪೆ ರಿಕ್ಷಾವೊಂದು ನಿಂತಿರುವುದನ್ನು ಅಲ್ಲಿನ ಸ್ಥಳೀಯರು ಗಮನಿಸಿದಾಗ ಬಾವಿಯಲ್ಲಿ ಚಪ್ಪಲಿ ತೇಲುತ್ತಿದ್ದದು ಗಮನಿಸಿ, ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬಾವಿಯಿಂದ ಶವವನ್ನು ಮೇಲಕ್ಕೆತ್ತಿದ್ದು, ಮರಣೋತ್ತರ ಪರೀಕ್ಷೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಲತ್ರೆಗೆ ಕೊಂಡೊಯ್ಯಲಾಗಿದೆ.

ಘಟನೆ ನಡೆದ ಸ್ಥಳ ಜನತಾ ಕಾಲೋನಿಯಾಗಿದ್ದು ಸುತ್ತಮುತ್ತ ಮನೆಗಳಿದೆ. ಆಪೆ ರಿಕ್ಷಾ ಬಾವಿಯ ಬಳಿಯೇ ಇದ್ದ ಕಾರಣ ಪ್ರಕರಣ ಬೆಳಕಿಗೆ ಬಂದಿದೆ. ಸೊಂಟದಿಂದ ಕೆಳಗೆ ಸ್ವಾಧೀನ ಇಲ್ಲದ ಕಾರಣ ಆಪೆ ರಿಕ್ಷಾವನ್ನು ಬಾವಿಯ ದಂಡೆಯ ಹತ್ತಿರವೇ ನಿಲ್ಲಿಸಿ, ಬಾವಿಗೆ ಹಾರಿರುವ ಸಾಧ್ಯತೆಯಿದೆ ಎನ್ನಲಾಗಿದೆ.

ಉಜಿರೆ ಬೆಳ್ತಂಗಡಿ ಅಪೆ ರಿಕ್ಷಾ ಚಾಲಕ ಮಾಲಕರ‌ ಸಂಘದ ಪದಾಧಿಕಾರಿಯಾಗಿ, ಲಾಯಿಲ ಶ್ರೀ ಗಣೇಶೋತ್ಸವ ಸಮಿತಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು.

ಅವಿವಾಹಿತರಾಗಿರುವ ಸಂತೋಷ್ ಅವರು ತಮ್ಮ ದೀರ್ಘಕಾಲಿಕ ಅನಾರೋಗ್ಯದಿಂದಲೇ ಬೇಸತ್ತು ಜೀವನದಲ್ಲಿ ಜಿಗುಪ್ಸೆ ಹೊಂದಿ‌ ಈ ಕೃತ್ಯ ಎಸಗಿರಬೇಕೆಂದು ಶಂಕಿಸಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

 

Raksha Deshpande

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

5 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

5 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

5 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

5 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

7 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

7 hours ago