Categories: ಮಂಗಳೂರು

ಧರ್ಮದ ಚೌಕಟ್ಟು ಮೀರಬಾರದು: ಖಾಝಿ ಕೂರತ್ ತಂಙಳ್

ಬೆಳ್ತಂಗಡಿ; ನಮ್ಮ ಜೀವನದ ಎಲ್ಲಾ ಸಂಭ್ರಮದ ಜೊತೆಗೆ ಇಸ್ಲಾಂ ಧರ್ಮದ ಮೂಲ ಆಶಯ ಮತ್ತು ಚೌಕಟ್ಟು ಮೀರಬಾರದು ಎಂದು
ದ.ಕ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ, ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಙಳ್ ನಿರ್ದೇಶಿಸಿದ್ದಾರೆ.

ಕಾಜೂರು ಮತ್ತು ಕಿಲ್ಲೂರು ಜಂಟಿ ಜಮಾಅತ್ ಸಹಯೋಗದೊಂದಿಗೆ ಫೆ.18 ರಿಂದ ಫೆ‌.27 ರ ವರೆಗೆ ನಡೆಯಲಿರುವ ಕಾಜೂರು ಮಖಾಂ ಶರೀಫ್ ನ 2022 ನೇ ಸಾಲಿನ ಉರೂಸ್ ಮಹಾ ಸಂಭ್ರಮದ ಪ್ರಯುಕ್ತ ಫೆ.18 ರಂದು ನಡೆದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಖಾಝಿ ಎಂದರೆ ಧರ್ಮದ ನ್ಯಾಯಾಧೀಶರಿದ್ದಂತೆ. ಅವರ ಆಜ್ಞೆ ಪಾಲಿಸುವ ಧರ್ಮ ಸಂಸ್ಕಾರದ ನಡೆ ನಮ್ಮದಾಗಬೇಕು. ದರ್ಗಾ ಶರೀಫ್ ನಲ್ಲಿ‌ ನೆಲೆಗೊಂಡಿರುವ ಅಲ್ಲಾಹನ ಔಲಿಯಾಗಳಿಗೆ ಎಂದೂ ಉರೂಸೇ ಆಗಿದೆ. ನಮ್ಮ ಮೇಳ್ಮೆಗಾಗಿ ಮಾತ್ರ ನಾವು ವರ್ಷಕ್ಕೊಮ್ಮೆ ಆಚರಿಸುವುದಾಗಿದೆ ಎಂದವರು ತಿಳಿಸಿದರು.

ಉರೂಸ್ ಸಮಾರಂಭ ಉದ್ಘಾಟಿಸಿದ ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಯ್ಯಿದ್ ಸಾದಾತ್ ತಂಙಳ್ ಮಾತನಾಡಿ, ಉರೂಸ್ ಎಂಬುದು ಭೂ‌ಲೋಕಕ್ಕೆ ಸಂಬಂಧಿಸಿದ್ದಲ್ಲ. ಇದರ ಉದ್ಧೇಶ ಪರಲೋಕ ವಿಜಯವಾಗಿದೆ. ಇಲ್ಲಿನ ಪುಣ್ಯ ಮಣ್ಣಿನಲ್ಲಿ ಅಂತ್ಯವಿಶ್ರಾಂತಿ ಹೊಂದುತ್ತಿರುವ ಅಲ್ಲಾಹನ‌ ಇಷ್ಟದಾಸರಾದ ಔಲಿಯಾಗಳ ನಡೆ ನುಡಿ ಪಾಲಿಸಿ ಪರಲೋಕದ ವಿಜಯಕ್ಕಾಗಿ ದುಡಿಯೋಣ ಎಂದರು.

