ಮಂಗಳೂರು

ಉಜಿರೆ ಶ್ರೀ ರಾಮಕೃಷ್ಣ ಸಭಾಭವನದಲ್ಲಿ ಶೇಣಿ ಸಂಸ್ಮರಣೆ ಹಾಗು ಹರಿಕಥಾ ಸಪ್ತಾಹ

ಬೆಳ್ತಂಗಡಿ: ಯಕ್ಷಗಾನ ಕಲಾವಿದರಾಗಿ,ಅರ್ಥಧಾರಿಯಾಗಿ,ಹರಿದಾಸರಾಗಿ ಶೇಣಿ ಗೋಪಾಲಕೃಷ್ಣ ಭಟ್ ಅವರಿಂದ ಕಲೆ , ಸಂಸ್ಕೃತಿಗೆ ಕೊಡುಗೆ ಅಪಾರವಾದುದು. ಕನ್ನಡ ಭಾಷೆಯ ಉಳಿವಿಗೆ ಯಕ್ಷಗಾನದ ಕೊಡುಗೆ ಅನನ್ಯವಾಗಿರುವಂತೆ , ಪುರಾಣ   ಕಲೆಯ ಬೆಳವಣಿಗೆಗೆ ಹರಿಕಥೆಯೂ ಪ್ರಾಮುಖ್ಯವಾದುದು. ನಶಿಸಿಹೋಗುತ್ತಿರುವ ಹರಿಕಥೆ ಕಲೆ ಯನ್ನು ಬೆಂಬಲಿಸಿ, ಪ್ರೋತ್ಸಾಹಿಸಬೇಕೆಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರು ನುಡಿದರು.

ಅವರು ಮೇ 22 ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾಭವನದಲ್ಲಿ ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ (ರಿ) ಉಜಿರೆ ಘಟಕ , ಶ್ರೀ ಜನಾರ್ದನ ದೇವಸ್ಥಾನ, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ (ರಿ), ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ಉಜಿರೆಯ ಯಕ್ಷಜನ ಸಭಾ ಸಹಯೋಗದಿಂದ ನಡೆದ ಶೇಣಿ ಸಂಸ್ಮರಣೆ ಹಾಗು ಹರಿಕಥಾ ಸಪ್ತಾಹ ಮತ್ತು ಉಜಿರೆ ಘಟಕ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು.

ಕರ್ನಾಟಕದಾದ್ಯಂತ ಹರಿಕಥೆ ಪ್ರಾಧಿಕಾರ ಕಾರ್ಯಾಗಾರ,ಶಿಬಿರಗಳನ್ನು ಆಯೋಜಿಸಿ ಹರಿಕಥೆ ಜನಮಾನಸಕ್ಕೆ ತಲುಪಿಸುವ ಕಾರ್ಯವಾಗಬೇಕು. ತಮ್ಮ ಚಾತುರ್ಮಾಸ್ಯ ಅವಧಿಯಲ್ಲಿ ಮಠದಲ್ಲಿ ಹರಿಕಥೆ ಕಾರ್ಯಾಗಾರ ನಡೆಸಲು ಚಿಂತಿಸಿರುವುದಾಗಿ ಅವರು ತಿಳಿಸಿದರು.

ಉಜಿರೆ ಘಟಕವನ್ನು ಉದ್ಘಾಟಿಸಿದ ಶರತ್ ಕೃಷ್ಣ ಪಡುವೆಟ್ನಾಯರು ಸಾಂಸ್ಕೃತಿಕ ವಾಗಿ ಬೆಳೆಯುತ್ತಿರುವ ಉಜಿರೆಯಲ್ಲಿ ನಶಿಸಿಹೋಗುತ್ತಿರುವ ಹ ರಿಕಥೆಯನ್ನು ಉತ್ತೇಜಿಸುವ ಉದ್ದೇಶಹೊಂದಿ ಸಪ್ತಾಹ ಆಯೋಜಿಸುತ್ತಿರುವುದಾಗಿ ತಿಳಿಸಿ ಎಲ್ಲರ ಪ್ರೋತ್ಸಾಹ ಕೋರಿದರು.

