Categories: ಮಂಗಳೂರು

ಉಜಿರೆಯ ಎಸ್.ಡಿ.ಎಂ.ನ ಡಾ.ನಾರಾಯಣ ಹೆಬ್ಬಾರ್ ಸಂಶೋಧನೆಗೆ ಆಸ್ಟ್ರೇಲಿಯಾ ಪೇಟೆಂಟ್

ಉಜಿರೆ : ಎಸ್.ಡಿ.ಎಂ. ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ.ನಾರಾಯಣ ಎಸ್ ಹೆಬ್ಬಾರ್ ರಾಸಾಯನಶಾಸ್ತ್ರದಲ್ಲಿನ ತಮ್ಮ ವಿನೂತನ ಸಂಶೋಧನೆಗಾಗಿ ಆಸ್ಟ್ರೇಲಿಯಾ ಸರಕಾರದಿಂದ ಪೇಟೆಂಟ್ ಮಾನ್ಯತೆ ಪಡೆದುಕೊಂಡು ಸಾಧನೆ ಮೆರೆದಿದ್ದಾರೆ.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದ« ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ನಾರಾಯಣ.ಎಸ್.ಹೆಬ್ಬಾರ್ ತಮ್ಮ ಸಂಶೋಧನೆ “ಪ್ರೇಪರೇಶನ್ ಆಫ್ ಸೈಕ್ಲೋಹೆಕ್ಸೆನ್ ಡಿರೈವೇಟಿವ್ ಆಂಡ್ ಆಸ್ ಕೊರೋಷನ್ ಇನ್ಹಿಬಿಟರ್ ಫಾರ್ ಮೈಲ್ಡ್ ಸ್ಟೀಲ್” ಗಾಗಿ ಆಸ್ಟ್ರೇಲಿಯ ಸರಕಾರದ ಕಾಮನ್ವೆಲ್ತ್ನಿಂದ ಪ್ರತಿಷ್ಠಿತ ಪೇಟೆಂಟ್ ಪಡೆದುಕೊಂಡಿದ್ದಾರೆ.ಈ ಸಂಶೋಧನೆ ಮೃದು ಉಕ್ಕಿಗೆ ಬಳಸಬಹುದಾದ ತುಕ್ಕು ಪ್ರತಿಬಂಧಕ ಸಂಯುಕ್ತದ ತಯಾರಿಯ ಕುರಿತಾಗಿದೆ.

ಪ್ರಸ್ತುತ ಪೇಟೆಂಟ್ ಗೌರವ ಪಡೆದುಕೊಂಡ 8 ಸದಸ್ಯರನ್ನೊಳಗೊಂಡ ತಂಡದಲ್ಲಿ ಒಬ್ಬರಾಗಿರುವ ಡಾ. ನಾರಾಯಣ ಹೆಬ್ಬಾರ್ ಅವರು ಕೆಲ ವರ್ಷಗಳಿಂದ ರಾಸಾಯನಕ್ಷೇತ್ರದಲ್ಲಿ ಅನೇಕ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಸಂಶೋಧನೆಯ ಭಾಗವಾಗಿ ಇವರು ತುಕ್ಕಿಗೆ ಸಂಬಂದಿಸಿದ ಅಧ್ಯಯನಗಳಲ್ಲಿ ಹೆಚ್ಚು ಒಳಗೊಂಡಿದ್ದರು.

ಈ ಕುರಿತು ಮಾತನಾಡಿದ ಅವರು “ ಈ ಹಿಂದೆ 2017ರಲ್ಲಿ ಪೇಟೆಂಟ್ ಮಾನ್ಯತೆಯಿಂದ ವಂಚಿತರಾಗಿದ್ದೆವು. ಹಲವು ಪ್ರಯತ್ನಗಳ ಬಳಿಕ ಈ ಬಾರಿ ಯಶಸ್ಸು ಕಂಡಿರುವುದಕ್ಕೆ ಖುಷಿಯಿದೆ. ಭವಿಷ್ಯದಲ್ಲಿ ಮತ್ತಷ್ಟು ಸಂಶೋಧನೆಗಳಲ್ಲಿ ತೊಡಗಿಕೊಂಡು ಸಂಸ್ಥೆಯ ಬೆಳವಣಿಗೆಗಾಗಿ ಶ್ರಮಿಸುವ ಇರಾದೆಯಿದೆ” ಎಂದು ಸಂತಸ ವ್ಯಕ್ತಪಡಿಸಿದರು.

ಕಾಲೇಜಿನ ಪ್ರಾಧ್ಯಾಪಕರು ವಿದೇಶಿ ಸರಕಾರದಿಂದ ಪೇಟೆಂಟ್ ಪಡೆದುಕೊಂಡಿರುವುದು ಇದೇ ಮೊದಲು ಎಂಬುದು ಗಮನಾರ್ಹ. ಪ್ರಸ್ತುತ ಪೇಟೆಂಟ್ 8 ವರ್ಷಗಳ ಕಾಲಾವಧಿಯನ್ನು ಹೊದಿರಲಿದ್ದು, ನಿರ್ದಿಷ್ಟ ರಾಯಧನವನ್ನೂ ಒಳಗೊಳ್ಳಲಿದೆ ಮತ್ತು ವಾಣಿಜ್ಯ ವ್ಯವಹಾರಗಳಿಗೆ ಪೇಟೆಂಟ್ ಸಹಕಾರಿಯಾಗಲಿದೆ.

