Categories: ಮಂಗಳೂರು

ಘನತ್ಯಾಜ್ಯ ಘಟಕದ ಜಾಗ ಅತಿಕ್ರಮಣ: ತಹಸೀಲ್ದಾರ್‌ ಭೇಟಿ

ಬೆಳ್ತಂಗಡಿ: ತಾಲೂಕಿನ ಕಡಿರುದ್ಯಾವರ ಗ್ರಾ.ಪಂ.ವ್ಯಾಪ್ತಿಯ ಮೈಂದಡ್ಕ ಎಂಬಲ್ಲಿ ಘನ ತ್ಯಾಜ್ಯ ಘಟಕಕ್ಕೆ ನಿಗದಿಯಾದ ಜಾಗ ಅತಿಕ್ರಮಣವಾಗಿದೆ ಎಂದು ಆರೋಪಿಸಿ ಇದನ್ನು ತೆರವುಗೊಳಿಸುವಂತೆ ಗ್ರಾ.ಪಂ.ಅಧ್ಯಕ್ಷ ಹಾಗೂ ಪಿಡಿಒ ಅವರು ತಹಸೀಲ್ದಾರ್ ಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಮಹೇಶ್ ಜೆ. ಹಾಗೂ ಅವರ ತಂಡ ಗುರುವಾರ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಸ.ನಂ 97/1ರಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ನಿಗದಿಯಾದ ಜಾಗದಲ್ಲಿ ಸ್ಥಳೀಯರೊಬ್ಬರು ಜಾಗ ಅತಿಕ್ರಮಿಸಿರುವುದು ಕಂಡು ಬರುತ್ತಿದೆ. ಅಲ್ಲದೆ ಗೋಮಾಳ ಜಾಗದಲ್ಲಿ 94ಸಿಯಲ್ಲಿ ಹಕ್ಕುಪತ್ರ ಪಡೆದಿದ್ದಾರೆ.

ಅಲ್ಲದೆ ಇನ್ನೊಬ್ಬರು ಆಶ್ರಯ ಯೋಜನೆಯಲ್ಲಿ ಮನೆ ಕಟ್ಟಿದ ಅನುಮಾನವಿದ್ದು, ನಂತರ 94ಸಿಯಲ್ಲಿ ಹಕ್ಕುಪತ್ರ ಪಡೆದು ಸರಕಾರದ ಶರ್ತ ಉಲ್ಲಂಘನೆ ಮಾಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿತ್ತು.

ಕಂದಾಯ ನಿರೀಕ್ಷಕ ಪ್ರದೀಶ್ ಕುಮಾರ್, ಗ್ರಾಮ ಲೆಕ್ಕಿಗ ಸತೀಶ್, ಕಡಿರುದ್ಯಾವರ ಗ್ರಾಪಂ ಅಧ್ಯಕ್ಷ ಅಶೋಕ್ ಕುಮಾರ್,ಪಿ.ಡಿ.ಒ. ಜಯಕೀರ್ತಿ ಹಾಗೂ ಸದಸ್ಯರು ಪರಿಶೀಲನೆಯಲ್ಲಿ ಭಾಗವಹಿಸಿದ್ದರು.

Sneha Gowda

Recent Posts

ಬಿಜೆಪಿ ಸುಳ್ಳು ಇನ್ನು ನಡೆಯಲ್ಲ: ಲಕ್ಷ್ಮಣ ಸವದಿ ವಾಗ್ದಾಳಿ

ಮೋದಿ ಮತ್ತವರ ಬಳಗ ಮತ್ತು ಬಿಜೆಪಿಯವರ ಸುಳ್ಳುಗಳನ್ನು ಜನ ಅರಿತಿದ್ದು, ಈ ಸಲ ಸರಿಯಾಗಿ ಪಾಠ ಕಲಿಸಲಿದ್ದಾರೆ ಎಂದು ಮಾಜಿ…

8 mins ago

ಗ್ಯಾರಂಟಿಗಳು ಕಾಂಗ್ರೆಸ್ ಹಾಗು ಖಂಡ್ರೆ ಗೆಲುವಿಗೆ ಶ್ರೀರಕ್ಷೆ

ಜನಸಾಮಾನ್ಯರಿಗೆ ಆಸರೆಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್…

19 mins ago

ಅಶ್ಲೀಲ ವಿಡಿಯೋ ಪ್ರಕರಣ: ಹೆಚ್​ಡಿ ರೇವಣ್ಣ ಬಂಧನ

ಅಶ್ಲೀಲ ವಿಡಿಯೋ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣರನ್ನು ವಿಶೇಷ ತನಿಖಾ ದಳದ  ಅಧಿಕಾರಿಗಳು…

29 mins ago

ಅನ್ಯದೇಶಿಗರಿಗೆ ಭಾರತ ಮುಕ್ತವಾಗಿಲ್ಲ ಎಂದ ಬೈಡನ್‌ಗೆ ಉತ್ತರಿಸಿದ ಜೈಶಂಕರ್‌

ಭಾರತ ಸೇರಿದಂತೆ ಹಲವು ದೇಶಗಳು ಅನ್ಯದೇಶಿಗರಿಗೆ ತೆರೆದುಕೊಂಡಿಲ್ಲ ಎಂದ ಅಮೇರಿಕಾ ಅಧ್ಯಕ್ಷ ಜೋ ಬೈಡನ್‌ರ ಹೇಳಿಕೆಗೆ ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ…

30 mins ago

ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಪ್ರಚಾರ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಭಾಗಿ

ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ್‌ ಅಸೂಟಿ ಅವರ ಪರವಾಗಿ ಕುಂದಗೋಳದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಬೃಹತ್ ಬಹಿರಂಗ ಪ್ರಚಾರ…

55 mins ago

ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಮೇಲೆ ಬರಲಿದೆ ಬಯೋಪಿಕ್

ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅಣ್ಣಾಮಲೈ  ಅವರು ಬಿಜೆಪಿ ಸೇರ್ಪಡೆ ಆಗಿ ರಾಜಕೀಯಕ್ಕೆ ಕಾಲಿಟ್ಟರು. ಈಗ  ಕೊಯಿಮತ್ತೂರು ಕ್ಷೇತ್ರದಿಂದ ಬಿಜೆಪಿ…

1 hour ago