ಮಂಗಳೂರು

ಕ್ಯಾಂಪ್ಕೊ: ಮಂಚಿಯ ನೂತನ ಶಾಖೆ ಉದ್ಘಾಟನೆ ಹಾಗೂ ಬೆಳೆಗಾರರ ಸಮಾವೇಶ ಕಾರ್ಯಕ್ರಮ

ಬಂಟ್ವಾಳ : ಕ್ಯಾಂಪ್ಕೊ ನಿಯಮಿತದ ಮಂಚಿಯ ನೂತನ ಶಾಖೆ ಉದ್ಘಾಟನೆ ಮತ್ತು ಸದಸ್ಯ ಬೆಳೆಗಾರರ ಸಮಾವೇಶ ಕಾರ್ಯಕ್ರಮ ಬುಧವಾರ ಮಂಚಿ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತದ ಆವರಣದಲ್ಲಿ ನಡೆಯಿತು.

ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಉಪಸ್ಥಿತಿಯಲ್ಲಿ ಬಂಟ್ಚಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರು ಶಾಖೆಯನ್ನು ಉದ್ಘಾಟಿಸಿ ಅಡಕೆಗೆ ಉತ್ತಮ ಮಾರುಕಟ್ಟೆ ಇರುವ ಈ ಸಂದರ್ಭ ಶಾಖೆ ಉದ್ಘಾಟನೆಯಾಗಿರುವುದು ಸಂತಸದ ವಿಚಾರ ಎಂದು ಶುಭ ಹಾರೈಸಿದರು.
ಸದಸ್ಯರ ಆಶೋತ್ತರಗಳನ್ನು ಈಡೇರಿಸುವುದು ಕ್ಯಾಂಪ್ಕೊ ಧ್ಯೇಯ. ಕೇವಲ ಅಡಕೆಯನ್ನಷ್ಟೇ ಅಲ್ಲದೆ ಮಿಶ್ರಬೆಳೆಯ ಕಡೆಗೂ ಒತ್ತು ನೀಡಬೇಕು. ಕ್ಯಾಂಪ್ಕೊ ಸಾಮಾಜಿಕ ಬದ್ಧತೆಯಲ್ಲಿ ಕೆಲಸ ಮಾಡುತ್ತಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದರು.

ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮಾತನಾಡಿ, ಮುಂದಿನ ದಿನಗಳಲ್ಲಿ ತೆಂಗು ಖರೀದಿಗೆ ಸಂಸ್ಥೆ ನಿರ್ಧರಿಸಿದೆ ಎಂದರು. ಬೆಳೆಗಾರರು ಶೇ. 100 ತೆರಿಗೆ ಪಾವತಿ ಮಾಡುವ ಬಿಲ್ಲು ನೀಡುವ ಸಂಸ್ಥೆಗಳಿಗೆ ಅಡಿಕೆ ಮಾರಬೇಕು ಆಗ ಮಾತ್ರ ಬೆಳೆಗಾರರಿಗೆ ಆಗುವ ಮೋಸ ತಪ್ಪಲು ಸಾಧ್ಯ. ಕ್ಯಾಂಪ್ಕೋ ಈಗಾಗಲೇ ಸದಸ್ಯರಿಗೆ ಆರೋಗ್ಯ ಸಂಬಂಧಿ ಸಹಾಯ ನೀಡುತ್ತಿದ್ದು, ಆರೋಗ್ಯ ವಿಮಾ ಸೌಲಭ್ಯ ನೀಡಲು ಚಿಂತಿಸುತ್ತಿದೆ. ಕಳೆದ ಸಾಲಿನಲ್ಲಿ 2200 ಕೋಟಿಯ ವ್ಯವಹಾರ ನಡೆಸಿದ್ದು ಶೇಕಡಾ 15ರಷ್ಟು ಡಿವಿಡೆಂಟ್ ನೀಡಿದೆ ಎಂದರು. ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ. ಕೃಷ್ಣಕುಮಾರ್ ಸಭೆಯ ಉದ್ದೇಶ ವಿವರಿಸಿದರು.

