News Karnataka Kannada
Saturday, April 20 2024
Cricket
ಮಂಗಳೂರು

ವಿಭಜಕ ಶಕ್ತಿಗಳ ಕುತಂತ್ರವನ್ನು ಸೋಲಿಸಲು ಮುಂದಾಗಿ : ಸಂತೋಷ್ ಬಜಾಲ್

Untitled 153
Photo Credit : News Kannada
ಕಂಕನಾಡಿ : ಅಮೇರಿಕಾದ ಚಿಕಾಗೋ ನಗರದಲ್ಲಿ ಬಂಡವಾಳಶಾಹಿ ಮಾಲಕ ವರ್ಗದ ವಿರುದ್ದ ತಮ್ಮ ಹಕ್ಕುಗಳ ರಕ್ಷಣೆಗಾಗಿ ಕಾರ್ಮಿಕ ವರ್ಗ ನಡೆಸಿದ ಧೀರೋದಾತ್ತ ಹೋರಾಟದಲ್ಲಿ ತ್ಯಾಗ, ಬಲಿದಾನಗೈದ ಸಂಗಾತಿಗಳ ನೆನಪಿಸುವ ದಿನವೇ ಮೇ 1. ಇಂದು ನಮ್ಮನ್ನಾಳುವ ಸರಕಾರಗಳು ಮೇ ದಿನ ಆಶಯವನ್ನು ಬುಡಮೇಲು ಮಾಡಲು ಹೊರಟಿದೆ. ಕಾರ್ಮಿಕ ವರ್ಗದ ಹಿತಾಸಕ್ತಿ ಕಾಪಾಡುವ ಬದಲು ಮಾಲಕ ವರ್ಗದ ಪರವಾಗಿ ಮಂಡಿಯೂರಿರುವ ವಿಭಜಕ ಶಕ್ತಿಗಳ ಕುತಂತ್ರವನ್ನು ಸೋಲಿಸಲು ಮುಂದಾಗಬೇಕಾಗಿದೆ ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಕಾರ್ಮಿಕರ ಮೇ ದಿನಾಚರಣೆಯ ಅಂಗವಾಗಿ ಸಿಐಟಿಯು ಕಂಕನಾಡಿ, ಅಳಪೆ ಸಮಿತಿ ಬಜಾಲ್ ಪಕ್ಕಲಡ್ಕ ಬಸ್ ನಿಲ್ದಾಣದ ಬಳಿ ಆಯೋಜಿಸಲಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. .
ಕಾರ್ಮಿಕ ಮುಖಂಡರಾದ ಅಶೋಕ್ ಸಾಲ್ಯಾನ್ ಮಾತನಾಡುತ್ತಾ ಬಿಜೆಪಿ ಸರಕಾರ ಕಾರ್ಮಿಕರ ಹಕ್ಕುಗಳ ಕಾಯ್ದೆಗಳನ್ನು ರದ್ದು ಮಾಡುವ ಮೂಲಕ ಧಮನಿಸಲು ಹೊರಟಿದೆ. ದೇಶದ 44 ಕಾರ್ಮಿಕ ಕಾನೂನುಗಳನ್ನು ಈಗಾಗಲೇ ತಿದ್ದುಪಡಿ ಹೆಸರಿನಲ್ಲಿ 4 ಸಂಹಿತೆಗಳನ್ನಾಗಿಸಿ ಮಾಲಕರ ಪರವಾಗಿ ಕಾನೂನು ರೂಪಿಸಿದೆ ಇವುಗಳ ಪ್ರಬಲ ಚಳುವಳಿ ರೂಪಿಸಲು ಕಾರ್ಮಿಕ ವರ್ಗ ಈ ದಿನ ಪ್ರತಿಜ್ಞೆಗೈಯಬೇಕಾಗಿದೆ ಎಂದರು.
 ಹಿರಿಯ ಮಾಜಿ ಮುಖಂಡರಾದ ಹರಿಶ್ಚಂದ್ರ ನಾಯ್ಕ್ ಕೆಂಬಾವುಟವನ್ನು ಹಾರಿಸುವ ಮೂಲಕ ಮೇ ದಿನ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ವೇಳೆ ಕಾರ್ಮಿಕ ಮುಖಂಡರಾದ ಲೋಕೇಶ್ ಎಂ, ಸುರೇಶ್ ಬಜಾಲ್, ಸಿಪಿಐಎಂ ನಗರ ಸಮಿತಿ ಮುಖಂಡರಾದ ದೀಪಕ್ ಬಜಾಲ್ , ಧಿರಾಜ್ ಬಜಾಲ್ ,ಗಿರೀಶ್ ಪಕ್ಕಲಡ್ಕ, ಆನಂದ ಎನೆಲ್ಮಾರ್, ಪ್ರಕಾಶ್ ಶೆಟ್ಟಿ, ಕೇಶವ ಭಂಡಾರಿ, ಅಶೋಕ್ ಎನೆಲ್ಮಾರ್, ಧಿರಾಜ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.
ಸಿಪಿಐಎಂ ಅಳಪೆ ದಕ್ಷಿಣ ಶಾಖಾ ಕಾರ್ಯದರ್ಶಿ ವರಪ್ರಸಾದ್ ಸ್ವಾಗತಿಸಿ, ಜಗದೀಶ್ ಬಜಾಲ್ ವಂದಿಸಿದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
15229
Jaya Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು