ಮಂಗಳೂರು

ನಾಳದಲ್ಲಿ ದೇವಸ್ಥಾನದಲ್ಲಿ ಬೆಳಕಿನ ಸೇವೆ ಆರಂಭ

ಬೆಳ್ತಂಗಡಿ: ಯಕ್ಷಗಾನ ಮೇಳದಿಂದ ಕಲಾವಿದರಿಗೆ ಶಕ್ತಿ ಸಿಗುತ್ತದೆಯಲ್ಲದೆ, ಕಲೆಯ ಪ್ರಸಾರವೂ ಆಗುತ್ತದೆ. ನಾಳ ದೇವಸ್ಥಾನದಲ್ಲಿ ಇದು ಐತಿಹಾಸಿಕ ಕ್ಷಣ ಎಂದು ಶಾಸಕ ಹರೀಶ ಪೂಂಜ ಹೇಳಿದರು.
ಗೇರುಕಟ್ಟೆ ಸನಿಹದ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಳದ ವಠಾರದಲ್ಲಿ ನಾಳ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯ ಶನಿವಾರ ರಾತ್ರಿ ನಡೆದ ಪ್ರಾರಂಭೋತ್ಸವದಲ್ಲಿ ಅವರು ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾಳ ಕ್ಷೇತ್ರದಲ್ಲಿ ಅನ್ನದಾನ ಈಗಾಗಲೇ ನಡೆಯುತ್ತಿದೆ. ಇದೀಗ ಗಜ್ಜೆ ಸೇವೆಯೂ ಇಂದಿನಿಂದ ಆರಂಭವಾಗಿದೆ. ಬೆಳ್ತಂಗಡಿ ತಾಲೂಕಿನಲ್ಲೀಗ ಧರ್ಮಸ್ಥಳ ಹಾಗೂ ನಾಳದಲ್ಲಿ ಎರಡು ಮೇಳಗಳು ಇವೆ ಎಂಬ ಹೆಮ್ಮೆ ನಮ್ಮೆಲ್ಲರದ್ದಾಗಿದೆ. ಮೇಳವನ್ನು ಹೊರಡಿಸುವುದು ಅಷ್ಟು ಸುಲಭವಲ್ಲ. ಆದರೂ ಕಲಾರಾಧನೆಯ ಬದ್ಧತೆಯಿಂದಾಗಿ ಇಲ್ಲಿನ ರಾಘವೇಂದ್ರ ಅಸ್ರಣ್ಣರು ದೇವಿಯ ಸೇವೆಗೆ ಕಟಿಬದ್ದರಾಗಿದ್ದಾರೆ. ಇವರ ಪ್ರಯತ್ನಕ್ಕೆ ನಾವೆಲ್ಲರೂ ಸೇವೆ ಆಟಗಳನ್ನು ಆಡಿಸುವುದರ ಮೂಲ ನಮ್ಮ ಸೇವೆಯನ್ನು ನೀಡಬೇಕಾಗಿದೆ ಎಂದರು.
ವಿದ್ಯಾರ್ಥಿ ದೆಸೆಯಲ್ಲಿ ತಾನು ಸುಮಾರು ಆರು ವರ್ಷಗಳ ಕಾಲ ಯಕ್ಷಗಾನದ ವಿದ್ಯಾರ್ಥಿಯಾಗಿದ್ದುದನ್ನು ನೆನಪಿಸಿಕೊಂಡ ಶಾಸಕರು, ನಾಳದಲ್ಲಿ ಮೊದಲ ಸೇವೆ ಆಟ ಆಡಿಸುವ ಭಾಗ್ಯ ದೊರಕಿರುವುದಕ್ಕೆ ಸಂತಸಪಟ್ಟರು.