ಕ್ಯಾಂಪ್ಕೋ ಉಪಾಧ್ಯಕ್ಷಶಂಕರ ನಾರಾಯಣ ಖಂಡಿಗೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಎಸ್. ಕಾಮತ್. ಮಂಚಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮ್ಮರ್.ಬಿ ಮಂಚಿ. ಗ್ರಾಪಂ ಉಪಾಧ್ಯಕ್ಷ ಮೋಹನದಾಸ್ ಶೆಟ್ಟಿ, ಕ್ಯಾಂಪ್ಕೊ ನಿರ್ದೇಶಕರಾದ ದಯಾನಂದ ಹೆಗ್ಡೆ, ಕೃಷ್ಣಪ್ರಸಾದ್ ಮಡ್ತಿಲ, ಪದ್ಮರಾಜ ಪಟ್ಟಾಜೆ, ಎಂ.ಮಹೇಶ್ ಚೌಟ, ರಾಘವೇಂದ್ರ ಭಟ್, ಜಯಪ್ರಕಾಶ ನಾರಾಯಣ ಡಿಜಿಎಂ ಪ್ರಮೋದ್ ಕುಮಾರ್, ಎಜಿಎಂ ರಾಘವೇಂದ್ರ, ಪುತ್ತೂರು ಪ್ರಾದೇಶಿಕ ವ್ಯವಸ್ಥಾಪಕ ಗೋವಿಂದ ಭಟ್, ಕಾಸರಗೋಡು ಪ್ರಾದೇಶಿಕ ವ್ಯವಸ್ಥಾಪಕ ಗಿರೀಶ್ ಇ., ವಿಟ್ಲ ಶಾಖಾ ಪ್ರಬಂಧಕ ಸಂದೇಶ್, ಬದಿಯಡ್ಕ ಶಾಖಾ ಪ್ರಬಂಧಕ ದಿನೇಶ್ ಕುಮಾರ್, ಅಡ್ಯನಡ್ಕ ಶಾಖಾ ಪ್ರಬಂಧಕ ವಿನೋದ್ ಶೆಟ್ಟಿ, ಮಂಚಿ ಕ್ಯಾಂಪ್ಕೊ ಶಾಖಾ ಪ್ರಬಂಧಕ ಶಿವಾನಂದ ಕಣ್ವತೀರ್ಥ, ಮಂಚಿ ವ್ಯ.ಸೇಸ. ಕಾರ್ಯನಿರ್ವಹಣಾಧಿಕಾರಿ ಟಿ.ನಾರಾಯಣ್ ಉಪಸ್ಥಿತರಿದ್ದರು. ಬೈಕಂಪಾಡಿ ಪ್ರಾದೇಶಿಕ ವ್ಯವಸ್ಥಾಪಕರಾದ ಚಂದ್ರ ಬಿ.ಎಂ. ಕಾರ್ಯಕ್ರಮ ನಿರ್ವಹಿಸಿದರು. ಪ್ರೇಮಲತಾ ಪ್ರಾರ್ಥಿಸಿದರು.

Gayathri SG

Recent Posts

ಶಿಕಾರಿಗೆ ತೆರಳಿದ್ದ ಯುವಕನ ಮೇಲೆ ಮಿಸ್​​ ಫೈರ್; ಯುವಕ ಸಾವು

ಶಿಕಾರಿಗೆ ತೆರಳಿದ್ದ ಯುವಕನ ಮೇಲೆ ಮಿಸ್ ಫೈರ್ ಆದ ಘಟನೆ ಚಿಕ್ಕಮಗಳೂರಿನ ತಾಲೂಕಿನ ಉಲುವಾಗಿಲು ಗ್ರಾಮದಲ್ಲಿ ನಡೆದಿದೆ. ಕಾಫಿ ತೋಟದಲ್ಲಿ…

4 mins ago

ಖಾರವಾದ ಚಿಪ್ಸ್ ತಿಂದ 14ರ ಬಾಲಕನಿಗೆ ಹೃದಯ ಸ್ತಂಭನ

ಅತ್ಯಂತ ಖಾರವಾದ ಟೋರ್ಟಿಲ್ಲಾ ಚಿಪ್ ತಿನ್ನುವ ಸಾಮಾಜಿಕ ಮಾಧ್ಯಮ ಚಾಲೆಂಜ್‌ ನಲ್ಲಿ ಭಾಗವಹಿಸಿದ ಅಮೆರಿಕದ 14ರ ಹರೆಯದ ಹುಡುಗನೊಬ್ಬ ಹೃದಯ…

18 mins ago

ನಂಜನಗೂಡು ಶ್ರೀ ನಂಜುಂಡೇಶ್ವರನ ದರ್ಶನ ಪಡೆದ ಹೆಚ್. ಡಿ ರೇವಣ್ಣ

ಮಹಿಳೆ ಕಿಡ್ನಾಪ್ ಕೇಸ್ ನಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ನಂತರ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಮಾಜಿ ಸಚಿವ ಹೆಚ್.…

36 mins ago

ʼನನ್ನನ್ನು ನೋಡಬೇಡಿ, ಅಟಲ್‌ ಸೇತುವೆ ನೋಡಿʼ ಎಂದ ರಶ್ಮಿಕಾಗೆ ಪಿಎಂ ಮೋದಿ ಮೆಚ್ಚುಗೆ

ನಟಿ ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ಸಿನಿಮಾಗಳು.…

1 hour ago

ಗಮನ ಸೆಳೆದ ಮಾವು ಮೇಳ; ವಿವಿಧ ತಳಿಯ ಮಾವಿನ ಹಣ್ಣುಗಳ ಪ್ರದರ್ಶನ

ಹಣ್ಣುಗಳ ರಾಜನೆಂದು ಕರೆಯಲಾಗುವ, ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ…

1 hour ago

ಇಂದು ರೀ ರಿಲೀಸ್ ಆದ ಉಪ್ಪಿಯ ‘‘A’’ ಸಿನಿಮಾ; ಸ್ವಾಗತಿಸಿದ ಫ್ಯಾನ್ಸ್

ಕನ್ನಡ ಚಿತ್ರರಂಗದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ ಉಪೇಂದ್ರ ನಿರ್ದೇಶನದ “A” ಸಿನಿಮಾ ಇಂದು ರೀ ರಿಲೀಸ್​ ಆಗಿದೆ. ಬೆಂಗಳೂರಿನ…

2 hours ago