Categories: ಮಂಗಳೂರು

ದ.ಕ : ಜಿಲ್ಲಾ ಪತ್ರಕರ್ತರ ಸಮ್ಮೇಳನ ಸಾಧನೆ ಸಂಭ್ರಮ-2021

ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇದರ ಆಶ್ರಯದಲ್ಲಿ ಜಿಲ್ಲಾ ಪತ್ರಕರ್ತರ ಸಮ್ಮೇಳನ ಸಾಧನೆ ಸಂಭ್ರಮ-2021. ದಿನಾಂಕ: 28 ಡಿಸೆಂಬರ್  2021ಮಂಗಳವಾರ, ಬೆಳಗ್ಗೆ  10:00ರಿಂದ ಸಂಜೆ 4:30ರ ತನಕ ಕುದ್ಮುಲ್ ರಂಗರಾವ್ ಪುರಭವನದಲ್ಲಿ  ನಡೆಯಲಿದೆ‌ ಪೂರ್ವಾಹ್ನ 10:00 ಗಂಟೆಗೆ ಸಮ್ಮೇಳನದ ಉದ್ಘಾಟನೆಯನ್ನು ಕರ್ನಾಟಕದ ಗೃಹ ಸಚಿವರಾದ  ಆರಗ ಜ್ಞಾನೇಂದ್ರ ನೆರವೇರಿಸಲಿರುವರು. ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಜಿಲ್ಲಾ ಸಂಘದ ಮೂರು ವರ್ಷಗಳ ಪ್ರಗತಿಯ ವಿವರಗಳನ್ನು ಒಳಗೊಂಡ ವಿಶೇಷ ಸಂಚಿಕೆ ‘ಸಾಧನೆ’ ಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅನಾವರಣಗೊಳಿಸುವರು. ಸಮ್ಮೇಳನದ ಮೆರವಣಿಗೆಯ ಉದ್ಘಾಟನೆಯನ್ನು ಶಾಸಕರುಗಳಾದ ಡಿ.ವೇದವ್ಯಾಸ ಕಾಮತ್ ಮತ್ತು ಡಾ.ವೈ.ಭರತ್ ಶೆಟ್ಟಿ ನೆರವೇರಿಸಲಿರುವರು. ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ವಿದ್ಯಾರ್ಥಿ ಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಿದ್ದಾರೆ.
ಮನೋಹರ ಪ್ರಸಾದರ ಕೃತಿ ಭಾವಚಿತ್ರಯಾನವನ್ನು  ಕರಾವಳಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ್ ರಾವ್  ಬಿಡುಗಡೆಗೊಳಿಸುವರು. ಪತ್ರಿಕಾ ಛಾಯಾಚಿತ್ರ ಪ್ರದರ್ಶನ ಉದ್ಘಾಟನೆಯನ್ನು ಮಂಗಳೂರು ಶಾಸಕ  ಯು.ಟಿ.ಖಾದರ್ ಬಿಡುಗಡೆಗೊಳಿಸುವರು.

*ಕುತ್ಲೂರು ಶಾಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ವಿತರಣೆ: ಡಾ. ಎಂ.ಮೋಹನ್ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡಬಿದ್ರೆ
*ಹಸಿರು ಉಸಿರು ಉದ್ಘಾಟನೆ:  ಐಕಳ ಹರೀಶ್ ಶೆಟ್ಟಿ, ಅಧ್ಯಕ್ಷರು,ಜಾಗತಿಕ ಬಂಟರ ಒಕ್ಕೂಟ
*ಮಡಪ್ಪಾಡಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ: ಎಸ್.ಅಂಗಾರ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಖಾತೆ ಸಚಿವರು
*ಕಾರ್ಮಿಕ ಇಲಾಖೆಯ ಕಿಟ್ ವಿತರಣೆ: ಹರೀಶ್ ಪೂಂಜಾ ಶಾಸಕರು, ಬೆಳ್ತಂಗಡಿ
*ಪುಸ್ತಕ ಪ್ರದರ್ಶನ ಉದ್ಘಾಟನೆ: ಡಾ.ಮಂಜುನಾಥ ಭಂಡಾರಿ ವಿಧಾನ ಪರಿಷತ್ ಸದಸ್ಯರು

*ಮುಖ್ಯ ಅತಿಥಿಗಳು : ಸದಾಶಿವ ಶೆಣೈ, ಅಧ್ಯಕ್ಷರು,ಕರ್ನಾಟಕ ಮಾಧ್ಯಮ ಅಕಾಡೆಮಿ, ಬೆಂಗಳೂರು

: ಶಿವಾನಂದ ತಗಡೂರು, ಅಧ್ಯಕ್ಷರು,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ರಿ),ಬೆಂಗಳೂರು
:ಬಿ.ವಿ.ಮಲ್ಲಿಕಾರ್ಜುನ ಯ್ಯ, ಅಧ್ಯಕ್ಷರು,ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ(IFWJ), ಹೊಸದಿಲ್ಲಿ
:ಹೆಚ್.ಬಿ.ಮದನ ಗೌಡ, ಸಂಚಾಲಕರು,ಏಶ್ಯನ್ ಪತ್ರಕರ್ತರ ಒಕ್ಕೂಟ
:ರೋನ್ಸ್ ಬಂಟ್ವಾಳ, ಅಧ್ಯಕ್ಷರು,ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘ(ರಿ)

ಪುಷ್ಪರಾಜ್ ಜೈನ್ ಅಧ್ಯಕ್ಷರು ಕ್ರೆಡೈ ಮಂಗಳೂರು
ಎರಡು ಗೋಷ್ಠಿ ಗಳು

ಮೊದಲ ಗೋಷ್ಠಿ: ಕರಾವಳಿ ಅಭಿವೃದ್ಧಿ ಬಗ್ಗೆ ಪೂರ್ವಾಹ್ನ 11:30ರಿಂದ 1:00 ಗಂಟೆ ವರೆಗೆ
ಶಿಕ್ಷಣ: ರಾಜಶೇಖರ ಹೆಬ್ಬಾರ್, ಪ್ರಾಂಶುಪಾಲರು, ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ
ಪ್ರವಾಸೋದ್ಯಮ: ಯತೀಶ್ ಬೈಕಂಪಾಡಿ, ಪತ್ರಿಕೋದ್ಯಮ: ವೇಣು ಶರ್ಮಾ, ಹಿರಿಯ ಪತ್ರಕರ್ತರು

ಅಪರಾಹ್ನ 2:30 ರಿಂದ 4:00 ಗೋಷ್ಠಿ-2:ಮಾಧ್ಯಮ-ಸಾಮಾಜಿಕ ಹೊಣೆಗಾರಿಕೆ
ವಿಷಯ ಮಂಡನೆ: ಲೋಕೇಶ್ ಕಾಯರ್ಗ, ಸಂಪಾದಕರು,ಪ್ರಜಾ ನುಡಿ, ಮೈಸೂರು
ಶ್ರೀಮತಿ ಕೋಡಿಬೆಟ್ಟು ರಾಜಲಕ್ಷ್ಮಿ, ಮಂಗಳೂರಿನ ವಿವಿಧ ಪತ್ರಿಕೆ/ ಮಾಧ್ಯಮ ಸಂಸ್ಥೆಗಳ ಬ್ಯುರೊ ಮುಖ್ಯಸ್ಥರು, ಸಂವಾದದಲ್ಲಿ ಭಾಗವಹಿಸುವವರು.

ಸಂಜೆ 4:00ರಿಂದ ಸಮಾರೋಪ ಸಮಾರಂಭದಲ್ಲಿ ಹಿರಿಯ ಪತ್ರಕರ್ತರಿಗೆ ಸನ್ಮಾನ ನಡೆಯಲಿದ್ದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ  ಸುನೀಲ್ ಕುಮಾರ್ ಸನ್ಮಾನ ನೆರವೇರಿಸಲಿರುವರು.

ಮುಖ್ಯ ಅತಿಥಿಗಳಾಗಿ ಸಚಿವರಾದ ಕೋಟ ಶ್ರೀ ನಿವಾಸ ಪೂಜಾರಿ,ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಉನ್ನತ ಅಧಿಕಾರಿಗಳು, ಭಾಗವಹಿಸಲಿದ್ದಾರೆ.
ಮಂಗಳೂರು ವಿವಿ ಉಪಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಸಮಾರೋಪ ಭಾಷಣ ಮಾಡಲಿರುವರು.ಶಾಸಕರಾದ ಸಂಜೀವ ಮಠ0ದೂರು, ರಾಜೇಶ್ ನಾಯ್ಕ್ ಉಮಾನಾಥ  ಕೋಟ್ಯಾನ್ , ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಕೆ.ವಿ ರಾಜೇಂದ್ರ ,ಮಂಗಳೂರು ಪೊಲೀಸ್  ಆಯುಕ್ತ  ಶಶಿ ಕುಮಾರ್ , ದಕ್ಷಿಣ ಕನ್ನಡ ಜಿಲ್ಲಾ  ಪೊಲೀಸ್  ವರಿಸ್ಟ್ಟಾಧಿಕಾರಿ  ಸೋನಾವಣೆ ಹೃಷಿಕೇಶ್ ಭಗವಾನ್ ,ದಕ್ಷಿಣ ಕನ್ನಡ ಜಿಲ್ಲಾ  ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕುಮಾರ ,ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಅದಾನಿ ಯುಪಿಸಿಎಲ್ ಅಧ್ಯಕ್ಷ ಕಿಶೋರ್ ಆಳ್ವ,, ಶ್ರೀ ಕೃಷ್ಣ ಡೈರಿ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ಪ್ರದೀಪ್ ಪೈ, ಮುಖ್ಯ ಅತಿಥಿ  ಗಳಾಗಿ ಭಾಗವಹಿಸಲಿದ್ದಾರೆ ಮಧ್ಯಾಹ್ನ 1 ಗಂಟೆಯಿಂದ 2 ಗಂಟೆ ವರೆಗೆ ರಾಜೇಶ್ ಮಳಿ ದಂಪತಿಗಳಿಂದ  ಮ್ಯಾಜಿಕ್  ಶೋ ಸೇರಿದಂತೆ  ವಿವಿಧ ಸಾಂಸ್ಕ್ರತಿಕ ನಡೆಯಲಿದೆ .

