News Karnataka Kannada
Tuesday, April 23 2024
Cricket
ಮಂಗಳೂರು

ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಬೇಸಿಗೆ ಶಿಬಿರಗಳು ಪ್ರೇರಣೆ: ಸತೀಶ್ ಕುಮಾರ್

Summer Camp
Photo Credit : News Kannada
ಬಂಟ್ವಾಳ: ಮಕ್ಕಳಲ್ಲಿ ಅಡಕವಾಗಿರುವ ಸುಪ್ತ ಪ್ರತಿಭೆಗಳ ಅವರಣಕ್ಕೆ ಬೇಸಿಗೆ ಶಿಬಿರಗಳು ಪ್ರೇರಣೆಯಾಗುತ್ತದೆ ಎಂದು ರೋಟರಿ ಕ್ಲಬ್ ಬಿಸಿ ರೋಡ್ ಸಿಟಿಯ ಅಧ್ಯಕ್ಷ ಸತೀಶ್ ಕುಮಾರ್ ಹೇಳಿದ್ದಾರೆ.
ಬೆಂಗಳೂರು ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ ಸಂಸ್ಥೆ, ರೋಟರಿ ಕ್ಲಬ್ ಬಿಸಿರೋಡ್ ಸಿಟಿ, ಸಂಸಾರ ಜೋಡುಮಾರ್ಗ ಹಾಗೂ ಅವನಿ ಇಕೋ ಕ್ಲಬ್ ಕಲ್ಲಡ್ಕ ಶಾಲೆ ಇದರ ಸಹಯೋಗದಲ್ಲಿ ಕಲ್ಲಡ್ಕ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆರಂಭಗೊಂಡ ಮೂರು ದಿನಗಳ ಬಹುಮುಖಿ ಮಕ್ಕಳ ಬೇಸಿಗೆ ಶಿಬಿರದ  ಉದ್ಘಾಟನಾ ಸಮಾರಂಭದಲ್ಲಿ  ಅವರು ಭಾಗವಹಿಸಿ ಮಾತನಾಡಿದರು.
ಸಮಾರಂಭದಲ್ಲಿ ಭಾಗವಹಿಸಿದ್ದ ಎಲ್ಲಾ ಅತಿಥಿಗಳು ಜೊತೆಯಾಗಿ ಗೊಂಬೆ ಕುಣಿಸುವ  ಮೂಲಕ ಬಹುಮುಖಿ ಮಕ್ಕಳ ಬೇಸಿಗೆ ಶಿಬಿರವನ್ನು‌ ಉದ್ಘಾಟಿಸಿದರು.
ಬಿಸಿರೋಡು ಸಿಟಿ ರೋಟರಿ ಕ್ಲಬ್ಬಿನ ಜಿಎಸ್ಆರ್ ಪದ್ಮನಾಭ  ರೈ ಅವರು ಮಾತನಾಡಿ,  ಕಲ್ಲಡ್ಕ ಸರ್ಕಾರಿ ಶಾಲೆ ಇದೀಗ ಎಲ್ಲರ ಅಚ್ಚುಮೆಚ್ಚಿನ ಶಾಲೆಯಾಗಿ ಮಿಂಚುತ್ತಿರುವುದು ಶಾಲೆಯ ಹಳೆ ವಿದ್ಯಾರ್ಥಿಯಾಗಿರುವ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದ್ದು, ರೋಟರಿ ಬಿಸಿರೋಡು ಸಿಟಿಯ ವತಿಯಿಂದ ಶಾಲೆಯ ಅಭಿವೃದ್ಧಿಗೆ ನಿರಂತರ ಸಹಕಾರ ನೀಡುವುದಾಗಿ ಅವರು ತಿಳಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಧುಸೂದನ್ ಐತಾಳ್ ಮಾತನಾಡಿ, ಮಕ್ಕಳ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಮೌನೇಶ್ ರವರು ಶಾಲೆಯಲ್ಲಿ ನಡೆಸುತ್ತಿರುವ ಚಟುವಟಿಕೆಗಳು ಮಾದರಿಯಾಗಿದೆ, ವಿದ್ಯಾರ್ಥಿಗಳು ಇದರಲ್ಲಿ ಆಸಕ್ತಿಯಿಂದ ತೊಡಗಿಸಿಕೊಳ್ಳಬೇಕು ಎಂದರು.
ಶಾಲಾ ಮುಖ್ಯ ಶಿಕ್ಷಕ ಅಬೂಬಕರ್ ಅಶ್ರಫ್ ಮಾತನಾಡಿ,  ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಐಎಫ್ಎ ಮುಖೇನ ನಡೆಯುತ್ತಿರುವ ಕಲಾ ಬರಹ ಕಲಾ ಪತ್ರಿಕೆಯ ಚಟುವಟಿಕೆಗಳು ನೆರವಾಗಿದೆ ಎಂದರು.
ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗದ ಮಾಲಕ ರಮೇಶ್ ಕಲ್ಲಡ್ಕ , ಬಿಸಿರೋಡು ಸಿಟಿ ರೋಟರಿ ಕ್ಲಬ್ಬಿನ ನಿಯೋಜಿತ ಅಧ್ಯಕ್ಷ ಗಣೇಶ ಶೆಟ್ಟಿ ಗೋಳ್ತಮಜಲು, ನೀನಾಸಂ ಪದವೀಧರೆ, ನಟಿ ಭವಾನಿ ಪುತ್ತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಐಎಫ್ಎ ಗ್ರಾಂಟಿ, ಶಿಬಿರ ನಿರ್ದೇಶಕ ಮೌನೇಶ್ ವಿಶ್ವಕರ್ಮ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು