Categories: ಮಂಗಳೂರು

ನಿಟ್ಟೆ ಶಶಿಧರ ಶೆಟ್ಟಿ ಅವರ ಸಾಧನೆ ದಾಖಲೀಕರಣಗೊಳ್ಳಲಿ: ಡಾ. ಧರ್ಮಾ

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದುಕೊಂಡು, ತುಳು ಸಂಘಟನೆ, ಸಮಾಜ ಸೇವೆ, ಸಾಂಸ್ಕೃತಿಕವಾಗಿ ಹಾಗೂ ಯಶಸ್ವಿ ಉದ್ಯಮಿಯಾಗಿಯೂ ಗುರುತಿಸಿ ಆದರ್ಶ ವ್ಯಕ್ತಿತ್ವದಿಂದ ಪ್ರೇರಣಾ ವ್ಯಕ್ತಿಯಾಗಿ ನಮ್ಮೆಲ್ಲರೊಂದಿಗೆ ಒಡನಾಡಿಯಾಗಿದ್ದ ಅವರ ಜೀವನದ ಸಾಧನೆಯೊಂದಿಗೆ ಅನುಭವವು ಬರಹದ ಮೂಲಕ ಮುಂದಿನ ಪೀಳಿಗೆಗೆ ದಾರಿದೀಪವಾಗಿ ದಾಖಲೀಕರಣಗೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯ ರಿಜಿಸ್ಟ್ರಾರ್ ಡಾ. ಧರ್ಮ ಹೇಳಿದರು.

ಅವರು ಮಂಗಳೂರಿನ ಉರ್ವ ಸ್ಟೋರ್‌ನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಿರಿ ಚಾವಡಿಯಲ್ಲಿ ನಡೆದ ಅಕಾಡೆಮಿಯ ಸದಸ್ಯ ನಿಟ್ಟೆ ಶಶಿಧರ ಶೆಟ್ಟಿ ಅವರ ನುಡಿ ಪುಷ್ಪ ಶ್ರದ್ಧಾಂಜಲಿ ಸಭೆಯಲ್ಲಿ ತಮ್ಮ ನುಡಿ ನಮನ ಸಲ್ಲಿಸಿದರು.

ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ದೇವಾಡಿಗ ಅವರು ಮಾತನಾಡಿ, ನಿಟ್ಟೆ ಶಶಿಧರ ಶೆಟ್ಟಿ ಅವರ ಸಂಘಟನಾತ್ಮಕ ಸಾಮರ್ಥ್ಯದಿಂದ ಇಂದು ಒಕ್ಕೂಟ ವಿಶ್ವ ಮಾನ್ಯತೆಯನ್ನು ಪಡೆದಿದೆ. ಅವರ ಅನುಪಸ್ಥಿ ಇನ್ನು ಮುಂದೆ ನಮ್ಮನ್ನು ಕಾಡಲಿದೆ, ಅವರ ಭಾಷಾಭಿಮಾನವು ಇತರರಿಗೆ ಪ್ರೇರಣೆಯಾಗಿದೆ ಅವರ ಹೆಸರು ಶಾಶ್ವತವಾಗಿ ಉಳಿಯುವಂತಹ ಕಾರ್ಯ ನಮ್ಮಿಂದ ನಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಪ್ರಸ್ತಾವನೆಗೈದು, ಅಕಾಡೆಮಿಯ ಸದಸ್ಯರಷ್ಟೇ ಅಲ್ಲ ಹಿರಿಯಣ್ಣರಾಗಿ ಭಾವನಾತ್ಮಕ ನಂಟನ್ನು ಹೊಂದಿರುವ ಸಹೃದಯತೆಯ ಪ್ರತೀಕವಾಗಿ ಶಶಿಧರ ಶೆಟ್ಟಿ ನಮ್ಮೊಂದಿಗೆ ಇದ್ದರು, ಅವರ ಆತ್ಮ ಸುತ್ತಮುತ್ತ ನಮ್ಮೊಂದಿಗೆ ಸದಾ ಇರುತ್ತದೆ ಎಂಬ ನಂಬಿಕೆ ನಮ್ಮದಾಗಿದೆ, ಅವರ ಜೀವನಗಾಥೆಯನ್ನು ಪುಸ್ತಕದ ರೂಪದಲ್ಲಿ ಹಾಗೂ ಪ್ರತೀ ವರ್ಷ ಅವರನ್ನು ಸ್ಮರಿಸುವ ಕೆಲಸಕ್ಕೆ ಎಲ್ಲರ ಸಹಾಯದಿಂದ ನಡೆಸಲಾಗುವುದು ಎಂದರು.

ಸಭೆಯಲ್ಲಿ ನುಡಿ ನಮನವನ್ನು ಲಯನ್ಸ್ ಜಿಲ್ಲಾ ಗವರ್ನರ್ ವಸಂತಕುಮಾರ್ ಶೆಟ್ಟಿ, ತುಳು ಒಕ್ಕೂಟದ ಅಧ್ಯಕ್ಷ ದಾಮೋದರ ನಿಸರ್ಗ, ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಸಂಪಾದಕ ಎಸ್.ಆರ್.ಬಂಡಿಮಾರ್, ತುಳು ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಸಂಸ್ಕಾರ ಭಾರತಿಯ ರಾಜ್ಯ ಪ್ರಭಾರಿ ಚಂದ್ರಶೇಖರ ಶೆಟ್ಟಿ, ಪದವಿನಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಶಾಂತ್ ಪೈ, ತುಳು ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್‌ಕುಮಾರ್ ಮಲ್ಲೂರು, ಮಂಗಳೂರು ಲಯನ್ಸ್ ಕ್ಲಬ್‌ನ ಅಧ್ಯಕ್ಷ ಸತೀಶ್ ರೈ, ಅಕಾಡೆಮಿಯ ಸದಸ್ಯರಾದ ಡಾ. ಆಕಾಶ್ ರಾಜ್ ಜೈನ್, ನಾಗೇಶ್ ಕುಲಾಲ್, ಶಶಿಧರ ಶೆಟ್ಟಿ ಅವರ ಮಗಳಾದ ಶ್ರಾವ್ಯ ಮಾತನಾಡಿದರು.