ಮುಖ್ಯ ಅತಿಥಿ ಧರ್ಮಸ್ಥಳದ ಬಿ.ಭುಜಬಲಿ ಕ .ಸಾ .ಪ .ವತಿಯಿಂದ ಪ್ರತಿ ತಾಲೂಕು ಹಾಗು ಹಳ್ಳಿಗಳಲ್ಲಿ ಹರಿಕಥೆ ಏರ್ಪಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಹರಿಕಥೆ ಬಗೆಗೆ ಆಸಕ್ತಿ ಮೂಡಿಸಿ,ಹರಿದಾಸರನ್ನು ಪರಿಚಯಿಸಿ,ಹರಿಕಥೆಯನ್ನು ದಾಖಲೀಕರಣಗೊಳಿಸಿ ಉಳಿಸುವ ಕೆಲಸವಾಗಬೇಕೆಂದರು. ದ ಕ .ಕ .ಸಾ .ಪ .ಅಧ್ಯಕ್ಷ ಡಾ! ಎಂ.ಪಿ ಶ್ರೀನಾಥ್ ಯಕ್ಷಗಾನ ವೇಷಧಾರಿಯಾಗಿ , ಪ್ರಸಂಗಕರ್ತರಾಗಿ, ಮೇಳದ ಯಜಮಾನರಾಗಿ ,ಅರ್ಥಧಾರಿಯಾಗಿ , ಹರಿದಾಸರಾಗಿ ಕನ್ನಡ ಭಾಷೆ , ಸಾಹಿತ್ಯ ಕ್ಷೇತ್ರಕ್ಕೆ ಶೇಣಿಯವರ ಸೇವೆ , ಕೊಡುಗೆ ಪ್ರಾಥಸ್ಮರಣೀಯವಾದುದು . ಜಿಲ್ಲಾಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹರಿಕಥೆಗೆ ಅವಕಾಶ ಕಲ್ಪಿಸುವುದರೊಂದಿಗೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಶೇಣಿಯವರ ಸೇವೆಯ ಬಗೆಗೆ ಚರ್ಚೆ, ಸಂವಾದ, ಗೋಷ್ಠಿಗಳನ್ನು ಏರ್ಪಡಿಸಿ ಯುವ ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ರೂಪಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಡಾ! ಹರಿಕೃಷ್ಣ ಪುನರೂರು ಮುಂದಿನ ಪೀಳಿಗೆಯ ಮಕ್ಕಳಿಗೆ ಹರಿಕಥೆ, ಯಕ್ಷಗಾನ, ತಾಳಮದ್ದಳೆ ಮೂಲಕ ನಮ್ಮ ಸಂಸ್ಕೃತಿಯನ್ನು ತಿಳಿಸಿ, ಅವರಲ್ಲಿ ಆಸಕ್ತಿ ಮೂಡಿಸಿ ಧಾರ್ಮಿಕ ಭಾವನೆ ಬೆಳೆಸುವಂತಾಗಬೇಕು . ಶೇಣಿಯವರ ಕಲಾ ಸೇವೆಯನ್ನು ಸ್ಮರಿಸಿ ಅವರ ಹೆಸರು ಶಾಶ್ವತವಾಗಿ ಮರೆಯದಂತೆ ಚಿರಸ್ಮರಣೀಯಗೊಳಿಸಬೇಕೆಂದರು.