ವೇ.ಮೂ. ರಾಮದಾಸ ಅಸ್ರಣ್ಣ ಖಂಡಿಗ ಅವರು, ಮೌಲಿಕತೆಯನ್ನು ಅಳವಡಿಸಿಕೊಳ್ಳಲು, ಜ್ಞಾನದ ಪ್ರಸಾರಕ್ಕೆ ಯಕ್ಷಗಾನದ ಕೊಡುಗೆ ಅಪಾರ. ನಮ್ಮ ಹಿರಿಯರಿಗೆ ಪೌರಾಣಿಕ ಕಥಾನಕಗಳ ಪರಿಚಯ ಆದದ್ದೇ ಯಕ್ಷಗಾನದಿಂದ ಎಂದರು.
ಅಧ್ಯಕ್ಷತೆಯನ್ನು ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ವರ ಜಿ. ವಹಿಸಿದ್ದರು.
ವೇದಿಕೆಯಲ್ಲಿ ಸುಳ್ಯ ಸ್ವಾತಿ ಲಾಡ್ಜ್‌ ಮಾಲಕ ಕೃಷ್ಣ ಸೋಮಯಾಜಿ, ಹಿರಿಯ ಕಲಾವಿದ ಗೋವಿಂದ ಭಟ್‌, ಹಿರಿಯ ಯಕ್ಷಗಾನ ಪ್ರೋತಾಹಕ ಧರ್ಮಸ್ಥಳ ಬಿ. ಭುಜಬಲಿ, ಕಳಿಯ ಗ್ರಾ.ಪಂ. ಅಧ್ಯಕ್ಷೆ ಸುಭಾಷಿಣಿ ಜನಾರ್ದನ ಗೌಡ, ಕಳಿಯ ಕೃ.ಪ.ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು, ಉದ್ಯಮಿ ಹೇಮಂತ ಕುಮಾರ್‌ ಗೇರುಕಟ್ಟೆ, ದೇವರಾಜ ಶೆಟ್ಟಿ ಮದ್ವ ಸುರತ್ಕಲ್‌, ಕಳಿಯ ಗ್ರಾ.ಪಂ. ಮಾಜಿ ಸದಸ್ಯ ಜನಾರ್ದನ ಪೂಜಾರಿ ಉಪಸ್ಥಿತರಿದ್ದರು.
ಹಿರಿಯ ಕಲಾವಿದ ಕೇಶವ ಶಕ್ತಿನಗರ ಇವರನ್ನು ಸಮ್ಮಾನಿಸಲಾಯಿತು.
ಮೇಳದ ಪ್ರಧಾನ ವ್ಯವಸ್ಥಾಪಕ ಹಾಗೂ ಕ್ಷೇತ್ರದ ಅರ್ಚಕ ವೇ.ಮೂ. ರಾಘವೇಂದ್ರ ಅಸ್ರಣ್ಣ ಸ್ವಾಗತಿಸಿದರು. ಪ್ರಬಂಧಕ ರಾಘವ ಹೆಚ್‌ ವಂದಿಸಿದರು. ರಾಜೇಶ್‌ ಪೆಂರ್ಬುಡ ಕಾರ್ಯಕ್ರಮ ನಿರ್ವಹಿಸಿದರು.ಬೆಳಿಗ್ಗೆ ವೇ.ಮೂ.ಬಾಲಕೃಷ್ಣ ಪಾಂಗಣ್ಣಾಯ ಗಣಹೋಮ ನೆರವೇರಿಸಿದರು. ಸಂಜೆ ಗೆಜ್ಜೆ ಮುಹೂರ್ತ ಮಾಡಲಾಯಿತು. ಬಳಿಕ ಕ್ಷೇತ್ರದ ರಥ ಬೀದಿಯಲ್ಲಿ ಪಾಂಡವಾಶ್ವಮೇಧ ಎಂಬ ಪ್ರಥಮ ಸೇವಾ ಬಯಲಾಟ ನಡೆಯಿತು.

