ಮಂಗಳೂರು

‘ಅದಾನಿ’ ಹೆಸರಿನಿಂದ ಹೊರಬಂದ ಮಂಗಳೂರು ವಿಮಾನ ನಿಲ್ದಾಣ

ಮಂಗಳೂರು :  ಮಂಗಳೂರು ವಿಮಾನ ನಿಲ್ದಾಣದ ನಾಮಫಲಕಗಳಿಂದ ಅದಾನಿ ಹೆಸರನ್ನು ಕಿತ್ತುಹಾಕಲಾಗಿದೆ ಎಂದು ಭಾನುವಾರ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಮಂಗಳೂರು ಸೇರಿದಂತೆ ದೇಶದ ಹಲವು ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಅದಾನಿ ಸಮೂಹ ಗುತ್ತಿಗೆಗೆ ಪಡೆದಿದೆ. ಅಲ್ಲೆಲ್ಲ ಮೂಲ ಹೆಸರಿನೊಂದಿಗೆ ನಾಮಫಲಕಗಳಲ್ಲಿ ಅದಾನಿ ಹೆಸರನ್ನೂ ಬಳಸುವ ಪ್ರಯತ್ನಗಳಾಗಿವೆ. ಈ ಬಗ್ಗೆ ಪ್ರತಿಭಟನೆಗಳೂ ಎದುರಾಗಿವೆ. ಮಂಗಳೂರಿನಲ್ಲಿ ಸಹ ಇದರ ವಿರುದ್ಧ ಅಭಿಯಾನಗಳಾಗಿದ್ದವು. ಇದೀಗ ಮಂಗಳೂರಿನ ವಿಮಾನ ನಿಲ್ದಾಣ ಫಲಕದಿಂದ ಅದಾನಿ ಹೆಸರು ಕಡಿತವಾಗಿರುವುದು ಉಳಿದೆಡೆಗಳಲ್ಲೂ ಈ ಮಾದರಿ ಪ್ರೇರೇಪಣೆ ನೀಡಬಹುದೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಮಾರ್ಚ್ 2019ರಲ್ಲಿ ಅದಾನಿ ಸಮೂಹವು ಲಖನೌ, ಜೈಪುರ, ತಿರುವನಂತಪುರ, ಮಂಗಳೂರು, ಗುವಾಹಟಿ ಹಾಗೂ ಅಹಮದಾಬಾದುಗಳ ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಹಾಗೂ ನಿರ್ವಹಣೆ ಮಾಡುವ ಗುತ್ತಿಗೆಗಳನ್ನು ಹರಾಜಿನಲ್ಲಿ ಗೆದ್ದುಕೊಂಡಿತು. ಮುಂಬೈ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯೂ ಅದಾನಿ ಬಳಿಯೇ ಇದೆ.

ಭಾರತೀಯ ವಿಮಾನ ಪ್ರಾಧಿಕಾರವು ಆದಾಯ ಗಳಿಕೆ ಉದ್ದೇಶದಿಂದ ಇಂಥದೊಂದು ಕ್ರಮಕ್ಕೆ ಮುಂದಾಗಿದೆ. ಈ ಮೊದಲು ಹೀಗೆ ಗುತ್ತಿಗೆ ಪಡೆದುಕೊಂಡವರು ಆ ವಿಮಾನ ನಿಲ್ದಾಣದಿಂದ ಗಳಿಸುವ ಆದಾಯದ ಒಂದು ಭಾಗವನ್ನು ಪ್ರಾಧಿಕಾರಕ್ಕೆ ಅರ್ಥಾತ್ ಸರ್ಕಾರಕ್ಕೆ ಕೊಡಬೇಕಾಗಿತ್ತು. ಆದರೆ ಈ ಬಾರಿ ಪ್ರತಿ ಪ್ರಯಾಣಿಕನಿಗೆ ಒಂದು ನಿರ್ದಿಷ್ಟ ಆದಾಯವನ್ನು ನೀಡಬೇಕಾದ ಹೊಸ ಷರತ್ತಿನೊಂದಿಗೆ ಹರಾಜು ಪ್ರಕ್ರಿಯೆ ನಡೆಯಿತು. ಇದರಲ್ಲಿ ಅದಾನಿ ಸಮೂಹ ದೊಡ್ಡಮಟ್ಟದ ಗುತ್ತಿಗೆಗಳನ್ನು ಗೆದ್ದುಕೊಂಡಿತು.

