Categories: ಮಂಗಳೂರು

ಇಂದು ಅಡಕೆ ಬೆಲೆಯ ಸ್ಥಿರತೆಗೆ ಕೇಂದ್ರ ಸರಕಾರದ ಕೃಷಿಪರವಾದ ನೀತಿಯೇ ಕಾರಣವಾಗಿದೆ: ಕ್ಯಾಂಪ್ಕೋ ಅಧ್ಯಕ್ಷ ಎ. ಕಿಶೋರ್ ಕುಮಾರ್ ಕೊಡ್ಗಿ

ಬೆಳ್ತಂಗಡಿ: ಇಂದು ಅಡಕೆ ಬೆಲೆಯ ಸ್ಥಿರತೆಗೆ ಕೇಂದ್ರ ಸರಕಾರದ ಕೃಷಿಪರವಾದ ನೀತಿಯೇ ಕಾರಣವಾಗಿದೆ. ಆಮದನ್ನು ಸಂಪೂರ್ಣ ನಿಷೇಧಿಸಲಾಗಿದ್ದು ಅಡಕೆ ಕೃಷಿಕರ ಪರವಾಗಿ ಕಾನೂನನ್ನು ಜಾರಿಗೊಳಿಸದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎ. ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.
ಅವರು ಜ. 17ರಂದು ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದಲ್ಲಿ ಕ್ಯಾಂಪ್ಕೋ ನೂತನ ಶಾಖೆ ಉದ್ಘಾಟಿಸಿ, ಬಳಿಕ ನಡೆದ ಸದಸ್ಯ ಬೆಳೆಗಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂದು ಕ್ಯಾಂಪ್ಕೋ ಬೆಳೆಗಾರರ ಸದಸ್ಯರ ಸಹಕಾರದಿಂದ ಅಭಿವೃದ್ಧಿಯತ್ತ ಸಾಗುತ್ತಿದೆ. ಅಡಿಕೆಯ ಬೆಲೆಯು ಈಗ ಉತ್ತಮ ಸ್ಥಿತಿಯಲ್ಲಿದ್ದು ಕೃಷಿಕರು ಅಡಿಕೆಯೊಂದನ್ನೇ ಅವಲಂಬಿಸದೆ ಇತರ ಮಿಶ್ರ ಬೆಳೆಯತ್ತ ಗಮನ ಹರಿಸಬೇಕಾಗಿದೆ. ಕ್ಯಾಂಪ್ಕೋ ಈಗಾಗಲೇ ಕಾಳುಮೆಣಸು ಖರೀದಿ ಪ್ರಾರಂಭ ಮಾಡಿದ್ದು ಇನ್ನು ಮುಂದಿನ ದಿನಗಳಲ್ಲಿ ತೆಂಗಿನಕಾಯಿ ಖರೀದಿ ಮತ್ತು ಗುಣಮಟ್ಟದ ತೆಂಗಿನೆಣ್ಣೆಯನ್ನು ಉತ್ಪಾದಿಸುವ ಯೋಜನೆ ಹಾಕಿಕೊಂಡಿದೆ. ಕೊಕ್ಕೋ ಬೀಜಕ್ಕೂ ಉತ್ತಮ ದರ ನೀಡಿ ಅದರ ಬೆಲೆಯಲ್ಲೂ ಸ್ಥಿರvಯನ್ನು ಕಾಪಾಡಿಕೊಂಡು ಬಂದಿದೆ ಎಂದರು.

ಕ್ಯಾಂಪ್ಕೋದ ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ. ಪ್ರಸ್ತಾವಿಸಿ, ಅಡಕೆಯ ಒಟ್ಟು ಉತ್ಪಾದನೆಯ ಶೇ. 10 ರಿಂದ 12 ರಷ್ಟು ಮಾತ್ರ ಕ್ಯಾಂಪ್ಕೋಗೆ ಬರುತ್ತಿದೆ. ಉಳಿದವು ಖಾಸಗಿಯವರ ಪಾಲಾಗುತ್ತಿದೆ. ಕ್ಯಾಂಪ್ಕೋ ಆನ್ ವೀಲ್ ಎಂಬ ಕಾರ್ಯಕ್ರಮದಡಿಯಲ್ಲಿ ಸಂಸ್ಥೆಯ ನುರಿತ ಸಿಬ್ಬಂದಿಗಳು ರೈತರ ಮನೆಗಳಿಗೆ ಭೇಟಿ ನೀಡಿ ಅಲ್ಲಿಂದಲೇ ಅಡಕೆ ಖರೀದಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಕ್ಯಾಂಪ್ಕೋ ಸದಸ್ಯರಿಗೆ ಸುಸಜ್ಜಿತ ವ್ಯವಸ್ಥೆ ಮತ್ತು ವ್ಯವಹಾರವನ್ನು ಸರಳಗೊಳಿಸಲು ಸಹಕಾರಿ ಸಂಸ್ಥೆಗಳೊಂದಿಗೆ ಕೈ ಜೋಡಿಸಿ ಈಗಾಗಲೇ ಮಂಚಿ, ಸಿದ್ಧಾಪುರ, ನೆಲ್ಯಾಡಿ ಎಂಬಲ್ಲಿ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಈ ಜನವರಿ ತಿಂಗಳಲ್ಲೇ ನಾಲ್ಕನೆಯ ನೂತನ ಕಟ್ಟಡವನ್ನು ನಾರಾವಿಯಲ್ಲಿ ಉದ್ಘಾಟಿಸುತ್ತಿದ್ದೇವೆ ಎಂದರು.

ಸಹಕಾರಿ ಸಂಘದ ವತಿಯಿಂದ ಕ್ಯಾಂಪ್ಕೋ ಅಧ್ಯಕ್ಷರನ್ನು ಸಮ್ಮಾನಿಸಲಾಯಿತು. ಕ್ಯಾಂಪ್ಕೋದ ವತಿಯಿಂದ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಭಂಡಾರಿ, ನಾರಾವಿ ಗ್ರಾ.ಪಂ. ಅಧ್ಯಕ್ಷೆ ಆಶಾಲತಾ, ರತ್ನಾಕರ ರಾವ್ ಹೊಳೆಹೊದ್ದು ಅವರನ್ನು ಸಮ್ಮಾನಿಸಲಾಯತು.

ಕ್ಯಾಂಪ್ಕೋದ ನಿರ್ದೇಶಕರಾದ ದಯಾನಂದ ಹೆಗ್ಡೆ, ಡಾ. ಜಯಪ್ರಕಾಶ್ ತೋಟತ್ತಾಡಿ, ರಾಘವೇಂದ್ರ ಭಟ್ ಕೆದಿಲ, ಮಹೇಶ್ ಚೌಟ, ಡಿ.ಜಿ.ಎಮ್. ರವೀಶ್ ಯಂ. ಡಿ.ಜಿ.ಎಂ. ಪ್ರಮೋದ್ ಕುಮಾರ್, ಎ.ಜಿ.ಯಂ. ರಾಘವೇಂದ್ರ ಪುತ್ತೂರು, ಪ್ರಾದೇಶಿಕ ವ್ಯವಸ್ಥಾಪಕ ಗೋವಿಂದ ಭಟ್ ಬೆಕಂಪಾಡಿ. ವಲಯ ವ್ಯವಸ್ಥಾಪಕ ಚಂದ್ರ ಯಂ. ತ್ರಿಶೂರು, ವಲಯ ವ್ಯವಸ್ಥಾಪಕ ಜಯರಾಮ ಶೆಟ್ಟಿ, ಕ್ಯಾಂಪ್ಕೋದ ಸಕ್ರೀಯ ಸದಸ್ಯ ರವೀಂದ್ರ ಪೂಜಾರಿ ಬಾಂದೋಟ್ಟು, ಸುಧಾಕರ ಕಜಂಗೆ, ಡಾಕಯ ಪೂಜಾರಿ, ಗಂಗಾಧರ ಶೇರಿಗಾರ್, ಗ್ರಾ.ಪಂ. ಉಪಾಧ್ಯಕ್ಷ ಉದಯ ಹೆಗ್ಡೆ, ನಾರಾವಿ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯನ್. ಶಶಿಕಾಂತ ಜೈನ್, ಉಪಾಧ್ಯಕ್ಷ ಸದಾನಂದ ಗೌಡ, ನಿರ್ದೇಶಕರುಗಳಾದ ಜಗದೀಶ ಹೆಗ್ಡೆ, ರಾಜೇಂದ್ರ ಕುಮಾರ್, ಹರೀಶ ಹೆಗ್ಡೆ, ಲಕ್ಷ್ಮಣ ಪೂಜಾರಿ, ಸುಜಲತಾ, ಪೆರ್ನ ಉಪಸ್ಥಿತರಿದ್ದರು. ಈ ಸಂದರ್ಭ ಕೃಷಿಕರೊಂದಿಗೆ ಸಂವಾದ ನಡೆಯಿತು.
ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಸ್ವಾಗತಿಸಿದರು. ನಿರ್ದೇಶಕ ದಯಾನಂದ ಹೆಗ್ಡೆ ವಂದಿಸಿದರು. ಕ್ಯಾಂಪ್ಕೋ ಶಾಖಾ ವ್ಯವಸ್ಥಾಪಕ ಗಣೇಶ್ ಎಂ.ಡಿ. ಮತ್ತು ರಾಜೇಶ್ ಸಹಕರಿಸಿದರು. ಬೈಕಂಪಾಡಿ ವಲಯ ವ್ಯವಸ್ಥಾಪಕ ಚಂದ್ರ ಎಂ. ಕಾರ್ಯಕ್ರಮ ನಿರ್ವಹಿಸಿದರು.

