News Karnataka Kannada
Wednesday, April 17 2024
Cricket
ಮಂಗಳೂರು

ರಸ್ತೆಯಿಂದ ಮನೆಯ ಅಂಗಳಕ್ಕೆ ಉರುಳಿ ಬಿದ್ದ ರಿಕ್ಷಾ: ನಾಲ್ವರಿಗೆ ಗಾಯ

Accident Auto
Photo Credit :

ಬೆಳ್ತಂಗಡಿ: ತಾಲೂಕಿನ ಮುಂಡಾಜೆ-ಕಲ್ಮಂಜ ಗ್ರಾಮಗಳ ಸಂಪರ್ಕದ ರಸ್ತೆಯ ಬಲ್ಯಾರ್ ಕಾಪು ಎಂಬಲ್ಲಿ ಶುಕ್ರವಾರ ರಾತ್ರಿ ಖಾಸಗಿ ರಿಕ್ಷಾವೊಂದು ರಸ್ತೆಯಿಂದ ಮನೆಯೊಂದರ ಅಂಗಳಕ್ಕೆ ಉರುಳಿಬಿದ್ದು ನಾಲ್ವರು ಗಾಯಗೊಂಡಿರುವ ಕುರಿತು ತಿಳಿದುಬಂದಿದೆ.

ಉಪ್ಪಿನಂಗಡಿಯ ಕರಾಯ ಸಮೀಪದ ವರು ಕಲ್ಮಂಜ ಗ್ರಾಮದ ಒಂಜರೆಬೈಲು ಪರಿಸರದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಆಗಮಿಸುತ್ತಿದ್ದರು.
ಈ ವೇಳೆ ಅಗಲ ಕಿರಿದಾದ ಈ ರಸ್ತೆಯ ಬಲ್ಯಾರ್ ಕಾಪು ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ರಿಕ್ಷಾ ರಸ್ತೆಯಿಂದ 15 ಅಡಿ ಆಳದ ಮನೆಯೊಂದರ ಮೇಲ್ಭಾಗದ ಅಂಗಳಕ್ಕೆ ಉರುಳಿ ಬಿದ್ದಿದೆ. ಸಮೀಪದ ಮನೆಯವರು ಹಾಗೂ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.

ಚಾಲಕ ಸೇರಿದಂತೆ ಮಹಿಳೆ ಸಹಿತ ರಿಕ್ಷಾದಲ್ಲಿದ್ದ ನಾಲ್ವರು ಗಾಯಗೊಂಡಿದ್ದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.

ಅಪಾಯಕಾರಿ ತಿರುವು
ಬಲ್ಯಾರ್ ಕಾಪು ಪ್ರದೇಶದಲ್ಲಿರುವ ಈ ತಿರುವು ಭಾರಿ ಅಪಾಯಕಾರಿಯಾಗಿದೆ,ಇಲ್ಲಿನ ತಿರುವು ವಾಹನ ಸವಾರರಿಗೆ ತಕ್ಷಣ ಗಮನಕ್ಕೆ ಬರುವುದಿಲ್ಲ. ರಸ್ತೆಯುದ್ದಕ್ಕೂ ಸಾಕಷ್ಟು ಗಿಡಗಂಟಿಗಳು ಬೆಳೆದು ವಾಹನ ಸವಾರರಿಗೆ ಅಡಚಣೆ ನೀಡುತ್ತಿವೆ.
ರಿಕ್ಷಾ ಬಿದ್ದ ಸ್ಥಳದ ಪ್ರದೇಶದಲ್ಲಿ ರಸ್ತೆಯ ಒಂದು ಭಾಗ 15 ಅಡಿಗಿಂತ ಅಧಿಕ ಆಳವಿದ್ದು ಯಾವುದೇ ತಡೆಬೇಲಿ ಕೂಡ ಇರುವುದಿಲ್ಲ. ಈ ಅಪಾಯಕಾರಿ ಸ್ಥಳದಲ್ಲಿ ಬೀದಿ ದೀಪಗಳ ವ್ಯವಸ್ಥೆ ಕೂಡ ಇಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು