Categories: ಮಂಗಳೂರು

ಅಬ್ಬಕ್ಕನ ಹೋರಾಟ ನಮಗೆಲ್ಲರಿಗೂ ಬೆಳಕಾಗಬೇಕು: ದುಗ್ಗಣ್ಣ ಸಾವಂತರು

ಮಂಗಳೂರು : ಉಳ್ಳಾಲದ ವೀರರಾಣಿ ಅಬ್ಬಕ್ಕನ ಹೋರಾಟದ ಕಿಚ್ಚು ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಮುನ್ನುಡಿಯಾಗಿದ್ದು ಮಹಿಳೆಯಾದರೂ ಸಹ ಆಕೆಯ ಧೈರ್ಯ ಸಾಹಸವನ್ನು ಎಂದಿಗೂ ಮರೆಯಬಾರದು, ಆಕೆಯೇ ನೈಜ ಸ್ವಾತಂತ್ರ್ಯದ ಚಿತ್ರಣವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಬಹುದೊಡ್ಡ ಜವಬ್ದಾರಿ ನಮ್ಮದಾಗಿದೆ ಎಂದು ಮೂಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು ಹೇಳಿದರು.

ಅವರು ಮಂಗಳೂರಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳು ಭವನದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಜಂಟಿ ಸಂಯೋಜನೆಯಲ್ಲಿ ಡಿಸೆಂಬರ್ ೨೧ರಂದು ಉಳ್ಳಾಲದಲ್ಲಿ ನಡೆಯಲಿರುವ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿ ಮತನಾಡಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಅಧ್ಯಕ್ಷತೆಯನ್ನು ವಹಿಸಿ, ಉತ್ಸವದ ಬಗ್ಗೆ ಮಾರ್ಗದರ್ಶನ ನೀಡಿದರು. ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸ್ವಾಗತಾಧ್ಯಕ್ಷ ಜಯರಾಮ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಮೂಲ್ಕಿ ಅರಮನೆಯ ಗೌತಮ್ ಜೈನ್, ಸಾಹಿತಿ ಯೋಗೀಶ್ ಕಾಂಚನ್, ಅಕಾಡೆಮಿ ಸದಸ್ಯರಾದ ನಾಗೇಶ್ ಕುಲಾಲ್, ಸಂತೋಷ್ ಪೂಜಾರಿ ಕಾರ್ಕಳ ಅಬ್ಬಕ್ಕ ಉತ್ಸವ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷ ದಿನಕರ ಉಳ್ಳಾಲ್ ಸ್ವಾಗತಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿಗಟ್ಟಿ ವಂದಿಸಿದರು, ಅಕಾಡೆಮಿ ಸದಸ್ಯ ನರೇಂದ್ರ ಕೆರೆಕಾಡು ಕಾರ್ಯಕ್ರಮ
ನಿರೂಪಿಸಿದರು.

Gayathri SG

Recent Posts

ಮಲೆ ಮಹದೇಶ್ವರ ಸನ್ನಿಧಿಯಲ್ಲಿ 34 ದಿನಗಳ ಅಂತರದಲ್ಲಿ ದಾಖಲೆ ಪ್ರಮಾಣದ ಕಾಣಿಕೆ ಸಂಗ್ರಹ

ಪವಾಡ ಪುರುಷ ಮಲೆ ಮಹದೇಶ್ವರ ಸನ್ನಿಧಿಗೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, 34 ದಿನಗಳ ಅಂತರದಲ್ಲಿ ದಾಖಲೆ…

8 mins ago

ಎಸ್‌ಇಪಿಸಿ ಉನ್ನತ ಶಿಕ್ಷಣದ ಕಾರ್ಯಪಡೆಗೆ ಫಾದರ್ ಫ್ರಾನ್ಸಿಸ್ ಡಿ ಅಲ್ಮೇಡಾ ನಾಮನಿರ್ದೇಶನ

ಕರ್ನಾಟಕದಲ್ಲಿ ಉನ್ನತ ಶಿಕ್ಷಣದ ಭೂದೃಶ್ಯವನ್ನು ಸುಧಾರಿಸುವ ಉದ್ದೇಶದಿಂದ ಪೂರ್ವಭಾವಿ ಕ್ರಮದಲ್ಲಿ, ರಾಜ್ಯ ಶಿಕ್ಷಣ ನೀತಿ ಆಯೋಗವು (ಎಸ್‌ಇಪಿಸಿ) ವಿಷಯಾಧಾರಿತ ಕಾರ್ಯಪಡೆಗಳ…

21 mins ago

ಕೇಂದ್ರ ಸರಕಾರದ ವಿರುದ್ಧ ರಣಕಹಳೆ ಮೊಳಗಿಸಿದ ಕಾಂಗ್ರೆಸ್ ನಾಯಕರು

ಕೇಂದ್ರದ ನರೇಂದ್ರ ಮೋದಿ ಸರಕಾರ ಕರುನಾಡಿಗೆ ಕೊಟ್ಟಿದ್ದು ಚೊಂಬು, ಜಿಎಸ್ ಟಿ ಹಣದಲ್ಲೂ ಮಲತಾಯಿ ಧೋರಣೆ ಅನುಸರಿಸುವ ಮತ್ತು ಬರ…

36 mins ago

ಹಕ್ಕಿ ಜ್ವರ ಭೀತಿ: ಗಡಿಭಾಗ ದ.ಕದಲ್ಲಿ ಮುಂಜಾಗ್ರತಾ ಕ್ರಮ, ಚೆಕ್ ಪೋಸ್ಟ್ ನಿರ್ಮಾಣ

ಕೇರಳ ರಾಜ್ಯದಲ್ಲಿ ಹಕ್ಕಿ ಜ್ವರ ಭೀತಿ ಹಿನ್ನೆಲೆಯಲ್ಲಿ ಕೇರಳದ ಗಡಿಭಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.

51 mins ago

ಗುಟ್ಕಾ ಹಾಕಿ ಬುಲೆಟ್ ಓಡಿಸೋ ಮಡದಿಗೆ ಡಿವೋರ್ಸ್ ಕೊಡಲು ಮುಂದಾದ ಪತಿರಾಯ

ಕುಡಿದು ಬರುವ ಗಂಡ ಹಣವನ್ನೆಲ್ಲ ಖಾಲಿ ಮಾಡಿ ಪತ್ನಿಯನ್ನು ಬೀದಿಗೆ ಹಾಕಿದ ಉದಾಹರಣೆ ಇದೆ. ಅದೇ ರೀತಿ ಕುಡಿತ ಸೇರಿದಂತೆ…

57 mins ago

ಲೋಕಸಭೆ ಚುನಾವಣೆ ಮಹತ್ವ ಈಗ ಅರ್ಥವಾಗಿದೆ: ಸುನೀಲಗೌಡ

ಲೋಕಸಭೆ ಚುನಾವಣೆಯ ಮಹತ್ವವನ್ನು ನಮ್ಮ ಜನ ಅರಿಯುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದು ಶಾಸಕ ಸುನೀಲಗೌಡ ಪಾಟೀಲ ಹೇಳಿದರು.

1 hour ago