ಈ ಮೇಳವು ಬಯಲಾಟ ಮೇಳವಾಗಿದ್ದು ಎಲ್ಲಾ ಪೌರಾಣಿಕ ಪ್ರಸಂಗಗಳನ್ನು, ಐತಿಹಾಸಿಕ ಪ್ರಸಂಗಗಳನ್ನು ಹಾಗೂ ಕಾಲ್ಪನಿಕ ಪ್ರಸಂಗಗಳನ್ನು ಆಡಿ ತೊರಿಸಲಿದೆ. ಹಿತ ಮಿತವಾದ ವೀಳ್ಯದ ಜೊತೆಗೆ ಉತ್ತಮ ಪ್ರದರ್ಶನ ನೀಡಲು ಬದ್ಧರಿದ್ದಾರೆ. ಅನುಭವಿ ಕಲಾವಿದರು ಮೇಳದಲ್ಲಿದ್ದು ಸ್ಥಳೀಯ ಕಲಾವಿದರು ಕೂಡ ಮೇಳದಲ್ಲಿದ್ದಾರೆ.

15ಈ ವರ್ಷ ಕ್ಷೇತ್ರದ ಪುಣ್ಯ ಕಥಾನಕ ನಾಳಕ್ಷೇತ್ರ ಮಹಾತ್ಮೆ, ಮಾಯಕೊದ ಸತ್ಯ ಕಲ್ಲುರ್ಟಿ, ಯಶಸ್ವಿ ಪ್ರಸಂಗ ತಿರುಮಲೆತ ತೀರ್ಥ, ಸಾಂಸಾರಿಕ ಕಥಾನಕ ದೈವ ಸಂಕಲ್ಪ ಹಾಗೂ ಕಲಾಪ್ರೇಮಿಗಳು ಇಷ್ಟ ಪಡುವ ಎಲ್ಲಾ ರೀತಿಯ ಪುರಾಣ ಐತಿಹಾಸಿಕ ಯಕ್ಷಗಾನ ಪ್ರಸಂಗಗಳು ಕಾಲಮಿತಿಯಲ್ಲಿ‌ ಹಾಗೂ ಸಂಪೂರ್ಣ ರಾತ್ರಿ ಪ್ರದರ್ಶನಗೊಳ್ಳಲಿದೆ.
ಭಾಗವತರಾಗಿ ಮೋಹನ ಕಲಂಬಾಡಿ, ಸ್ವರ ಸಿಂಧೂರಿ ಅಮೃತ ಅಡಿಗ, ನಿರಂಜನ ಬೆಳ್ಳೂರು, ಚೆಂಡೆ ಮದ್ದಳೆಯಲ್ಲಿ ಆನಂದ ಗುಡಿಗಾರ್ ಕೆರ್ವಾಶೆ, ಚಂದ್ರಶೇಖರ ಭಟ್ ಕೊಂಕಣಾಜೆ, ನವೀನಚಂದ್ರ ಮೊಗರ್ನಾಡು, ಸಂಗೀತದಲ್ಲಿ ಮುರಾರಿ ಪಂಜಿಗದ್ದೆ, ಹಾಸ್ಯದಲ್ಲಿ ರಘುನಾಥ ರೈ ಅಂಕತಡ್ಕ, ರವಿಭಂಡಾರಿ ಪೆರ್ಣ, ಸ್ತ್ರೀ ಪಾತ್ರದಲ್ಲಿ ಸೀತರಾಮ ಕಜೆಕೋಡಿ, ರವಿಚಂದ್ರ ಚೆಂಬು, ಸೂರ್ಯ ಶೆಟ್ಟಿ ಮಲ್ನಾಡ್, ಕಲಾವಿದರಾಗಿ ಪುಷ್ಪರಾಜ ಜೋಗಿ, ರಾಘವ ಹೆಚ್ ಗೇರುಕಟ್ಟೆ, ರಾಘವೇಂದ್ರ ಕಾರ್ಕಳ, ದಿನೇಶ್ ಬಂಟ್ವಾಳ, ರಾಘವೇಂದ್ರ ಅಸ್ರಣ್ಣ, ಶೇಖರ ಮಣಿಯಾಣಿ ಸುಳ್ಯ, ಮೋಹನ ಕವತ್ತಾರು, ಪ್ರದೀಪ್ ಬೆಳ್ಳಾರೆ, ಗೋಪಾಲ ರೈ ಬೆಳ್ಳಾರೆ, ಉಮೇಶ ವಳಕಡಮ, ಜಗದೀಶ ಸರಪಾಡಿ, ಕೃಷ್ಣಾನಂದ ಕುಡ್ವ, ಅತಿಥಿ ಕಲಾವಿದರಾಗಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಸತೀಶ್ ಪುಣಿಚಿತ್ತಾಯ, ಕುಮಾರ ಸುಬ್ರಹ್ಮಣ್ಯ ಭಟ್ ವಳಕುಂಜ ಮೊದಲಾದವರು ರಂಗವನ್ನು ಸಾಕ್ಷಾತ್ಕರಿಸಲಿದ್ದಾರೆ.

