News Karnataka Kannada
Monday, April 22 2024
Cricket
ಮಂಗಳೂರು

ಮುಂಬೈನ ಪ್ರಸಿದ್ಧ ಶ್ರೀ ಕೃಷ್ಣಬಟಾಟ ವಡವನ್ನು ಮಂಗಳೂರಿನ ವೆಜ್ ರೆಸ್ಟೋದಲ್ಲಿ ಆಸ್ವಾದಿಸಿ

Local
Photo Credit : News Kannada

ಮುಂಬೈನ ಪ್ರಸಿದ್ಧ ಶ್ರೀ ಕೃಷ್ಣಬಟಾಟ ವಡ ಶೀಘ್ರದಲ್ಲೇ ಆರಂಭವಾಗಲಿರುವ ಮಂಗಳೂರಿನ ಮಂಗಳಾದೇವಿ ಬಳಿಯ ನವಮಿ ವೆಜ್ ರೆಸ್ಟೋದಲ್ಲಿ ದೊರೆಯಲಿದೆ. ಇಲ್ಲಿ ಬಟಾಟವಾಡ, ಸಾಬುದಾನ ವಡಾ, ಪೋಹಾ ಸಮೋಸ, ಕೊತ್ಮಿರ್ ವಡಿ,ಮುಂತಾದ ಸವಿ, ಸವಿಯಾದ ಮುಂಬೈ ನಗರದ ಫಾಸ್ಟ್ ಫುಡ್ ಗಳನ್ನು ಇಲ್ಲಿ ತಿಂದು ಆನಂದಿಸಬಹುದಾಗಿದೆ.

ನವಮಿ ವೆಜ್ ರೆಸ್ಟೊನ ನವೀನತೆಗಳೇನು?
ಮಂಗಳೂರಿನ ಜನರ ಮತ್ತು ಅವರ ಪ್ರೀತಿ ಪಾತ್ರರ ಸಂತೋಷಕ್ಕಾಗಿ ಹೊಸ ವೆಜ್ ರೆಸ್ಟೋ ಗ್ರಾಹಕರಿಗೆ ಕುಳಿತುಕೊಳ್ಳಲು ಆರಾಮದಾಯಕ ಹವಾನಿಯಂತ್ರಿತ ಆಸನ ವಿಭಾಗ.

ವಾಹನ ಪಾರ್ಕ್ ಮಾಡಲು ವಿಶಾಲವಾದ ಪಾರ್ಕಿಂಗ್ ಸ್ಥಳ
ತಮ್ಮ ಸ್ವಂತ ವಾಹನದಲ್ಲಿ ಕುಳಿತು ನಮ್ಮ ಸ್ವಾದಿಷ್ಟ ಖಾದ್ಯಗಳನ್ನು ಅಸ್ವಾದಿಸಲು ಡ್ರೈವ್-ಇನ್ ಸೇವೆಯನ್ನು ಶೀಘ್ರದಲ್ಲೇ ಪರಿಚಯಿಸಲಾಗುವುದು.

ಮನೆಯ ವಾತಾವರಣದ ಅನುಭವ ನೀಡುವ ಸುಮಾರು 150 ಆಸನಗಳ ಸಾಮರ್ಥ್ಯದ ಸ್ಥಳಾವಕಾಶ. ಸ್ವ ಸಹಾಯ ಪದ್ಧತಿ ಯೊಂದಿಗೆ ಮುಂಬೈ ಶೈಲಿಯ ಭಕ್ಷ್ಯಗಳನ್ನು ಆನಂದಿಸಲು ತ್ವರಿತ ಆಹಾರ ಸೇವೆಯ(ಫಾಸ್ಟ್ ಫುಡ್) ವಿಭಾಗ. ಶೀಘ್ರದಲ್ಲೇ 40-60 ಆಸನ ಸಾಮರ್ಥ್ಯದ ಮಿನಿ ಪಾರ್ಟಿ ಹಾಲ್ ತೆರೆಯಲಿದೆ. ಈಗ ದಕ್ಷಿಣ ಭಾರತದ ರುಚಿಕರವಾದ ಥಾಲಿ ನಿಮ್ಮ ನೆಚ್ಚಿನ ಸ್ಥಳೀಯ ಭಕ್ಷ್ಯಗಳೊಂದಿಗೆ