ಮಂಗಳೂರು ವಿ.ವಿ.ಯಿಂದ ಗೌರವ ಡಾಕ್ಟರೇಟ್ ಪಡೆದ ಡಾ! ಹರಿಕೃಷ್ಣ ಪುನರೂರು ಅವರನ್ನು ಟ್ರಸ್ಟ್ ವತಿಯಿಂದ ಸ್ವಾಮೀಜಿಗಳು ಸಮ್ಮಾನಿಸಿ ಗೌರವಿಸಿದರು. . ವೇದಿಕೆಯಲ್ಲಿ ಉಜಿರೆ ಗ್ರಾ.ಪ.ಅಧ್ಯಕ್ಷೆ ಪುಷ್ಪಾವತಿ ಆರ್ .ಶೆಟ್ಟಿ, ತುಳು ಶಿವಳ್ಳಿ ಜಿಲ್ಲಾಧ್ಯಕ್ಷ ,ಡಾ! ಎಂ.ಎಂ.ದಯಾಕರ್ ,ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾಧ್ಯಕ್ಷ ರಾಧಾಕೃಷ್ಣ ರಾವ್ ,ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ,ಉಜಿರೆ ಘಟಕ ಸಂಚಾಲಕ ವೆಂಕಟ್ರಮಣ ರಾವ್ ,ಟ್ರಸ್ಟ್ ಕಾರ್ಯದರ್ಶಿ ಪಿ.ವಿ.ರಾವ್ ಉಪಸ್ಥಿತರಿದ್ದರು. ಟ್ರಸ್ಟ್ ಉಪಾಧ್ಯಕ್ಷ ಕೂಡ್ಲು ಮಹಾಬಲ ಶೆಟ್ಟಿ ಸ್ವಾಗತಿಸಿ,ಪ್ರಸ್ತಾವಿಸಿದರು. ಮುರಳಿಕೃಷ್ಣ ಆಚಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಎಂ. ಆರ್ .ವಾಸುದೇವ ವಂದಿಸಿದರು.

ಜೂನಿಯರ್ ರಾಜಕುಮಾರ್ ಖ್ಯಾತಿಯ ಜಗದೀಶ ಶಿವಪುರ ಅವರಿಂದ ಗೀತಾಭಿಷೇಕ ಹಾಗು ಹರಿದಾಸ ಅನಂತಪದ್ಮನಾಭ ಭಟ್ ಕಾರ್ಕಳ ಅವರಿಂದ “ಶ್ರೀ ರಾಮ ಜನ್ಮ-ಸೀತಾ ಕಲ್ಯಾಣ ‘ ಕಥಾಭಾಗದ ಹರಿಕಥೆ ನಡೆಯಿತು. ಮೇ 29 ರ ವರೆಗೆ ಪ್ರತಿ ಸಂಜೆ 5 ರಿಂದ ಬೇರೆ ಬೇರೆ ಕಲಾವಿದರಿಂದ ಶ್ರೀ ರಾಮನ ಕುರಿತಾದ ಪೌರಾಣಿಕ ಕಥಾಭಾಗದ ಹರಿಕಥೆ ನಡೆಯಲಿದೆ.

Sneha Gowda

Recent Posts

ಸ್ವಾತಿ ಮಲಿವಾಲ್‌ ಮೇಲೆ ದೂರು ದಾಖಲಿಸಿದ ಆರೋಪಿ ಬಿಭವ್‌

ಆಪ್‌ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣದ ಆರೋಪಿಯಾಗಿರುವ ಬಿಭವ್‌ ಕುಮಾರ್‌ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ…

1 min ago

ತಾಲೂಕು ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿವ್ಯವಸ್ಥೆ ಪರಿಶೀಲಿಸಿದ ಡಿವೈಎಸ್ಪಿ

ಲೋಕಾಯುಕ್ತದ ಕಲಬುರಗಿ ಡಿವೈಎಸ್ಪಿ ಆಯಂಟನಿ ಜಾನ್ ಹಾಗೂ ಇತರೆ ಅಧಿಕಾರಿಗಳು ಗುರುವಾರ ನಗರದಲ್ಲಿನ ತಾಲ್ಲೂಕು ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ…

17 mins ago

ಪವಿತ್ರಾ ಜಯರಾಂ ಮೃತಪಟ್ಟ ಬೆನ್ನಲ್ಲೇ ನಟ ಚಂದು ಆತ್ಮಹತ್ಯೆ

ಇತ್ತೀಚೆಗಷ್ಟೇ ತ್ರಿನಯನಿ ಧಾರಾವಾಹಿಯ ನಟಿ ಪವಿತ್ರಾ ಜಯರಾಂ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ  ತೆಲುಗು ಧಾರಾವಾಹಿ ನಟ…

29 mins ago

ಜೂ.14 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ-2 ಪ್ರಾರಂಭ

ಮೇ.15 ರಿಂದ ಆರಂಭವಾಗಿದ್ದ ಎಸ್​ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯ…

8 hours ago

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

9 hours ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

9 hours ago