Categories: ಮಂಗಳೂರು

ಆಗ ನಕಲಿ ಅಂಕಪಟ್ಟಿ ಇಂದು ನಕಲಿ ಕೋವಿಡ್ ಸರ್ಟಿಫಿಕೇಟ್

ಮಂಗಳೂರು : ನಕಲಿ ಅಂಕಪಟ್ಟಿಯ ರೀತಿ ಕೇರಳ ಗಡಿ ಭಾಗದಲ್ಲಿ ನಕಲಿ ಸರ್ಟಿಫಿಕೇಟ್  ಜಾಲವು ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ  .
ಮಂಗಳೂರು  ನಗರಕ್ಕೆ ಹೊಂದಿಕೊಂಡಿರುವ ತಲಪಾಡಿ ಗಡಿ ಭಾಗದಲ್ಲಿ ಎರಡು  ದಿನಗಳ ಅಂತರದಲ್ಲಿಯೇ ನಾಲ್ವರು ಯುವತಿಯರು ಸೇರಿ ಒಟ್ಟು ಹನ್ನೊಂದು ಮಂದಿ ನಕಲಿ ಆರ್ ಟಿಪಿಸಿಆರ್ ಸರ್ಟಿಫಿಕೇಟ್ ಇಟ್ಟು ಕೊಂಡು ಕರ್ನಾಟಕಕ್ಕೆ ಬಂದಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.ಪ್ರಕರಣ ಸಂಬಂಧಿಸಿ 7 ಮಂದಿಯನ್ನು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ .
ಮಂಗಳೂರಿನಲ್ಲಿ ಶಿಕ್ಷಣಕ್ಕಾಗಿ ಆಗಮಿಸುತ್ತಿದ್ದ ಇಬ್ಬರು ಯುವತಿಯರು ಮತ್ತು ಒಬ್ಬ ಎಂಬಿಎ ವಿದ್ಯಾರ್ಥಿ ನಕಲಿ ಸರ್ಟಿಫಿಕೇಟ್ ಜಾಲದಲ್ಲಿ ಸಿಕ್ಕಿಬಿದ್ದಿದ್ದಾರೆ ಹಾಗೂ ಯುವತಿಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು ವಿಚಾರಣೆ ನಡೆಸಿ ಮನೆಗೆ ಕಳುಹಿಸಿದ್ದಾರೆ.
ಮಂಗಳೂರಿನಲ್ಲಿ ಎಂಬಿಎ ವಿದ್ಯಾರ್ಥಿ ಯಾಗಿರುವ ಕಾಸರಗೋಡು ಜಿಲ್ಲೆಯ ಆಲಂಪಾಡಿ ನಿವಾಸಿ ಅಬ್ದುಲ್ ತಮೀಮ್, ಚೆರ್ವತ್ತೂರು ನಿವಾಸಿ ಹಾಸಿಮ್,  ಆದಿಲ್, ಕಾಸರಗೋಡು ಕಡಪ್ಪುರ ನಿವಾಸಿ ಇಸ್ಮಾಯಿಲ್ ಮತ್ತು ಇವರಿಗೆ ನಕಲಿ ಪ್ರಮಾಣಪತ್ರ ಒದಗಿಸಿದ್ದ ಚೆರ್ವತ್ತೂರು  ನಿವಾಸಿ ಕಬೀರ್ ಎಂಬವರನ್ನು ತಲಪಾಡಿ ಗಡಿಯಲ್ಲಿ  ಬಂಧಿಸಲಾಗಿತ್ತು . ಮತ್ತೆ ತಲಪಾಡಿ ಗಡಿಯಲ್ಲಿ ಮಂಗಳೂರಿನ ಪಡೀಲ್ ನಿವಾಸಿ ಮಹಮ್ಮದ್ ಶರೀಫ್ ಮತ್ತು ಮಂಜೇಶ್ವರ ನಿವಾಸಿ ಅಬೂಬಕರ್ ನಕಲಿ ಸರ್ಟಿಫಿಕೇಟ್ ತೋರಿಸಿ ಸಿಕ್ಕಿಬಿದ್ದಿದ್ದಾರೆ .ಪಡೀಲ್ ನಿವಾಸಿ ಮಂಜೇಶ್ವರದ ಸಂಬಂಧಿಕರ ಮನೆಗೆ ತೆರಳಿದ್ದು ಹಿಂತಿರುಗಿ ಬರುವಾಗ ಕೋವಿಡ್ ನೆಗಟೀವ್ ಸರ್ಟಿಫಿಕೇಟ್ ತೋರಿಸಿದ್ದ  ಆದರೆ ಅದು ನಕಲಿಯಾಗಿತ್ತು ಸೌದಿಯಲ್ಲಿ ಉದ್ಯೋಗಿಯಾಗಿರುವ ಅಬೂಬಕರ್ ತನ್ನ ಗೆಳೆಯರನ್ನು ಕಾಣುವ ಸಲುವಾಗಿ ಮಂಗಳೂರಿಗೆ ಬಂದಿದ್ದು ಈ ವೇಳೆ ನಕಲಿ ಸರ್ಟಿಫಿಕೇಟ್ ತೂರಿಸಿದ್ದ ಇವರಿಗೆ ನಕಲಿ ಸರ್ಟಿಫಿಕೇಟ್ ಮಾಡಿಕೊಟ್ಟಿದ್ದು ಯಾರು ಮತ್ತು ಎಲ್ಲಿ  ಎನ್ನುವುದನ್ನು ಪೊಲೀಸರು ಪತ್ತೆ ಮಾಡುತ್ತಿದ್ದಾರೆ .
ಕಾಸರಗೋಡಿನ ಇತರ ಆರೋಪಿಗಳು ಚೆರ್ವತ್ತೂರಿನ ಕಬೀರ್ ಬಳಿಯಲ್ಲಿ ನಕಲಿ ಸರ್ಟಿಫಿಕೇಟ್ ಪಡೆದರು ಎನ್ನುವುದನ್ನು ತನಿಖೆಯಲ್ಲಿ ಬಯಲಾಗಿದೆ ಈ ಬಗ್ಗೆ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಕಾಸರಗೋಡಿಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಕಾಸರಗೋಡಿನಿಂದ ಮಂಗಳೂರಿಗೆ ಬರಲು ಬಳಸಿದ್ದ ಇನ್ನೋವಾ ಮತ್ತು ಇಟಿಯೋಸ್ ಕಾರು 2ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ ಉಪ್ಪಳ ಮೂಲದ ಇಬ್ಬರು ವಿದ್ಯಾರ್ಥಿನಿಯರು ವಿಚಾರಣೆ ಸಂದರ್ಭ ತಮಗೆ ಬೇರೆ ಗೆಳೆಯರು ಸರ್ಟಿಫಿಕೇಟ್ ಮಾಡಿಕೊಟ್ಟಿದ್ದರು ನಾವು ಪರೀಕ್ಷೆಗೆ ತೆರಳಿದ್ದೆವು ಎಂದು ಹೇಳಿದ್ದರೂ  ನಕಲಿಯಾಗಿ ಮಾಡಲಾಗಿತ್ತು ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
Raksha Deshpande