ಅಕಾಡೆಮಿಯ ಸದಸ್ಯರಾದ ಲೀಲಾಕ್ಷ ಕರ್ಕೇರ, ರಿಜಿಸ್ಟ್ರಾರ್ ಕವಿತಾ, ಮೂಲ್ಕಿ ವಿಜಯಾ ಕಾಲೇಜಿನ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷೆ ಶಮಿನಾ ಆಳ್ವಾ, ಮಂಗಳೂರು ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಸುಪ್ರೀತಾ ಜಿ. ಶೆಟ್ಟಿ, ಉಪಾಧ್ಯಕ್ಷ ಗುರುಪ್ರಸಾದ್ ಆಳ್ವಾ, ಯಕ್ಷಗಾನ ಸಂಘಟಕ ರವಿ ಅಲೆವೂರಾಯ, ಹಿರಿಯ ಸಾಹಿತಿ ಮುದ್ದು ಮೂಡುಬೆಳ್ಳೆ, ಡಾ. ರವೀಶ್ ಪರವ, ಜಾರ್ಜ್, ಮೊಯ್ದನ್ ಕುಂಜ್ಞ, ಯುವ ತುಳು ಸಂಘಟನೆಯ ರೋಶನ್, ಜೈ ತುಳುನಾಡು ಸಂಘಟನೆಯ ಪ್ರಮುಖರು, ಮತ್ತಿತರರು ಉಪಸ್ಥಿತರಿದ್ದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ರವಿ ಪಿ. ಎಂ. ವಂದಿಸಿದರು, ಸದಸ್ಯ, ಪತ್ರಕರ್ತ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

Gayathri SG

Recent Posts

ಹೊಳೆಯಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರು ಮೃತ್ಯು

ಹೊಳೆಯಲ್ಲಿ ಮುಳುಗಿ ಇಬ್ಬರು ಮೃತಪಟ್ಟಿರುವ ಘಟನೆ ಇಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕಡವಿನಕಟ್ಟೆಯಲ್ಲಿ ನಡೆದಿದೆ.

8 mins ago

ರಸ್ತೆ ತಿರುವಿನ ಅಪಾಯಕಾರಿ ವಿದ್ಯುತ್ ತಂತಿಗಳು: ಸುರಕ್ಷಿತ ಎತ್ತರಕ್ಕೆ ಏರಿಕೆ

ಸಾಣೂರಿನ ಲೈನ್ ಮ್ಯಾನ್  ಸುಭಾಷ್ ರವರು ತಮ್ಮ ತಂಡದೊಂದಿಗೆ ಮೇ 17 ರಂದು ಮುರತಂಗಡಿ ಇರುವತ್ತೂರು ರಸ್ತೆ ತಿರುವಿನಲ್ಲಿರುವ ವಿದ್ಯುತ್…

22 mins ago

ಕೇಸ್​ನಲ್ಲಿ ರಿಕವರಿ ಮಾಡಿದ್ದ ಅರ್ಧ ಕೆ.ಜಿ ಚಿನ್ನ ಕದ್ದ ಪೊಲೀಸ್​ ಪೇದೆ

ರಕ್ಷಕರೇ ಭಕ್ಷಕರಾದ ಘಟನೆಯೊಂದು ಕೋಲಾರದಲ್ಲಿ ನಡೆದಿದೆ . ಕಳವು ಕೇಸ್​ನಲ್ಲಿ ರಿಕವರಿ ಮಾಡಿದ್ದ 1 ಕೆಜಿ 408 ಗ್ರಾಂ ಚಿನ್ನದಲ್ಲಿ…

41 mins ago

ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ: ಕಂಗನಾ ರಣಾವತ್

ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ, ಬಡ ಕುಟುಂಬದಲ್ಲಿ ಹುಟ್ಟಿ ದೇಶದ ಕಲ್ಯಾಣ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಎಂದು ಹಿಮಾಚಲ…

57 mins ago

ವಾಸವಿ ಯುವಜನ ಸಂಘದಿಂದ ರಕ್ತದಾನ ಶಿಬಿರ : ದಿನೇಶ್‌ಗುಪ್ತ

ನಗರದ ವಾಸವಿ ಯುವಜನ ಸಂಘ ಮತ್ತು ವಾಸವಿ ಕ್ಲಬ್‌ ಆಶ್ರಯದಲ್ಲಿ ಇಂದು ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು…

1 hour ago

ಗ್ರಾಮಸ್ಥರ ಆರೋಗ್ಯ ಸುರಕ್ಷತೆಗೆ ಕ್ರಮಕೈಗೊಳ್ಳಲು ಬಿಜೆಪಿ ಒತ್ತಾಯ

ಡೆಂಗ್ಯೂ ಸೋಂಕಿನಿಂದ ಬಳಲುತ್ತಿರುವ ಗ್ರಾಮಕ್ಕೆ ತಜ್ಞ ವೈದ್ಯಾಧಿಕಾರಿ ಗಳ ತಂಡವನ್ನು ರಚಿಸಿ ನಿವಾಸಿಗಳ ಆರೋಗ್ಯ ಕಾಪಾಡಬೇಕು ಎಂದು ಎರೆಹಳ್ಳಿ ಗ್ರಾಮಸ್ಥರು…

2 hours ago