Categories: ಮಂಗಳೂರು

ಬಂಟ್ವಾಳ ನೇತ್ರಾವತಿ ಸಂಗಮ ನೂತನ ಘಟಕ ಉದ್ಘಾಟನೆ

ಬಂಟ್ವಾಳ ಮಾ.8 : ಜೇಸಿಐ ಸಂಸ್ಥೆಯಲ್ಲಿ ಸಾಧನೆ ಮಾಡಿದ ಜೇಸಿಗಳು ನಿಷ್ಕ್ರಿಯರಾಗದೆ ಅಂತರಾಷ್ಟ್ರೀಯ ಸೀನಿಯರ್ ಛೇಂಬರ್  ಇಂಟರ್ ನ್ಯಾಶನಲ್ ಸಂಸ್ಥೆಯಲ್ಲಿ ಸೇವಾಕಾರ್ಯಗಳನ್ನು ಮುಂದುವರಿಸಬೇಕು. ಹಿರಿಯ ನಾಗರಿಕರಾಗಿ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಮೂಲಕ ಕ್ರಿಯಾಶೀಲರಾಗಬೇಕು ಎಂದು ಎಸ್.ಸಿ.ಐ ಸಂಸ್ಥೆಯ ರಾಷ್ಟ್ರಧ್ಯಕ್ಷ ಕೇದಿಗೆ ಅರವಿಂದ ರಾವ್ ಹೇಳಿದರು. ಅವರು ಬಿ.ಸಿ.ರೋಡಿನ ಪದ್ಮಾಕಾಂಪ್ಲೆಕ್ಸ್ನಲ್ಲಿ ಶನಿವಾರ ಹಿರಿಯಜೇಸಿಗಳ ಬಂಟ್ವಾಳ ನೇತ್ರಾವತಿ ಸಂಗಮ ನೂತನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಸಾರ್ವಜನಿಕ ಸಂಪರ್ಕ ಸಮಿತಿಯ ವಲಯಾಧಿಕಾರಿ ಜಯಪ್ರಕಾಶ್ ರಾವ್ ಪುತ್ತೂರು ಮುಖ್ಯಅತಿಥಿಯಾಗಿ ಮಾತನಾಡಿ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಆದರ್ಶ ವ್ಯಕ್ತಿತ್ವ ಅನುಕರಣೀಯವಾಗಿದೆ. ಜೇಸಿ ಸಂಸ್ಥೆಯು ವ್ಯಕ್ತಿತ್ವ ನಿರ್ಮಾಣ ಕಾರ್ಯದ ಮೂಲಕ ದೇಶಕ್ಕೆ ಉತ್ತಮ ನಾಯಕರನ್ನು ನೀಡುತ್ತಿದೆ ಎಂದು ಶುಭ ಹಾರೈಸಿದರು.

ಎಸ್.ಸಿ.ಐ. ರಾಷ್ಟ್ರೀಯ ನಿರ್ದೇಕ ಚಿತ್ರ ಕುಮಾರ್ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ರಾಜ್ಯ ವಿಸ್ತರಣಾಧಿಕಾರಿ ನವೀನ್ ಅಮೀನ್ ಶುಭ ಹಾರೈಸಿದರು. ಬಂಟ್ವಾಳ ನೇತ್ರಾವತಿ ಸಂಗಮದ ಅಧ್ಯಕ್ಷರಾಗಿ ಜೇಸಿಐ ರಾಜ್ಯ ತರಬೇತುದಾರ ಜಯಾನಂದ ಪೆರಾಜೆ ಸ್ಥಾಪಕ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಎಸ್.ಆರ್.ಪಟವರ್ಧನ್, ಕಾರ್ಯದರ್ಶಿಯಾಗಿ ಸತ್ಯನಾರಾಯಣ ರಾವ್, ಕೋಶಾಧಿಕಾರಿಯಾಗಿ ಬಿ.ಆರ್. ರಾವ್, ಜೊತೆ ಕಾರ್ಯದರ್ಶಿಯಾಗಿ ಪಿ. ಮಹಮ್ಮದ್ ಪ್ರಮಾಣ ವಚನ ಸ್ವೀಕರಿಸಿದರು.

ಮಂಗಳೂರು ಘಟಕದ ಅಧ್ಯಕ್ಷ ಹರಿಪ್ರಸಾದ್ ರೈ ಸಭಾಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶಾಲಿನಿಪ್ರಶಾಂತ್ ಉಪಸ್ಥಿತರಿದ್ದರು. ಪ್ರೊ. ವೃಷಭರಾಜ್ ಜೈನ್, ಮಹಾಬಲೇಶ್ವರ ಹೆಬ್ಬಾರ್ , ಬಿ.ರಾಮಚಂದ್ರ ರಾವ್ ,ನ್ಯಾಯವಾದಿ ಉಮೇಶ್ ಏಣಾಜೆ, ರಾಧಾಕೃಷ್ಣ ಬಂಟ್ವಾಳ, ಜೇಸಿ ಅಧ್ಯಕ್ಷ ಹರಿಪ್ರಸಾದ್ ಶುಭಹಾರೈಸಿದರು. ಅಹಮ್ಮದ್ ಮುಸ್ತಾಫ ವಂದಿಸಿದರು.