Swathi MG

Recent Posts

ಬಸ್ ಹತ್ತುವಾಗ ಆಯಾತಪ್ಪಿ ಬಿದ್ದ ಮಹಿಳೆ : ಚಕ್ರಕ್ಕೆ ಸಿಲುಕಿ ಸಾವು

ಬಸ್ ಹತ್ತುವಾಗ ಚಕ್ರಕ್ಕೆ ಸಿಲುಕಿ ದಾರುಣವಾಗಿ ಸಾವನಪ್ಪಿರುವ ಘಟನೆ . ಶಿವಮೊಗ್ಗದ ಸಾಗರ ತಾಲೂಕಿನ ಅಂಬಾರಗೋಡ್ಲು-ಹೊಳೆಬಾಗಿಲು ಬಳಿ ನಡೆದಿದೆ. ಧಾರವಾಡ…

12 mins ago

ಉಳುಮೆ ವೇಳೆ ಟ್ರ‍್ಯಾಕ್ಟರ್ ಗೆ ಸಿಲುಕಿ 8 ವರ್ಷದ ಬಾಲಕ ಸಾವು

ಅಜ್ಜಿ ಮನೆಗೆ ಬಂದಿದ್ದ ಬಾಲಕ ಟ್ರ‍್ಯಾಕ್ಟರ್‌ಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ದೇವರಸನಹಳ್ಳಿಯಲ್ಲಿ ನಡೆದಿದೆ.

17 mins ago

ಡಿವೈಡರ್‌ಗೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಹಾರಿದ ಕೆಎಸ್‌ಆರ್‌ಟಿಸಿ ಬಸ್‌

ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್‌ ಡಿವೈಡರ್‌ಗೆ ಡಿಕ್ಕಿ ಹೊಡೆದು ಹೆದ್ದಾರಿಯ ಪಕ್ಕದ ರಸ್ತೆಗೆ ಹಾರಿದ ಘಟನೆ ಬೆಂಗಳೂರು ಗ್ರಾಮಾಂತರ…

33 mins ago

ಪಾಪನಕೆರೆ ಒತ್ತುವರಿ ಆರೋಪ : ತಾಲೂಕು ಕಚೇರಿ ಮುಂದೆ ಪ್ರತಿಭಟನೆ

ಭೀಮನಗರದ ರೈತರು ಯುವ ಮುಖಂಡ ಕೃಷ್ಣಕುಮಾರ್ ನೇತೃತ್ವದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

49 mins ago

ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ: ಆರೋಪಿ ಬಿಭವ್‌ ಕುಮಾರ್‌ ವಶಕ್ಕೆ

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ನಡೆಸಿದ ಆರೋಪಿ, ಅರವಿಂದ್‌ ಕೇಜ್ರಿವಾಲ್‌ ಆಪ್ತ ಕಾರ್ಯದರ್ಶಿ…

1 hour ago

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ: ಪ್ರಯಾಣಿಕನ ಮೇಲೆ ಪ್ರಕರಣ ದಾಖಲು

ಬೆಂಗಳೂರಿನಿಂದ ಪುಣೆಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಚೆಕ್-ಇನ್ ಬ್ಯಾಗ್‌ನಲ್ಲಿ ಬಾಂಬ್ ಅಡಗಿಸಿಟ್ಟಿರುವುದಾಗಿ ಸುಳ್ಳು ಬೆದರಿಕೆ ಹಾಕಿ ಭೀತಿ…

1 hour ago