ಕಾಜೂರು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು‌ ಇಬ್ರಾಹಿಂ ಧ್ವಜಾರೋಹಣ ನೆರವೇರಿಸಿ ಬಳಿಕದ ಸಮಾರಂಭದಲ್ಲಿ ಸ್ವಾಗತಿಸಿ ಪ್ರಸ್ತಾವನೆಗೈದರು.
ಕಾಜೂರು ಶಿಕ್ಷಣ‌ ಸಂಸ್ಥೆಗಳ ಪ್ರಾಚಾರ್ಯ ಹಾಗೂ ಧರ್ಮಗುರುಗಳಾದ ಸಯ್ಯಿದ್ ಕಾಜೂರು ತಂಙಳ್ ಶುಭ ಕೋರಿದರು.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಕಾಜೂರು ಮಾಜಿ ಅಧ್ಯಕ್ಷ ಕೆ ಶೇಖಬ್ಬ ಕುಕ್ಕಾವು, ಕಿಲ್ಲೂರು ಜಮಾಅತ್ ಮಾಜಿ ಅಧ್ಯಕ್ಷ ಎಂ.ಎ‌ ಕಾಸಿಂ ಮಲ್ಲಿಗೆಮನೆ, ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ, ಕರ್ನಾಟಕ ಮುಸ್ಲಿಂ ಜಮಾಅತ್ ತಾ.‌ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫಿ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಸ್ವಾಗತಿಸಿ ಪ್ರಸ್ತಾಪಿಸಿದರು.ವೇದಿಕೆಯಲ್ಲಿ ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಕೋಶಾಧಿಕಾರಿ ಕೆ.ಎಮ್ ಕಮಾಲ್, ಉಪಾಧ್ಯಕ್ಷ ಬಿ.ಹೆಚ್ ಅಬೂಬಕ್ಕರ್ ಹಾಜಿ ಕಿಲ್ಲೂರು, ಜೊತೆ ಕಾರ್ಯದರ್ಶಿ ಅಶ್ರಫ್ ಕಿಲ್ಲೂರು, ಕಾಜೂರು ಮಾಜಿ ಅಧ್ಯಕ್ಷರುಗಳಾದ ಬಿ.ಎ ಯೂಸುಫ್ ಶರೀಫ್, ಕೆ.ಯು ಉಮರ್ ಸಖಾಫಿ,‌ ಇಬ್ರಾಹಿಂ ಮುಸ್ಲಿಯಾರ್, ಎಸ್‌ಎಮ್‌ಎ ಪದಾಧಿಕಾರಿ ವಝೀರ್ ಬಂಗಾಡಿ, ಕಾಜೂರು ಮುದರ್ರಿಸ್ ಅಬ್ದುಲ್ ಖಾದರ್ ಸ‌ಅದಿ, ಮುಂಡಾಜೆ ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಮೀದ್ ನೆಕ್ಕರೆ, ಮುಹಮ್ಮದ್ ಕಿಲ್ಲೂರು ಮೊದಲಾದವರು ಉಪಸ್ಥಿತರಿದ್ದರು.
ಕಾಜೂರು ಸಹಾಯಕ ಧರ್ಮಗುರು ರಶೀದ್ ಮದನಿ ಕಾರ್ಯಕ್ರಮ ನಿರೂಪಿಸಿದರು. ಕಿಲ್ಲೂರು ಮಸ್ಜಿದ್ ಧರ್ಮಗುರುಗಳಾದ ರಫೀಕ್ ಸ‌ಅದಿ ಖಿರಾಅತ್ ಪಠಿಸಿದರು. ಪ್ರ.ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು ವಂದಿಸಿದರು.
ಬಾಕ್ಸ್;
ಉದ್ಘಾಟನೆಗೂ ಮುನ್ನ ಕಾಜೂರು ಎರಡೂ ದರ್ಗಾಶರೀಫ್ ನಲ್ಲಿ ಕೂರತ್ ತಂಙಳ್ ನೇತೃತ್ವದಲ್ಲಿ ವಿಶ್ವ ಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಸಂಪ್ರದಾಯದಂತೆ ಶುಕ್ರವಾರದ ಜುಮಾ ನಮಾಝ್ ನಂತರ ಕಿಲ್ಲೂರು ಜಮಾಅತ್ ನಿಂದ ಸಂದಲ್ ಮೆರವಣಿಗೆ ಆಗಮಿಸಿ ಸಾಮೂಹಿಕ ಅನ್ನದಾನ ನಡೆಯಿತು.

Swathi MG

Recent Posts

ಮ್ಯಾಗ್ನಸ್ ಕಾರ್ಲ್‌ಸನ್‌ ವಿರುದ್ಧ ಆರ್.ಪ್ರಜ್ಞಾನಂದಗೆ ಮತ್ತೊಂದು ಗೆಲುವು

ಸೂಪರ್‌ಬಿಟ್‌ ರ್‍ಯಾಪಿಡ್ ಮತ್ತು ಬ್ಲಿಟ್ಜ್‌ ಚೆಸ್‌ ಟೂರ್ನಿಯಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್‌ ವಿರುದ್ಧ ಭಾರತದ ಗ್ರ್ಯಾಂಡ್…

4 mins ago

ನಟ ಚೇತನ್​ ಚಂದ್ರ ಮೇಲೆ 20 ಜನರಿಂದ ಹಲ್ಲೆ : ದೂರು ದಾಖಲು

ಕನ್ನಡ ಸಿನಿಮಾ ಹಾಗೂ ಕಿರುತೆರೆಯ ಯುವ ನಟ ಚೇತನ್ ಚಂದ್ರ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ನಡೆದಿದೆ. ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿ…

16 mins ago

ಪೆನ್​ಡ್ರೈವ್ ಹಂಚಿಕೆ ಪ್ರಕರಣ : ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಹರಿಬಿಟ್ಟ ಆರೋಪದಲ್ಲಿ ಬಂಧನವಾಗಿರುವ ಆರೋಪಿಗಳಾದ ಚೇತನ್ ಹಾಗೂ ಲಿಖಿತ್‌ಗೆ 14…

30 mins ago

ಇಂದಿನ ರಾಶಿ ಭವಿಷ್ಯ : ಈ ರಾಶಿಗೆ ಹಣಕಾಸಿನ ಸಮಸ್ಯೆ

ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 13 ಮೇ​​ 2024ರ…

42 mins ago

96 ಲೋಕಸಭಾ ಕ್ಷೇತ್ರಗಳಲ್ಲಿ ಇಂದು 4ನೇ ಹಂತದ ಮತದಾನ

ಲೋಕಸಭೆ ಚುನಾವಣೆಯ (4ನೇ ಹಂತವು ಇಂದು (ಮೇ 13) 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿದೆ. ಇಂದು 96…

54 mins ago

ಅನೈತಿಕ ಸಂಬಂಧ ಶಂಕೆ: ಬೀದರ್​​ನಲ್ಲಿ ಯುವಕರಿಂದ ನೈತಿಕ ಪೊಲೀಸ್​ ಗಿರಿ

ಹಿಂದೂ ಯುವಕನ ಜೊತೆ ಮುಸ್ಲಿಂ ಸಮುದಾಯದ ಮಹಿಳೆ ಕುಳಿತಿದಕ್ಕೆ ಅದೇ ಕೋಮಿನ ಯುವಕರ ಗುಂಪೊಂದು ಹಲ್ಲೆ ನಡೆಸಿ, ನೈತಿಕ ಪೊಲೀಸ್​​…

9 hours ago