“ವಿದ್ಯಾರ್ಥಿಗಳಲ್ಲಿ ಸಂಶೋಧನಾ ಕೌಶಲ್ಯ ವೃದ್ಧಿಸಬೇಕು. ಅದಕ್ಕಾಗಿ ಅವಕಾಶಗಳನ್ನು ಕಲ್ಪಿಸುವುದು ಮತ್ತು ಅವಕಾಶಗಳ ಸದ್ಭಳಕೆ ಅಗತ್ಯ. ಉನ್ನತ ಶಿಕ್ಷಣಕ್ಕಷ್ಟೇ ವಿದ್ಯಾರ್ಥಿಗಳು ತಮ್ಮ ಆಸಕ್ತಿಯನ್ನು ಸೀಮಿತಗೊಳಿಸಬಾರದು. ಸಂಶೋಧನೆ, ಪೇಟೆಂಟ್ಗಳ ಕಡೆಗೂ ಗಮನಹರಿಸಬೇಕು” ಎಂದು ಅವರು ಅಭಿಪ್ರಾಯಪಟ್ಟರು. ಎಸ್.ಡಿ.ಎಂ ಕಾಲೇಜಿನ ನೈತಿಕ ಬೆಂಬಲ ಮತ್ತು ಸಹಕಾರವೂ ಇವರ ಈ ಸಾಧನೆಗೆ ಪ್ರೇರಣೆಯಾಗಿದೆ.

Gayathri SG

Recent Posts

ಲೋಕಸಭೆ ಚುನಾವಣೆ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂದ ಸಿದ್ದರಾಮಯ್ಯ

ಈ ಬಾರಿಯ ಲೋಕಸಭೆ ಚುನಾವಣೆ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

27 mins ago

ಕೃಷಿ ಹೊಂಡದಲ್ಲಿ ಬಿದ್ದು ಮಹಿಳೆ ಹಾಗೂ 5 ವರ್ಷದ ಮಗು ಸಾವು

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹೈತಾಪುರ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಬಿದ್ದು ಮಹಿಳೆ ಹಾಗೂ ಮಗುವೊಂದು ಸಾವನ್ನಪ್ಪಿದ ಘಟನೆ ನಡೆದಿದೆ.

38 mins ago

ಮೇ 13 ರಿಂದ 17ರ ವರೆಗೆ  ಚಿಣ್ಣರ ಕಲರವ – 2024 ಮಕ್ಕಳ ಸಂತಸ ಕಲಿಕಾ ಕಾರ್ಯಾಗಾರ

ಚಿಣ್ಣರ ಚಾವಡಿ ಮಂಗಳೂರು ಹಾಗೂ ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಸಂತ ಜೆರೋಸಾ…

48 mins ago

ತಾಕತ್ತಿದ್ದರೆ ಪಿಒಕೆಯನ್ನು ವಾಪಸ್ ಪಡೆಯಲಿ: ರಾಜನಾಥ್ ಸಿಂಗ್​ಗೆ ಟಾಂಟ್ ಕೊಟ್ಟ ಫಾರೂಕ್ ಅಬ್ದುಲ್ಲಾ

ಪಿಒಕೆಯನ್ನು ಭಾರತ ಆಕ್ರಮಿಸುವಾಗ ಪಾಕಿಸ್ತಾನ ಕೈಗೆ ಬಳೆ ತೊಟ್ಟಿರುವುದಿಲ್ಲ.ರಾಜನಾಥ್ ಸಿಂಗ್​ಗೆ ತಾಕತ್ತಿದ್ದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯಲಿ ನೋಡೋಣ…

1 hour ago

ಅಲ್‌–ಜಜೀರಾ ಸುದ್ದಿವಾಹಿನಿ ಕಚೇರಿ ಮುಚ್ಚಲು ಸರ್ಕಾರ ತೀರ್ಮಾನಿಸಿದೆ ಎಂದ ಇಸ್ರೇಲ್ ಪ್ರಧಾನಿ

ಕತಾರ್ ಮಾಲೀಕತ್ವದ ಅಲ್‌–ಜಜೀರಾ ಸುದ್ದಿವಾಹಿನಿಯ ಸ್ಥಳೀಯ ಕಚೇರಿಗಳನ್ನು ಮುಚ್ಚಲು ಸರ್ಕಾರ ಸರ್ವಾನುಮತದಿಂದ ತೀರ್ಮಾನ ಕೈಗೊಂಡಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್…

2 hours ago

40 ವರ್ಷದ ರಾಜಕಾರಣದಲ್ಲಿ ಯಾವುದೇ ಆಪಾದನೆಗಳು ಇರಲಿಲ್ಲ: ಬಂಧನದ ಬಳಿಕ ರೇವಣ್ಣ ಮೊದಲ ಪ್ರತಿಕ್ರಿಯೆ

ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಿಡ್ನ್ಯಾಪ್‌ ಕೇಸ್‌ನಲ್ಲಿ ಬಂಧನದಲ್ಲಿರುವ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರು ಮೊದಲ ಬಾರಿಗೆ…

2 hours ago