Categories: ಮಂಗಳೂರು

ಡಾ. ಟಿ ಎನ್ ತುಳಪುಳೆ ಓರ್ವ ಶ್ರೇಷ್ಠ ಹೃದಯವಂತ ವೈದ್ಯ

ಬೆಳ್ತಂಗಡಿ: ಬೆಳ್ತಂಗಡಿ ಜೇಸೀ ಭವನದಲ್ಲಿ ಜ.17 ರಂದು ನಿಧನರಾದ ವೈದ್ಯ ವಿಶಾರದ, ಸಾಹಿತಿ, ಬಹುಭಾಷಾ ಪಂಡಿತ ಡಾ. ಟಿ ಎನ್ ತುಳಪುಳೆಯವರಿಗೆ ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನುಡಿನಮನ ಸಲ್ಲಿಕೆಯ ಶ್ರದ್ಧಾಂಜಲಿ ಸಭೆ ನಡೆಯಿತು. ಮೊದಲಿಗೆ ಅಗಲಿದ ಚೇತನಕ್ಕೆ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ದ ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ ಪಿ ಶ್ರೀನಾಥ್ ರವರು ಮಾತಾನಾಡುತ್ತಾ, ಡಾ. ಟಿ ಎನ್ ತುಳಪುಳೆಯವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ರೂ. ಐವತ್ತು ಸಾವಿರದ ದತ್ತಿನಿಧಿ ಸ್ಥಾಪಿಸಿರುವುದು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಬಹಳ ದೊಡ್ಡ ಕೊಡುಗೆ ಎಂದು ದಿವಂಗತರ ಸಾಧನೆಗಳನ್ನು ಉಲ್ಲೇಖಿಸಿ ನುಡಿನಮನ ಸಲ್ಲಿಸಿದರು.

ನಿವೃತ್ತ ಪ್ರಾಧ್ಯಾಪಕ , ಸಾಹಿತಿ ಪ್ರೊ. ಎನ್ ಜಿ ಪಟವರ್ಧನ್ ರವರು ಮಾತನಾಡುತ್ತಾ , ಡಾ.ತುಳಪುಳೆಯವರು ಲೇಖಕರು ಮತ್ತು ಜ್ಯೋತಿಷಿಗಳು. ಅವರ ಬರಹಗಳು ಆಳವಾದ ಅಧ್ಯಯನ ಮಾಡಿದ ವಿದ್ವತ್ಪೂರ್ಣ ಬರಹಗಳು. ಅವರ ವಾಂಛಾ ಕಲ್ಪತರು ಒಂದು ಶ್ರೇಷ್ಠ ಕೃತಿ. ಭಾಗವತರಾಗಿ, ಹರಿದಾಸರಾಗಿ ಪ್ರಸಿದ್ಧರಾಗಿದ್ದು, ವೈಯಕ್ತಿಕವಾಗಿ ಮನೆಯಲ್ಲೇ ಬಹಳ ದೊಡ್ಡ ಗ್ರಂಥ ಭಂಡಾರ ಹೊಂದಿದ್ದ ತುಳಪುಳೆಯವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಎಂದು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಡಾ. ತುಳಪುಳೆಯವರು ಬೆಳ್ತಂಗಡಿಯ ಜ್ಞಾನದ, ಸುಜ್ಞಾನದ ಬೆಳಕು. ಇವರದು ಆದರ್ಶ ಮತ್ತು ಸಾಧನೆಯ ಬದುಕು. ಇವತ್ತು ಬುದ್ಧಿವಂತರು, ವಿದ್ಯಾವಂತರು, ಚಿಂತಕರು, ವಿಚಾರವಂತರು ಇದ್ದಾರೆ. ಆದರೆ ಹೃದಯವಂತರು ಬೇಕಾಗಿದ್ದಾರೆ. ಇಂತಹ ಕಾಲಮಾನದಲ್ಲಿ ಬದುಕಿದ ತುಳಪುಳೆಯವರು ಓರ್ವ ಶ್ರೇಷ್ಠ ಹೃದಯವಂತ ಸರಸ್ವತಿಯ ವರಪುತ್ರರು. ಇವರು ದೇಹ, ಮನಸ್ಸು ಮತ್ತು ಮಾತುಗಳ ಶೌಚವನ್ನು ಕಾಪಾಡಿಕೊಂಡು ಬದುಕಿದ ಸರಳ,ಸಾತ್ವಿಕ ಮತ್ತು ಸಚ್ಚಾರಿತ್ರ್ಯವಂತರು. ವೈದ್ಯರಾಗಿ ವೃತ್ತಿ ಧರ್ಮ ಪಾಲನೆ ಮಾಡಿ ವೈದ್ಯ ವೃತ್ತಿಗೆ ನ್ಯಾಯ ನೀಡಿದ ಅನುಕರಣೀಯರು ಎಂದು ನಿವೃತ್ತ ಪ್ರಾಂಶುಪಾಲರಾದ ಬೆಳ್ತಂಗಡಿಯ ಕೃಷ್ಣಪ್ಪ ಪೂಜಾರಿಯವರು ತನ್ನ ನುಡಿನಮನ ಮಾತುಗಳಲ್ಲಿ ಡಾ. ತುಳಪುಳೆಯವರ ವ್ಯಕ್ತಿತ್ವವನ್ನು ಅನಾವರಣಗೊಳಿಸಿದರು.

ಸಭೆಯಲ್ಲಿ ಸಂಪಾದಕ ದೇವಿಪ್ರಸಾದ್ , ನಿವೃತ್ತ ಪ್ರಾಚಾರ್ಯರಾದ ಗಣಪತಿ ಭಟ್ ಕುಳಮರ್ವ, ವಾಣಿ ಕಾಲೇಜಿನ ಪ್ರಾಚಾರ್ಯರಾದ ಡಿ. ಯದುಪತಿ ಗೌಡ, ನಿವೃತ್ತ ಶಿಕ್ಷಕರಾದ ಗೋವಿಂದ ದಾಮ್ಲೆ, ಮೃತರ ಮನೆಯವರಾದ ಡಾ. ಎನ್ ಎಂ ತುಳಪುಳೆ ಮೊದಲಾದವರು ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಪನ್ಯಾಸಕರು ಮತ್ತು ಬೆಳ್ತಂಗಡಿ ಮಂಜುಶ್ರೀ ಜೆಸಿಐನ ಕಾರ್ಯದರ್ಶಿಗಳೂ ಆದ ಜೇಸೀ ಶಂಕರ್ ರವರು ಸಭೆಯಲ್ಲಿ ಉಪಸ್ಥಿತರಿದ್ದರು. ಬೆಳಾಲು ಶ್ರೀ ಧ.ಮ. ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ರಾಮಕೃಷ್ಣ ಭಟ್ ಚೊಕ್ಕಾಡಿಯವರು ಕಾರ್ಯಕ್ರಮ ಸಂಯೋಜಿಸಿದರು.

Sneha Gowda

Recent Posts

ಸೈಡ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಸರ್ಕಾರಿ ಬಸ್ ಅಡ್ಡಗಟ್ಟಿ ಚಾಲಕನಿಗೆ ಹಲ್ಲೆ

ಕಾರಿನ ಚಾಲಕನಿಗೆ ಸೈಡ್ ಕೊಟ್ಟಿಲ್ಲ ಎಂಬ ಕಾರಣಕ್ಕಾಗಿ ಕೆ.ಎಸ್.ಆರ್.ಟಿ.ಸಿ. ಬಸ್ಸನ್ನು ತಡೆದು ಅದರ ಚಾಲಕನಿಗೆ ಹಲ್ಲೆ ನಡೆಸಿ, ಬಸ್ಸಿಗೆ ಹಾನಿಗೈದ…

6 mins ago

ಲವ್‌ ಮ್ಯಾರೇಜ್‌ ಆದ್ರೂ ಗಂಡನ ಖಾಸಗಿ ಭಾಗ ಸುಟ್ಟು ಕಾಟ ಕೊಡ್ತಿದ್ದ ಪತ್ನಿ !

ಮುಸ್ಲಿಂ ಮಹಿಳೆಯೊಬ್ಬಳು ತನ್ನ ಗಂಡನಿಗೆ ಚಿತ್ರಹಿಂಸೆ ನೀಡಿ, ಆತನ ಖಾಸಗಿ ಭಾಗಗಳಿಗೆ ಹಾನಿ ಮಾಡಿದ್ದಾಳೆ. ಪತಿಯನ್ನು ಬೆತ್ತಲೆ ಮಾಡಿ, ಮಂಚದ…

6 mins ago

ಮಹಿಳಾ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ ಸ್ಥಾಪನೆ

ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರ ನೆರವಿಗಾಗಿ ವಿಶೇಷ ತನಿಖಾ ತಂಡವು ಸಹಾಯವಾಣಿ…

16 mins ago

ಜುಲೈ 5ರಂದು ಜಪಾನ್‌ನಲ್ಲಿ ರಿಲೀಸ್ ಆಗಲಿದೆ ‘ಸಲಾರ್’

ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಕಳೆದ ವರ್ಷ ಡಿಸೆಂಬರ್ 22ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಿತ್ತು, ಈಗ ಈ ಚಿತ್ರದ ಸವಾರಿ ಜಪಾನ್‌ನತ್ತ…

24 mins ago

ಎಸ್‌ಐಟಿ ತನಿಖೆ ದಿಕ್ಕು ತಪ್ಪುತ್ತಿದೆ: ಜೆಡಿಎಸ್ ಅಸಮಾಧಾನ

ಮಹಿಳೆಯ ಅಪಹರಣ ಹಾಗೂ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಎಸ್‌ಐಟಿಗೆ ವಹಿಸಿರುವುದು ಸ್ವಾಗತಾರ್ಹ ಆದರೆ ತನಿಖೆ ದಿಕ್ಕು ತಪ್ಪುತ್ತಿದೆ ಎಂದು…

30 mins ago

2ನೇ ಹಂತದ ಮತದಾನ: ನಾಳೆ ಯಲ್ಲಮ್ಮ ದೇವಿ ದರ್ಶನಕ್ಕೆ ನಿರ್ಬಂಧ

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದ್ದು, ನಾಳೆ ಜಿಲ್ಲೆಯ ಸವದತ್ತಿಯ ಯಲ್ಲಮ್ಮನ ಗುಡ್ಡಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ. 

45 mins ago