Recent Posts

ನೂರು ರೋಗಗಳಿಗೂ ಒಂದೇ ಔಷಧ ಪಾನೀಯ: ಎಳನೀರು

ಎಳನೀರು ನೂರು ರೋಗಗಳಿಗೆ ಒಂದೇ ಔಷಧಿ ಎಂಬುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಎಳನೀರಿನಲ್ಲಿ ಅಧಿಕ  ವಿಟಮಿನ್ ಹಾಗೂ ಖನಿಜವನ್ನು ಒಳಗೊಂಡಿದೆ.…

4 mins ago

ಪಟಾಕಿ ಘಟಕ ಸ್ಫೋಟಗೊಂಡು 8 ಕಾರ್ಮಿಕರು ಸಾವು !

ಇಂದು ತಮಿಳುನಾಡಿನ ಶಿವಕಾಶಿ ಸಮೀಪದ ಸೆಂಗಮಲಪಟ್ಟಿಯಲ್ಲಿರುವ ಪಟಾಕಿ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಎಂಟು ಕಾರ್ಮಿಕರು ಸಾವನ್ನಪ್ಪಿದ್ದಾರೆ.

8 mins ago

ಎಸ್‌ಎಸ್‌ಎಲ್‌ಸಿ ಫೇಲ್; ಮಂಡ್ಯದ ಬಾಲಕ ನೇಣಿಗೆ ಶರಣು, ವಿಷ ಸೇವಿಸಿದ ವಿದ್ಯಾರ್ಥಿನಿ

ರಾಜ್ಯಾದ್ಯಂತ ಇಂದು ಬೆಳಗ್ಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದೆ. ಆದರೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಂಡ್ಯ ವಿದ್ಯಾರ್ಥಿ ಲಿಖಿತ್ ಫೇಲ್ ಆಗಿದ್ದಕ್ಕೆ ಮನನೊಂದು…

15 mins ago

ಆಟೋ ರಿಕ್ಷಾ ಡಿಕ್ಕಿ ಹೊಡೆದು ಪಾದಚಾರಿ ಸಾವು

ಸಂಪ್ಯದಲ್ಲಿ ಆಟೋ ರಿಕ್ಷಾವೊಂದು ಡಿಕ್ಕಿಯಾಗಿ ಪಾದಚಾರಿಯಾಗಿದ್ದ ನಿವೃತ ಗಣಿತ ಶಿಕ್ಷಕ ಮರಿಕೆ ನಿವಾಸಿ ಸೂರ್ಯನಾರಾಯಣ ಕಾರಂತ (80.ವ)ರವರು ಮೃತಪಟ್ಟ ಘಟನೆ…

25 mins ago

100ರ ಮುಖ ಬೆಲೆಯ ಹಳೆ ಮಾದರಿ ನೋಟು ರದ್ದಾಗದಿದ್ದರೂ ಚಲಾವಣೆಗೆ ಹಿಂದೇಟು

ತಾಲ್ಲೂಕಿನಲ್ಲಿ ಸದ್ಯ ಚಲಾವಣೆಯಲ್ಲಿರುವ ಯಾವುದೇ ನೋಟು ಬಂದ್ ಆಗದಿದ್ದರೂ ₹100ರ ಮುಖ ಬೆಲೆಯ ಹಳೆ ಮಾದರಿ ನೋಟು ಹಾಗೂ ₹10…

34 mins ago

ಇಂದಿನ ಆರ್​​​ಸಿಬಿ, ಪಂಜಾಬ್​​ ನಡುವಿನ ಐಪಿಎಲ್​​ ಪಂದ್ಯ ರದ್ದು?

ಕಳೆದ ಮೂರು ದಿನಗಳಿಂದ ಇಡೀ ದೇಶಾದ್ಯಂತ ಭಾರೀ ಮಳೆಯಾಗಿದೆ. ಹಿಮಾಚಲ ಪ್ರದೇಶದಲ್ಲೂ ಗುಡುಗು ಸಮೇತ ಮಳೆ ಸುರಿಯುತ್ತಿದೆ. ಇಷ್ಟೇ ಅಲ್ಲ…

35 mins ago