ಮಂಗಳೂರು

ಗ್ರಾಮೀಣ ಪ್ರದೇಶಗಳಲ್ಲಿ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡಲು ಸೂಚನೆ: ಹರೀಶ್ ಪೂಂಜ

ಬೆಳ್ತಂಗಡಿ : ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಸಂಪರ್ಕ ಸಮಸ್ಯೆ ಉಂಟಾಗದಂತೆ ಸಮೀಕ್ಷೆಗಳನ್ನು ನಡೆಸಿ ಸಂಚಾರವ್ಯವಸ್ಥೆ ಏರ್ಪಡಿಸುವಲ್ಲಿ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಶಾಸಕ ಹರೀಶ್ ಪೂಂಜ ಸೂಚಿಸಿದರು.

ಅವರು ಸೋಮವಾರ ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆದ ಕೆಎಸ್ಸಾರ್ಟಿಸಿ ಸಂಚಾರ ವ್ಯವಸ್ಥೆ ಕುರಿತ ಮಾಹಿತಿ ಕಾರ್ಯಾಗಾರ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಂದಿನ 15 ದಿನಗಳೊಳಗೆ ಸಭೆಯಲ್ಲಿ ಬಂದ ವಿಚಾರಗಳ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ನೀಡಿ ಇನ್ನೊಂದು ಸುತ್ತಿನ ಸಭೆಯನ್ನು ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಮೇಲಂತಬೆಟ್ಟಿನ ಪಕ್ಕಿದಕಲ ಪ್ರದೇಶದಲ್ಲಿ ತಾಲೂಕಿಗೆ ಇನ್ನೊಂದು ಬಸ್ ಡಿಪೋ ನಿರ್ಮಿಸಲು ಸ್ಥಳ ಗುರುತಿಸಲಾಗಿದೆ ಎಂದು ಹೇಳಿದರು.

ಬೆಳ್ತಂಗಡಿಯಿಂದ ಕಕ್ಕಿಂಜೆ ಮೂಲಕ ನೆರಿಯಕ್ಕೆ ಬರುವ ಕೆಲವು ಬಸ್ ಗಳನ್ನು ಕಾಯರ್ತಡ್ಕ-ಮಿಯಾರು- ಕಳೆಂಜ-ನಿಡ್ಲೆ ಮೂಲಕ ಧರ್ಮಸ್ಥಳಕ್ಕೆ ವಿಸ್ತರಿಸಬೇಕು ಎಂಬ ವಿಚಾರವನ್ನು ಕಳೆಂಜ ಗ್ರಾಪಂ ಅಧ್ಯಕ್ಷ ಪ್ರಸನ್ನ ಸಭೆಯ ಗಮನಕ್ಕೆ ತಂದರು.
ಬೆಳ್ತಂಗಡಿ-ಮೂಡಬಿದ್ರೆ, ಬೆಳ್ತಂಗಡಿ-ನಾರಾವಿ ರೂಟ್ ನಲ್ಲಿ ಗ್ರಾಮಾಂತರ ಸಾರಿಗೆ ಬಸ್ ಗಳನ್ನು ಓಡಿಸಬೇಕು ಎಂದು ಎಬಿವಿಪಿ ಸದಸ್ಯರು ತಿಳಿಸಿದರು.