ಇಲ್ಲೆಲ್ಲ ಸ್ಥಳೀಯರ ಅಪೇಕ್ಷೆ ಏನೆಂದರೆ, ಅದಾನಿ ಸಮೂಹವು ವಿಮಾನ ನಿಲ್ದಾಣಗಳಲ್ಲಿ ಅದಕ್ಕೆ ಸೇರಿದ ವ್ಯವಹಾರಗಳನ್ನು ಮಾಡಿಕೊಳ್ಳಲಿ, ಆದರೆ ನಾಮಫಲಕಗಳಲ್ಲಿ ಅದಕ್ಕೆ ಜಾಗ ಕೊಡಬೇಕಿಲ್ಲ ಎಂಬುದು. ಯಾವುದೇ ವಿಮಾನ ನಿಲ್ದಾಣ ಅದಾನಿ ಏರ್ಪೋರ್ಟ್ ಎಂದು ಕರೆಸಿಕೊಳ್ಳುವುದರಿಂದ ಅದು ಸಂಪೂರ್ಣ ಖಾಸಗಿ ಸ್ವತ್ತೆಂಬಂತೆ ಆಗುತ್ತದೆ ಎಂಬ ಆಕ್ಷೇಪಗಳು ಬಂದಿದ್ದವು.

Sneha Gowda

Recent Posts

ಖಾರವಾದ ಚಿಪ್ಸ್ ತಿಂದ 14ರ ಬಾಲಕನಿಗೆ ಹೃದಯ ಸ್ತಂಭನ

ಅತ್ಯಂತ ಖಾರವಾದ ಟೋರ್ಟಿಲ್ಲಾ ಚಿಪ್ ತಿನ್ನುವ ಸಾಮಾಜಿಕ ಮಾಧ್ಯಮ ಚಾಲೆಂಜ್‌ ನಲ್ಲಿ ಭಾಗವಹಿಸಿದ ಅಮೆರಿಕದ 14ರ ಹರೆಯದ ಹುಡುಗನೊಬ್ಬ ಹೃದಯ…

14 mins ago

ನಂಜನಗೂಡು ಶ್ರೀ ನಂಜುಂಡೇಶ್ವರನ ದರ್ಶನ ಪಡೆದ ಹೆಚ್. ಡಿ ರೇವಣ್ಣ

ಮಹಿಳೆ ಕಿಡ್ನಾಪ್ ಕೇಸ್ ನಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ನಂತರ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಮಾಜಿ ಸಚಿವ ಹೆಚ್.…

31 mins ago

ʼನನ್ನನ್ನು ನೋಡಬೇಡಿ, ಅಟಲ್‌ ಸೇತುವೆ ನೋಡಿʼ ಎಂದ ರಶ್ಮಿಕಾಗೆ ಪಿಎಂ ಮೋದಿ ಮೆಚ್ಚುಗೆ

ನಟಿ ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ಸಿನಿಮಾಗಳು.…

59 mins ago

ಗಮನ ಸೆಳೆದ ಮಾವು ಮೇಳ; ವಿವಿಧ ತಳಿಯ ಮಾವಿನ ಹಣ್ಣುಗಳ ಪ್ರದರ್ಶನ

ಹಣ್ಣುಗಳ ರಾಜನೆಂದು ಕರೆಯಲಾಗುವ, ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ…

1 hour ago

ಇಂದು ರೀ ರಿಲೀಸ್ ಆದ ಉಪ್ಪಿಯ ‘‘A’’ ಸಿನಿಮಾ; ಸ್ವಾಗತಿಸಿದ ಫ್ಯಾನ್ಸ್

ಕನ್ನಡ ಚಿತ್ರರಂಗದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ ಉಪೇಂದ್ರ ನಿರ್ದೇಶನದ “A” ಸಿನಿಮಾ ಇಂದು ರೀ ರಿಲೀಸ್​ ಆಗಿದೆ. ಬೆಂಗಳೂರಿನ…

2 hours ago

ಚಾರ್ ಧಾಮ್​ ಯಾತ್ರೆ, ದೇವಸ್ಥಾನಗಳ ಬಳಿ ರೀಲ್ಸ್​ಗೆ ನಿಷೇಧ

ಚಾರ್​ ಧಾಮ್ ಯಾತ್ರೆ ಶುರುವಾಗಿದ್ದು, ಮೇ 31ರವರೆಗೆ ವಿಐಪಿ ದರ್ಶನಕ್ಕೆ ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ. ಅಷ್ಟೇ ಅಲ್ಲದೆ ದೇವಾಲಯದಗಳ…

2 hours ago