ಈ ಸಮ್ಮೇಳನದಲ್ಲಿ ಪತ್ರಕರ್ತರು,  ಜಿಲ್ಲೆಯ ವಿವಿಧ ಕಾಲೇಜುಗಳ ಪತ್ರಿಕೋದ್ಯಮ ವಿಭಾಗದ ಮುಖ್ಯ ಸ್ಥರು,ಉಪನ್ಯಾಸ ಕರು ಮತ್ತು ವಿದ್ಯಾರ್ಥಿ ಗಳು ಸೇರಿದಂತೆ 500ಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ.

Sneha Gowda

Recent Posts

ಮದುವೆಯಾದ ನಾಲ್ಕೇ ವರ್ಷಕ್ಕೆ ವಿಚ್ಛೇದನ ಪಡೆದುಕೊಂಡ ಯಶ್‌ ಹೀರೋಯಿನ್‌!

ಸಿನಿಮಾ ರಂಗದಲ್ಲಿ ಮತ್ತೊಂದು ವಿಚ್ಛೇದನ ಖಚಿತವಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.

3 hours ago

ಐದು ಮಂದಿಗೆ ವೆಸ್ಟ್ ನೈಲ್ ಜ್ವರ ಪತ್ತೆ; ಅಲರ್ಟ್ ಆದ ಸರಕಾರ

ವೆಸ್ಟ್ ನೈಲ್ ಫೀವರ್ ನ ಐದು ಪ್ರಕರಣಗಳು ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಇದೀಗ ಆತಂಕಕ್ಕೆ ಕಾರಣವಾಗಿದೆ.

3 hours ago

ಆಂಬುಲೆನ್ಸ್ ನೌಕರರ ಮುಷ್ಕರ ತಾತ್ಕಾಲಿಕ ಮುಂದೂಡಿಕೆ

ಬಾಕಿ ಉಳಿಸಿಕೊಂಡಿರುವ ವೇತನ ಪಾವತಿಗೆ ಆಗ್ರಹಿಸಿ 108-ಆರೋಗ್ಯ ಕವಚ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ.

3 hours ago

ಬೆಂಗಳೂರಿನಲ್ಲಿ ರೌಡಿಶೀಟರ್​ ಕಾರ್ತಿಕೇಯನ್ ಬರ್ಬರ ಹತ್ಯೆ

ನಗರದ ಬಾಣಸವಾಡಿ ವ್ಯಾಪ್ತಿಯ ರಾಮಸ್ವಾಮಿ ಪಾಳ್ಯದಲ್ಲಿ ರೌಡಿಶೀಟರ್​ ಕಾರ್ತಿಕೇಯನ್(40) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಲಾಗಿದೆ.

4 hours ago

ಪಕ್ಷದ ಬ್ಯಾಡ್ಜ್ ಧರಿಸಿ ಮತದಾನ; ಖೂಬಾ ವಿರುದ್ಧ ಪ್ರಕರಣ ದಾಖಲು

ಬೀದರ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಅವರು ತಮ್ಮ ಅಂಗಿ ಮೇಲೆ ಪಕ್ಷದ ಚಿಹ್ನೆ…

4 hours ago

ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ

ಬೀದರ್ ಲೋಕಸಭಾ ಕ್ಷೇತ್ರದ ಒಟ್ಟು ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಮೇ 7 ರಂದು ಶಾಂತಿಯುತವಾಗಿ ಮತದಾನ ನಡೆಯಿತು.

5 hours ago