ಕೆಲವು ರೂಟ್ ಗಳಲ್ಲಿ ಶಾಲಾ ರಜಾ ದಿನಗಳಲ್ಲಿ ಬಸ್ ಗಳು ಓಡಾಟ ನಡೆಸದ ಕಾರಣ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ಕುರಿತು ಕೊಯ್ಯೂರಿನ ತಾರಾನಾಥ ಗೌಡ ಹೇಳಿದರು. ಆಲಂತಡ್ಕ ಬಸ್ಸನ್ನು ವಳಂಬ್ರ ತನಕ ವಿಸ್ತರಿಸಬೇಕು, ಧರ್ಮಸ್ಥಳ ಡಿಪೋದಲ್ಲಿ ಮಕ್ಕಳಿಗೆ ಬಸ್ ಪಾಸ್ ನೀಡಲು ಅನಗತ್ಯ ವಿಳಂಬ ಮಾಡಲಾಗುತ್ತಿದೆ, ಪಾಸ್ ವಿತರಿಸುವ ಕೆಲವು ಸಿಬಂದಿಗಳು ವಿದ್ಯಾರ್ಥಿಗಳೊಂದಿಗೆ ಸರಿಯಾಗಿ ಸ್ಪಂದಿಸದೆ ಸತಾಯಿಸುವ ಕುರಿತು ಕಡಿರುದ್ಯಾವರ ಗ್ರಾಪಂ ಅಧ್ಯಕ್ಷ ಅಶೋಕ್ ಕುಮಾರ್,ನವೀನ್ ನೆರಿಯ ಅಧಿಕಾರಿಗಳಿಗೆ ತಿಳಿಸಿದರು.

ಬಸ್ ಗಳಲ್ಲಿ ವಿಶೇಷಚೇತನರು ಹಾಗೂ ಹಿರಿಯ ನಾಗರಿಕರಿಗೆ ಮೀಸಲಾಗಿರುವ ಸೀಟುಗಳಲ್ಲಿ ಸಂಬಂಧಪಟ್ಟವರಿಗೆ ಸ್ಥಳವಕಾಶ ಸಿಗದೆ ತೊಂದರೆ ಉಂಟಾಗುತ್ತಿರುವ ಕುರಿತು ನಾರಾವಿಯ ಡ್ಯಾನಿಯಲ್ ಡಿಸೋಜಾ ಚರ್ಚಿಸಿದರು. ಮಾಜಿ ಸೈನಿಕರನ್ನು ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡುವಾಗ ಅವರ ಸೈನ್ಯದ ಸೇವಾವಧಿಯನ್ನು ಕೆಎಸ್ಸಾರ್ಟಿಸಿ ಯಲ್ಲಿ ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತಿಲ್ಲ ಇದರಿಂದ ನಿವೃತ್ತ ಯೋಧರಿಗೆ ನೇಮಕಾತಿ ಸಮಯ ಅನ್ಯಾಯವಾಗುತ್ತಿರುವ ಕುರಿತು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ದ.ಕ. ಜಿಲ್ಲಾ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಕಾಂಚೋಡು ಅಧಿಕಾರಿಗಳ ಗಮನಕ್ಕೆ ತಂದರು.

ಖಾಸಗಿ ಬಸ್ ಗಳ ಜತೆ ಕೆಎಸ್ಸಾರ್ಟಿಸಿ ಬಸ್ ಗಳ ಪೈಪೋಟಿ ಕುರಿತು ವಿಜಯಕುಮಾರ್ ಮಾನಸಾ ತಿಳಿಸಿದರು. ಸುರ್ಯಕ್ಕೆ ಬಸ್ ಆರಂಭಿಸುವಂತೆ ಮನವಿ ಮಾಡಲಾಯಿತು. ಶಿಬಾಜೆ,ಉಪ್ಪಿನಂಗಡಿ, ಕಿಲ್ಲೂರು ಮೊದಲಾದ ಕಡೆ ಅಗತ್ಯ ಸಮಯ ಬಸ್ ಓಡಿಸುವಂತೆ ತಿಳಿಸಲಾಯಿತು.

ವಿದ್ಯಾರ್ಥಿಗಳಿಗೆ ಸಮಸ್ಯೆ ಇರುವ ಕಡೆ ಗಳಿಗೆ ಟ್ರಿಪ್ ಗಳನ್ನು ಹೆಚ್ಚಿಸಬೇಕು ಎಂದರು. ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಯ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್ ಕುಮಾರ್ ವಂದಿಸಿದರು. ತಾಪಂ ಸಂಯೋಜಕ ಜಯಾನಂದ ಲಾಯಿಲ ನಿರೂಪಿಸಿದರು. ಪುತ್ತೂರು ವಿಭಾಗದ ಸಂಚಲನಾಧಿಕಾರಿ ಮುರಳೀದರ ಆಚಾರ್ಯ ಪ್ರಯಾಣಿಕರ ಅಹವಾಲುಗಳಿಗೆ ಉತ್ತರ ನೀಡಿದರು.

 

Gayathri SG

Recent Posts

ಡಿವೈಡರ್‌ಗೆ ಡಿಕ್ಕಿ ಹೊಡೆದು ಬೈಕ್‌ ಸವಾರ ಮೃತ್ಯು

ಭೀಕರ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸಾವನ್ನಪ್ಪಿದ ಘಟನೆ ಬೆಂಗಳೂರಲ್ಲಿ ನಡೆದಿದೆ.

5 mins ago

ಎಸ್‌ಎಸ್‌ಎಲ್‌ಸಿ ಗ್ರೇಸ್ ಮಾರ್ಕ್ಸ್‌ ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧಾರ

ಈ ಬಾರಿಯ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ಶೇಕಡಾ 20ರಷ್ಟು ಗ್ರೇಸ್‌ ಮಾರ್ಕ್ಸ್ ಕೊಟ್ಟು ವಿದ್ಯಾರ್ಥಿಗಳನ್ನ ಪಾಸ್ ಮಾಡಿದ್ದು…

8 mins ago

ಅಡುಗೆ ಮಾಡುತಿದ್ದ ವೇಳೆ ಗ್ಯಾಸ್‌ ಸಿಲಿಂಡರ್ ಸ್ಫೋಟ: ಮನೆಯ ವಸ್ತುಗಳು ಬೆಂಕಿಗಾಹುತಿ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ನಂದನಗದ್ದಾದಲ್ಲಿ ಮನೆಯಲ್ಲಿ ಅಡುಗೆ ಮಾಡುತಿದ್ದ ವೇಳೆ ಗ್ಯಾಸ್‌ ಸಿಲಿಂಡರ್ ಸ್ಫೋಟಗೊಂಡ ಘಟನೆ ನಡೆದಿದೆ.

16 mins ago

ಪಂದ್ಯದ ವೇಳೆ ಮಳೆ ಬಾರದಂತೆ ಆರ್​ಸಿಬಿ ಆಟಗಾರರಿಂದ ಕೃಷ್ಣ ನಾಮ ಜಪ

ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ನಾಳೆ ನಡೆಯುವ ಮಹತ್ವದ ಪಂದ್ಯದಲ್ಲಿ ಆರ್​ಸಿಬಿ ಕಣಕ್ಕಿಳಿಯಲು ಸಜ್ಜಾಗಿ ನಿಂತಿದ್ದರೂ ಕೂಡ ಪಂದ್ಯಕ್ಕೆ ಮಳೆ…

24 mins ago

ಪುತ್ತೂರು: ಹೋರಿಗಾಗಿ ದೈವದ ಮೊರೆ ಹೋದ ಬಜರಂಗದಳ

ಇಲ್ಲಿನ ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ತಿರುಗಾಡುತ್ತಿದ್ದ ಹೋರಿಗಳು ಮೇ.1 ರಿಂದ ನಾಪತ್ತೆಯಾಗಿರುವ ಘಟನೆಯೊಂದು ವರದಿಯಾಗಿದೆ. ಇದರ ಪತ್ತೆಗಾಗಿ ಬಜರಂಗದಳ ಇದೀಗ…

39 mins ago

ರೈತರಿಗೆ ಬೀಜ, ರಸಗೊಬ್ಬರದ ಕೊರತೆ ಆಗದಂತೆ ನೋಡಿಕೊಳ್ಳಿ: ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬೀಜ ಮತ್ತು ರಸಗೊಬ್ಬರದ ಕೊರತೆ ಆಗದಂತೆ ನೋಡಿಕೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

41 mins ago