Gayathri SG

Recent Posts

ಇಂದು (ಏಪ್ರಿಲ್ 30) ಆಯುಷ್ಮಾನ್ ಭಾರತ್ ದಿನ ಆಚರಣೆ

ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯ ಗುರಿಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿ ವರ್ಷ ಏಪ್ರಿಲ್ 30 ರಂದು ಭಾರತವು…

27 mins ago

ಹಿಟ್ ಅಂಡ್ ರನ್ ಗೆ ಬೈಕ್ ಸವಾರ ಸ್ಥಳದಲ್ಲಿಯೇ ಮೃತ್ಯು

ಹಿಟ್ ಅಂಡ್ ರನ್ ಗೆ ಬೈಕ್ ಸವಾರ ಬಲಿಯಾದ ಘಟನೆ ಬನ್ನೇರುಘಟ್ಟ ರಸ್ತೆಯ ಸಕಲವಾರ ಸಮೀಪ ನಡೆದಿದೆ.

44 mins ago

ಇಂದು ಚಿನ್ನದ ಬೆಲೆ ಕೊಂಚ ಇಳಿಕೆ: ಇವತ್ತಿನ ಚಿನ್ನ, ಬೆಳ್ಳಿ ದರಪಟ್ಟಿ

ಕಳೆದ ಒಂದು ವಾರದಿಂದ ಚಿನ್ನ ಮತ್ತು ಬೆಳ್ಳಿ ಬೆಲೆಗಳ ಏರಿಳಿತ ಮುಂದುವರಿಯುತ್ತಿದ್ದು, ಇಂದು ಚಿನ್ನದ ಬೆಲೆ ಕೊಂಚ ಕಡಿಮೆಯಾಗಿದ್ದು, ಪ್ರತಿ…

1 hour ago

ಒಗ್ಗಟ್ಟಾಗಿ ಕೆಲಸ ಮಾಡಿದರೆ ಶಿವಮೊಗ್ಗದಲ್ಲಿ ರಾಘವೇಂದ್ರ ಗೆಲ್ಲುತ್ತಾರೆ : ಹೆಚ್‌ಡಿಕೆ

ಒಗ್ಗಟ್ಟಾಗಿ ಕೆಲಸ ಮಾಡಿದರೆ ಶಿವಮೊಗ್ಗ ಗ್ರಾಮಾಂತರದಲ್ಲಿ ಒಂದು ಲಕ್ಷದ ಮತ ದಿಂದ ರಾಘವೇಂದ್ರ ಗೆಲ್ಲಲಿದ್ದಾರೆ ಎಂದು ಮಜಿಮುಖ್ಯಮಂತ್ರಿ ಕುಮಾರ ಸ್ವಾಮಿ…

9 hours ago

ಪ್ರಜ್ವಲ್ ರೇವಣ್ಣ ಉಚ್ಚಾಟನೆ : ಕುಮಾರ ಸ್ವಾಮಿ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ

ಪ್ರಜ್ವಲ್ ರೇವಣ್ಣ ಉಚ್ಚಾಟನೆ ಬಗ್ಗೆ ಮಾಜಿ ಸಿಎಂ ಕುಮಾರ ಸ್ವಾಮಿ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದು, ನಿನ್ನೆಯೇ ಈ ಬಗ್ಗೆ ನಮ್ಮ…

9 hours ago

ಬಿಜೆಪಿ ಅಭ್ಯರ್ಥಿ ಜೈಲಿಗೆ ಹೋಗುವ ದಿನಕ್ಕೆ ಕ್ಷಣಗಣನೆ : ಪ್ರಿಯಾಂಕಾ ಗಾಂಧಿ

ಒಲಿಂಪಿಕ್ಸ್ ಆಟಗಾರರ ಮೇಲೆ ಕಿರುಕುಳವಾಗಿತ್ತು, ಮಹಿಳೆಯ ಮೇಲೆ ಅತ್ಯಾಚಾರವಾಗಿತ್ತು. ಆಗ ಪ್ರಧಾನಿ ಮೋದಿ‌ ಸುಮ್ಮನೆ ಇದ್ದರಲ್ಲದೆ ಇಂದು ಕರ್ನಾಟಕದಲ್ಲಿ ಸಾವಿರಾರು…

9 hours ago