Swathi MG

Recent Posts

ನ್ಯೂಸ್‌ ಕರ್ನಾಟಕದ ಸಾರಥ್ಯದಲ್ಲಿ‌ ಏ.28 ರಂದು “ಆಟಿಸಂ ಜಾಗೃತಿ”ಕುರಿತು ಎಕ್ಷಪ್ಸನಲ್ ಕಾರ್ಯಕ್ರಮ

ನ್ಯೂಸ್‌ ಕರ್ನಾಟಕದ ಸಾರಥ್ಯದಲ್ಲಿ ಪಾಥ್ವೆ ಎಂಟರ್‌ ಪ್ರೈಸಸ್‌ ಹಾಗೂ ಸ್ಪೇಷಲ್‌ ಪೇರೆಂಟ್ಸ್‌ ಸಪೋರ್ಟ್‌ ಗ್ರೂಪ್‌ ಅವರ ಸಹಯೋಗದೊಂದಿಗೆ Aibha association…

2 hours ago

ಪ್ರಜ್ವಲ್‌ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ : ಎಸ್‌ಐಟಿ ತನಿಖೆ

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ…

2 hours ago

ಒಂದೇ ದಿನ ಬಾಗಲಕೋಟೆ ಕ್ಷೇತ್ರದಲ್ಲಿ ಪ್ರಧಾನಿ ಮೋದಿ, ಪ್ರಿಯಾಂಕ ಅಬ್ಬರ

ಮೇ 7ರಂದು ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ಮತದಾನ ಹಿನ್ನೆಲೆ ಇಂದು ಬೆಳಗಾವಿಗೆ ಆಗಮಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ…

3 hours ago

ಮೆಂಟಲ್ ಸೂರಿ ಹತ್ಯೆ ಕೇಸ್‌ : ಮೃತನ ಮಗನೂ ಸೇರಿ ಮೂವರ ಬಂಧನ

ಜಿಲ್ಲೆಯಲ್ಲಿ ಮನೆ ಕಳ್ಳತನ, ದರೋಡೆ ಕಿಂಗ್‌ ಎನಿಸಿಕೊಂಡಿದ್ದ ಸುರೇಶ್ ಅಲಿಯಾಸ್ ಮೆಂಟಲ್ ಸೂರಿ(45)ಯನ್ನ ಶಿವಮೊಗ್ಗ ಬಾಪೂಜಿನಗರದ 7ನೇ ಕ್ರಾಸ್ ನಲ್ಲಿರುವ…

3 hours ago

ಹಿಂದು ಹುಡುಗಿಗೆ ಅಶ್ಲೀಲ ಮೆಸೇಜ್‌ ರವಾನೆ : ಮುಸ್ಲಿಂ ಯುವಕನಿಗೆ ಬಿತ್ತು ಧರ್ಮದೇಟು

17 ವರ್ಷದ ಅಪ್ರಾಪ್ತೆಗೆ ಮುಸ್ಲಿಂ ಯುವಕನೋರ್ವ ಅಶ್ಲೀಲ ಮೆಸೇಜ್‌ ಕಳುಹಿಸುತ್ತಿದ್ದನ್ನು ರೆಡ್‌ ಹ್ಯಾಂಡ್‌ ಹಿಡಿದ ಸ್ಥಳೀಯರು ಆತನಿಗೆ ತಕ್ಕ ಶಾಸ್ತಿ…

4 hours ago

ಅಕ್ರಮ ಜಾನುವಾರು ಸಾಗಾಟ: 9 ಆರೋಪಿಗಳು ಪೊಲೀಸರ ವಶಕ್ಕೆ

ಕೊಪ್ಪಳ ಜಿಲ್ಲೆಯ ಗಿಣಿಗೇರಾದಿಂದ 16 ಎತ್ತುಗಳನ್ನು ಆರೋಪಿಗಳು ಖರೀದಿಸಿ. ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಗಂಗಾವತಿ…

4 hours ago