ಉತ್ತರ ಭಾರತದ ಪರಿಣಿತ ಬಾಣಸಿಗರಿಂದ ದೆಹಲಿ ಶೈಲಿಯ ಪಾಕಪದ್ಧತಿಯ ರುಚಿಯನ್ನು ಇಲ್ಲಿ ಸವಿಯ ಬಹುದು. ಟ್ವಿಸ್ಟ್‌ನೊಂದಿಗೆ ದೇಸಿ ಇಂಡಿಯನ್ ಚೈನೀಸ್ ಫುಡ್. ಮುಂಬೈ ಶೈಲಿಯ ಕೋಲ್ಡ್ ಪಾನಿ ಪುರಿ, ಪಾವ್ ಬಾಜಿ ಯನ್ನು ನೀವು ಆಸ್ವಾದಿಸಬಹುದು.

ನವಮಿ ಗ್ರೂಪ್ ಸಂಸ್ಥೆಯ ಬಗ್ಗೆ
ಗುಣಮಟ್ಟ ಮತ್ತು ಸೇವೆಗೆ ಸದಾ ಹೆಸರುವಾಸಿಯಾದ ಸಂಸ್ಥೆ ಇಂದು ದೂರದ ಮುಂಬಯಿ ನಿಂದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿಗೆ ಆಗಮಿಸಿದೆ. ನಮ್ಮ ಸಂಸ್ಥಾಪಕ ರಾಮರಾಯ ಕುಡ್ವ ರವರು 1916ನೆ ಇಸವಿಯಲ್ಲಿ ತನ್ನ ಸ್ವಂತ ಊರು ದೂರದ ಬೆಳವಾಯಿಯಿಂದ ಮುಂಬಯಿಗೆ ಬಂದು ವಿವಿಧ ರೆಸ್ಟೋರೆಂಟ್ಗಳಲ್ಲಿ ಸೇವೆ ಸಲ್ಲಿಸಿದರು.1943ರಲ್ಲಿ ಮುಂಬಯಿ ದಾದರ್ ವೆಸ್ಟ್ ನಲ್ಲಿ ಶ್ರಿ ಕೃಷ್ಣ ಬಟಾಟ ವಡ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.ಮುಂದೆ ಈ ಸಂಸ್ಥೆ ಚಬಿಲ್ ದಾಸ್ ಗಲ್ಲಿ ಬಟಾಟ ವಡಎಂದು ಜನಪ್ರಿಯವಾಯಿತು. ಮುಂದೆ 1974ರಲ್ಲಿ ನಂದಕುಮಾರ್ ಕುಡ್ವ ರವರ ಮುಂದಾಲತ್ವದಲ್ಲಿ ಸಂಸ್ಥೆ ವಿವಿಧ ರೀತಿಯ ಉದ್ಯಮಗಳಿಗೆ ವಿಸ್ತರಣೆಗೊಂಡಿತು. ಇದೀಗ ನರೇಶ್ ಕುಡ್ವ ರವರು ಈ ಉದ್ದಿಮೆಯ ಪರಂಪರೆಯನ್ನು ಮೂರನೇ ತಲೆಮಾರಿಗೆ ಕೊಂಡು ಒಯ್ಯುವ ಮೂಲಕ ಜವಾಬ್ದಾರಿ ಹೊತ್ತು ಕೊಂಡಿದ್ದಾರೆ.

