News Karnataka Kannada
Saturday, April 13 2024
Cricket
ಮಂಗಳೂರು

ಯುವ ಪೀಳಿಗೆಯಿಂದ ಸಂಸ್ಕೃತಿ , ಸಂಸ್ಕಾರದ ಪಾಲನೆಯಾಗಲಿ:ವಿಜಯರಾಘವ ಪಡುವೆಟ್ನಾಯ .

Ujire
Photo Credit : News Kannada

ಬೆಳ್ತಂಗಡಿ : ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ 18 ನೇ ವರ್ಷದಲ್ಲಿ 15 ದಿನಗಳ ವಸಂತ ಪಾಠ ಶಿಬಿರವನ್ನು ತುಳು ಶಿವಳ್ಳಿ ಸಭಾ ಸಹಯೋಗದೊಂದಿಗೆ ಎಲ್ಲರ ಸಹಕಾರದೊಂದಿಗೆ ನಡೆಸುತ್ತಿದ್ದೇವೆ. ಮುಂದಿನ ಯುವ ಪೀಳಿಗೆಗೆ ನಮ್ಮ ಸನಾತನ ಸಂಸ್ಕಾರ ಹಾಗು ಸಂಸ್ಕೃತಿಯನ್ನು ಕಲಿಸಿ ಮುಂದುವರಿಸಿಕೊಂಡು ಹೋಗಬೇಕಾಗಿದೆ. ಧಾರ್ಮಿಕ ಆಚರಣೆಯಲ್ಲಿ ಭಕ್ತಿ,ಶ್ರದ್ದೆ, ನಂಬಿಕೆಯಿರಿಸಿ ಹಿರಿಯರನ್ನು ಗೌರವಿಸುವ ಉತ್ತಮ ಸಂಸ್ಕಾರದ ಪಾಲನೆಯಾಗಬೇಕೆಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯ ಹೇಳಿದರು.

ಅವರು ಎ .17 ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ ಸಹಯೋಗದೊಂದಿಗೆ ನಡೆಯುತ್ತಿರುವ 15 ದಿನಗಳ ವಸಂತ ವೇದಪಾಠ ಶಿರವನ್ನು ದೀಪ ಪ್ರಜ್ವಲಿಸಿ ಚಾಲನೆ ನೀಡಿ ಶುಭ ಹಾರೈಸಿದರು. ಮುಖ್ಯ ಅತಿಥಿ ಶ್ರೀ ಜನಾರ್ದನ ಸೊಸೈಟಿ ಅಧ್ಯಕ್ಷ ಗಂಗಾಧರ ರಾವ್ ಕೆವುಡೇಲು ಅವರು ಸಮಾಜದ ಒಳಿತಿಗೆ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜತೆಗೆ ಸಂಸ್ಕಾರವಿದ್ದರೆ ಮಾತ್ರ ಪರಿಪೂರ್ಣವಾಗುವುದು. ಉನ್ನತ ಶಿಕ್ಷಣ ಪಡೆಯಲು ಇಂತಹ ಶಿಬಿರಗಳು ಅನುಕೂಲವಾಗುವುದು ಎಂದು ನುಡಿದು ಶುಭ ಕೋರಿದರು. ನಿವೃತ್ತ ಸಂಸ್ಕೃತ ಉಪನ್ಯಾಸಕ ಪ್ರೊ !ವಿಷ್ಣುಮೂರ್ತಿ ಭಟ್ ಜಪ ,ತಪ ,ನಿಷ್ಕಾಮ ಭಕ್ತಿಯ ಭಗವಂತನ ಆರಾಧನೆ,ಸತ್ಕರ್ಮದಿಂದ ಬ್ರಾಹ್ಮಣ ಜನ್ಮ ಸಾರ್ಥಕಪಡಿಸಿಕೊಳ್ಳಬೇಕು ಎಂದರು.

ಶಿಬಿರದ ಗುರು ಶ್ರೀ ಹರಿ ಉಡುಪಿ ಅವರು ಶಿಬಿರಾರ್ಥಿಗಳು ತಾವು ಕಲಿತದ್ದನ್ನು ಬೇರೆಯವರಿಗೆ ಹೇಳಿ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕೆಂದರು . ಅಧ್ಯಕ್ಷತೆ ವಹಿಸಿದ್ದ ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಸಮಾಜದ ಉಪನೀತ ವಟುಗಳಿಗೆ ಸಂಸ್ಕಾರ ನೀಡುವುದೇ ಶಿಬಿರದ ಉದ್ದೇಶ. ಸಂಸ್ಕಾರ,ಸಂಧ್ಯಾವಂದನೆ,ಪೂಜಾಪದ್ಧತಿ ಕಲಿಸಿದರೆ ಅದು ಜೀವನ ಪರ್ಯಂತ ನಮ್ಮನ್ನು ಮುನ್ನಡೆಸಿಕೊಂಡು ಹೋಗುತ್ತದೆ . ಹೆತ್ತವರು ಹಾಗು ಪೋಷಕರ ಸಹಕಾರ ಅಗತ್ಯವೆಂದು ನುಡಿದರು . ಬೆಂಗಳೂರು ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದ ಗುರುಗಳಾದ ಅಕ್ಷಯ ಬಲ್ಲಾಳ್ ,ಪೂರ್ಣಪ್ರಜ್ಞ ಆಚಾರ್ ,ಶ್ರೀಹರಿ ಉಡುಪಿ ಮತ್ತು ಶಿಬಿರದ ಪಾಲಕ ವಿಠಲ ಅಮ್ಮಿಣ್ಣಾಯ ಉಪಸ್ಥಿತರಿದ್ದರು. ಶಿಬಿರದಲ್ಲಿ ಸಂಧ್ಯಾವಂದನೆ ,ಪೂಜಾ ಪದ್ಧತಿ, ಯೋಗಾಸನ ,ನೈತಿಕ ಶಿಕ್ಷಣ ,ಪೌರಾಣಿಕ ಕತೆಗಳು ,ಇತ್ಯಾದಿ ವಿಷಯಗಳ ಬಗೆಗೆ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದಾರೆ. ತುಳು ಶಿವಳ್ಳಿ ಸಭಾ ಉಜಿರೆ ವಲಯಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಸ್ವಾಗತಿಸಿ,ತಾಲೂಕು ತುಳು ಶಿವಳ್ಳಿ ಸಭಾ ಕಾರ್ಯದರ್ಶಿ ರಾಜಪ್ರಸಾದ್ ಪೊಲ್ನಾಯ ವಂದಿಸಿ,ಮುರಳಿಕೃಷ್ಣ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಹಾಗು ಹೊರ ತಾಲೂಕು,ಜಿಲ್ಲೆಗಳಿಂದ ಸುಮಾರು 50 ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು