ಮಂಗಳೂರು

ಉಚಿತ ಲಸಿಕಾ ಅಭಿಯಾನ ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ : ತಾಲೂಕಿನ ಗ್ರಾಮ ಮಟ್ಟದಲ್ಲಿ ನಡೆಯುತ್ತಿರುವ ಈ ಲಸಿಕಾ ಅಭಿಯಾನ ರಾಜ್ಯದ ವಿಧಾನ ಸಭಾ ಕ್ಷೇತ್ರಗಳ ಪೈಕಿ ಬೆಳ್ತಂಗಡಿಯಲ್ಲಿ ಯಶಸ್ವಿಯಾಗಿ ನಡೆಯುತ್ತಿರುವುದು ರಾಜ್ಯದಲ್ಲೇ ಮೊದಲು. ಇದಕ್ಕೆ ಆರೋಗ್ಯ ಇಲಾಖೆಯ ಎಲ್ಲರನ್ನೂ ಅಭಿನಂದಿಸುತ್ತೇನೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.ಅವರು ಲಾಯಿಲ ಗ್ರಾಮ ಪಂಚಾಯತ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಲಸಿಕಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಕೊರೊನಾ ಮೊದಲ ಅಲೆ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಲ್ಲಿ ಚೇತರಿಕೆಯನ್ನು ಕಾಣಲು ಅದೆಷ್ಟೋ ಸಮಯ ಕಂಡಾಗಲೂ ಈ ದೇಶದಲ್ಲಿ ಕೊರೊನಾದ ಮೊದಲನೇ ಅಲೆಯನ್ನು ವೇಗವಾಗಿ ಹಾಗೂ ಕ್ಷೀಪ್ರವಾಗಿ ಕ್ಷೀಣಿಸುವಂತೆ ಮಾಡಲು ಪ್ರಧಾನಿಯವರ ದಿಟ್ಟತನದ ನಿರ್ಧಾರಗಳು ಕಾರಣ ಎಂಬುವುದನ್ನು ಜಗತ್ತು ಒಪ್ಪಿಕೊಂಡಿದೆ. ಕೊರೋನಾ ಎರಡನೇ ಅಲೆ ಸಂದರ್ಭದಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಅಮ್ಲಜನಕ ಘಟಕಗಳನ್ನು ದೇಶದ ವಿವಿಧ ಕಡೆಗಳಲ್ಲಿ ಒಂದೇ ವರುಷಗಳಲ್ಲಿ ಸ್ಥಾಪಿಸಿ ಅಮ್ಲಜನಕದ ಕೊರತೆ ನೀಗಿಸಿದ್ದಲ್ಲದೆ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಿಗೂ ಕೃತಕ ಅಮ್ಲಜನಕ ರಪ್ತು ಮಾಡುವ ಮಟ್ಟಿಗೆ ಈ ದೇಶ ಬೆಳೆದು ನಿಂತಿದೆ. ರಾಜ್ಯ ಸರ್ಕಾರವೂ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಖಾಲಿ ಇದ್ದ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರುಗಳನ್ನು ನೇಮಕಾತಿ ಮಾಡಿಸಿ ಉತ್ತಮವಾದ ಆರೋಗ್ಯ ಸೇವೆ ನೀಡುವಂತೆ ಮಾಡಿದೆ ಎಂದರು.

ಬೆಳ್ತಂಗಡಿ ಕೋವಿಡ್ ಕೇರ್ ಸೆಂಟರ್ ಬಗ್ಗೆ ಸಚಿವರೊಬ್ಬರು ಮೆಚ್ಚುಗೆ ವ್ಯಕ್ತ ಪಡಿಸಿ, ಕೋವಿಡ್ ಕೇರ್ ಸೆಂಟರ್ ಯಾವ ರೀತಿಯಲ್ಲಿ ಇರಬೇಕು ಎಂಬುವುದನ್ನು ಬೆಳ್ತಂಗಡಿಯ ಕೇರ್ ಸೆಂಟರ್ ಅನ್ನು ನೋಡಿ ತಿಳಿದುಕೊಳ್ಳಬೇಕು ಎಂದು ಅನೇಕ ಕಾರ್ಯಕ್ರಮಗಳಲ್ಲಿ ಉಲ್ಲೇಖ ಮಾಡಿದ್ದಾರೆ. ಇದು ನಮಗೆ ಹೆಮ್ಮೆ. ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಕೇವಲ ಕೋವಿಡ್ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡುತ್ತಿರುವ ಸಂದರ್ಭದಲ್ಲಿ ತಾಲೂಕಿನ ವಿವಿಧ ಆಸ್ಪತ್ರೆಗಳು ಇತರ ರೋಗಿಗಳ ಹಾಗೂ ಉಚಿತ ಹೆರಿಗೆ ಮಾಡಿಸುವ ಮೂಲಕ ಸಹಕಾರ ನೀಡಿದ್ದರಿಂದ ಕೊರೊನಾ ಹತೋಟಿಗೆ ತರಲು ಸಾಧ್ಯವಾಯಿತು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು

ಗ್ರಾ.ಪಂ. ಅಧ್ಯಕ್ಷೆ ಆಶಾ ಬೆನಡಿಕ್ಟ ಸಲ್ಡಾನ,ವಹಿಸಿದ್ದರು ಉಪಾಧ್ಯಕ್ಷ ಗಣೇಶ್ ಲಾಯಿಲಾ,ಸಹಕರಿಸಿದ ಎಲ್ಲರನ್ನೂ ಸ್ಮರಿಸಿದರು ತಾಲೂಕು ಆರೋಗ್ಯಾಧಿಕಾರಿ ಕಲಾ ಮಧು, ಉಜಿರೆ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಅಕ್ಷತಾ, ತಾ. ಪಂ. ಮಾಜಿ ಸದಸ್ಯ ಸುಧಾಕರ್ ಬಿ. ಎಲ್. ಉಪಸ್ಥಿತರಿದ್ದರು. ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಗಿರೀಶ್ ಡೋಂಗ್ರೆ ಪ್ರಸ್ತಾವಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಸ್ವಾಗತಿಸಿದರು ಸದಸ್ಯ ಅರವಿಂದ ಲಾಯಿಲ ಧನ್ಯವಾದವಿತ್ತು ಪಂಚಾಯತ್ ಕಾರ್ಯದರ್ಶಿ ಪುಟ್ಟಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

Raksha Deshpande

Recent Posts

ಮರಾಠಿ ಭಾಷೆಯಲ್ಲಿ ಕರಾವಳಿಯ ಗಂಡುಕಲೆ ಯಕ್ಷಗಾನ ಅನಾವರಣ

ಯಕ್ಷಗಾನದ ಹಿರಿಮೆ ಇದೀಗ ಗಡಿದಾಟಿ ಮಹಾರಾಷ್ಟ್ರದಲ್ಲೂ ಸದ್ದು ಮಾಡಿದೆ. ಸಂಪೂರ್ಣ ಮರಾಠಿ ಭಾಷೆಯಲ್ಲಿ ನಡೆದ ಅಪರೂಪದ ಯಕ್ಷಗಾನ ಮಹಾರಾಷ್ಟ್ರ ಪ್ರೇಕ್ಷಕರ…

13 mins ago

ಪುಟಾಣಿ ಕಲಾವಿದೆಯ ಕಲಾಸಿರಿಯ ಅನಾವರಣ: ಬಾಲಕಿಯ ಅದ್ಭುತ ಪ್ರದರ್ಶನಕ್ಕೆ ವ್ಯಾಪಕ ಮೆಚ್ಚುಗೆ

ಪುಟಾಣಿ ಕಲಾವಿದೆ ಹತ್ತು ವರ್ಷದ ಕುಮಾರಿ ಗಂಗಾ ಶಶಿಧರ್ ಬಳಗದ ವಯೋಲಿನ್ ವಾದನ ಕಛೇರಿ ಕಾರ್ಯಕ್ರಮ ಉಡುಪಿಯ ಶ್ರೀ ಕೃಷ್ಣಮಠದ…

16 mins ago

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಘೋಷಣೆ: ಸಿಎಂಗೆ ಕೆಯುಡಬ್ಲ್ಯುಜೆ ವತಿಯಿಂದ ಅಭಿನಂದನೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಹುದಿನದ ಬೇಡಿಕೆಯಾಗಿದ್ದ ಗ್ರಾಮೀಣ ಪತ್ರಕರ್ತರರಿಗೆ ಬಸ್ ಪಾಸ್ ನೀಡುವ ಸಂಬಂಧ ಇತ್ತಿಚೆಗೆ ದಾವಣಗೆರೆಯಲ್ಲಿ ನಡೆದ…

28 mins ago

ರಾಹುಲ್ ಗಾಂಧಿಗೆ 1000 ರೂ. ದಂಡ ವಿಧಿಸಿದ ಜಾರ್ಖಂಡ್ ಹೈಕೋರ್ಟ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ…

30 mins ago

ಮಂಗಳೂರು: ಪಿ.ಎ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕೋತ್ಸವ ಆಚರಣೆ

“ಅಧ್ಯಾಪಕರುಗಳ ಪ್ರೋತ್ಸಾಹ ಮತ್ತು ಬೆಂಬಲವೇ ಇವತ್ತಿನ ಈ ದಿನದ ಯಶಸ್ಸು ಮತ್ತು ಇಲ್ಲಿಯ ಕಾರ್ಯಕ್ರಮಗಳೇ ಈ ಕಾಲೇಜಿನ ಮಹತ್ವವನ್ನು ಸಾರುತ್ತಿದೆ…

34 mins ago

40 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟ ಗೆಲ್ಲಲಿದೆ: ಡಿ.ಕೆ.ಶಿವಕುಮಾರ್

ಉತ್ತರ ಪ್ರದೇಶದಲ್ಲಿ 40 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟ ಗೆಲ್ಲಲಿದೆ. ದೇಶದೆಲ್ಲೆಡೆ ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಮೈತ್ರಿಕೂಟದ…

44 mins ago