ಸುಮಾರು 80ವರ್ಷಗಳ ಹಿಂದಿನ ತಲೆಮಾರಿನ ಮೂಲ ಪಾಕ ಶಾಸ್ತ್ರದ ಪ್ರಕಾರವೇ ವಡಗಳನ್ನು ತಯಾರಿಸಿ ಗ್ರಾಹಕರಿಗೆ ಶುಚಿ ರುಚಿಯಾದ ಉತ್ತಮ ಗುಣಮಟ್ಟದ ಆಹಾರವನ್ನು ನೀಡುತ್ತಿದ್ದೇವೆ. ನಮ್ಮ ಮೂಲ ಶಾಖೆ ಮುಂಬಯಿ ಯ ದಾದರ್ ನಲ್ಲಿ ಶ್ರಿ ಕೃಷ್ಣ ಬಟಾಟ ವಡ ನೋಂದಾಯಿತ ಸಂಸ್ಥೆಯಾಗಿ ಬ್ರಾಂಡ್ ಆಗಿದೆ.

ನಮ್ಮ ಉದ್ಯಮಗಳು
ಶ್ರಿ ಕೃಷ್ಣ ಬಟಾಟ ವಡ 1943 ರ ಸ್ಥಾಪನೆ.
ಶ್ರಿ ಕೃಷ್ಣ ಪ್ಯೂರ್ ವೆಜ್, ಈ ಹಿಂದಿನ ಹಾಟ್ ಸ್ಪಾಟ್ 1942ತಳ್ಳಿ ಸ್ಥಾಪನೆ.
ನವಮಿ ಪ್ಲಾಜಾ.
ಲೋಡ್ಜಿಂಗ್ ಅಂಡ್ ರೆಸ್ಟೋರೆಂಟ್.1993 ರ ಸ್ಥಾಪನೆ.
ನವಮಿ ಸೂಪರ್ ಮಾರ್ಕೆಟ್. 2012ರಲ್ಲಿ ಮೂಡಬಿದರೆ ಯಲ್ಲಿ ಸ್ಥಾಪನೆ. ಮುಂದೆ ವಿಸ್ತರಣೆಯಾಗಿ ಕಾರ್ಕಳ,ಕೈಕಂಬ,,ದೇರೆಬೈಲ್,ಬಿ.ಸಿ. ರೋಡ್,ಬ್ರಹ್ಮಾವರದಲ್ಲಿ ಎರಡು ಶಾಖೆಗಳನ್ನು ತೆರೆದು ಇದೀಗ ಒಟ್ಟಾರೆ 7 ಶಾಖೆಗಳನ್ನು ಹೊಂದಿದೆ.
ನವಮಿ ಲೈಫ್ ಸ್ಟೈಲ್
2012ರಲ್ಲಿ ಸ್ಥಾಪನೆ ಗೊಂಡಿದ್ದು, ಇಲ್ಲಿ ಮನೆಗೆ ಬೇಕಾಗುವ ಅಗತ್ಯ ವಸ್ತುಗಳು,ಸಿದ್ದ ಉಡುಪುಗಳು, ದಿನಪಯೋಗಿ ಪಾತ್ರೆಗಳ ಸಂಗ್ರಹವಿದೆ.
ನವಮಿ ಪೆಟ್ರೋ ಪ್ರೊಡಕ್ಷಸ್.
2020ರಲ್ಲಿ ಮೂಡಬಿದರೆ ಯಲ್ಲಿ ಸ್ಥಾಪನೆ.
ನವಮಿ ವೆಂಚರ್ಸ್.
ಧಾನ್ಯಗಳು ಮತ್ತು ದಿನೋಪಯೋಗಿ ಸರಕುಗಳ, ಮಾರಾಟದ ವಿತರಕರು.
ನವಮಿ ಹಾಸ್ಪಿಟಾಲಿಟಿ. ಆಹಾರ ವಿಭಾಗದ ಸಗಟು ವಿತರಕರು.
ಬನ್ನಿರಿ ಆಸ್ವಾದಿಸಿರಿ.
ನವಮಿ ವೆಜ್ ರೆಸ್ಟೋ.
ಮಂಗಳಾದೇವಿ.ಮಂಗಳೂರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
89717 33899.
www.navmi in.
Navami. hospitality@gmail.com.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು