News Karnataka Kannada
Friday, April 19 2024
Cricket
ಮಂಗಳೂರು

ಮುಂಡಾಜೆ-ಕಲ್ಮಂಜ- ಧರ್ಮಸ್ಥಳ ರಸ್ತೆ ಸ್ವಚ್ಛತೆ

Clean Up
Photo Credit :

ಬೆಳ್ತಂಗಡಿ: ಮುಂಡಾಜೆ,ಕಲ್ಮಂಜ ಮೂಲಕ ಧರ್ಮಸ್ಥಳ ಸಂಪರ್ಕಿಸುವ ರಸ್ತೆ ಬದಿಯ ಎರಡು ಕಿಮೀ ವ್ಯಾಪ್ತಿಯ ಸ್ವಚ್ಛತೆ ಕಾರ್ಯಕ್ರಮವನ್ನು ಬ್ರಾಹ್ಮಣ ಸಂಘದ ವತಿಯಿಂದ ಭಾನುವಾರ ಕೈಗೊಳ್ಳಲಾಯಿತು.

ಈ ರಸ್ತೆಯಲ್ಲಿ ಹೆಚ್ಚಿನ ವಾಹನ ದಟ್ಟಣೆ ಇದ್ದು ಪ್ರಯಾಣಿಕರು ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಕಸ, ಬಾಟಲಿ,ಪ್ಲಾಸ್ಟಿಕ್ ಎಸೆಯುವುದು ಕಂಡುಬರುತ್ತಿದೆ ಈ ರಸ್ತೆಯ ಇಕ್ಕೆಲಗಳಲ್ಲು ನೂರಾರು ಮನೆಗಳಿದ್ದು ಮನೆಗಳ ಅಂಗಳಕ್ಕು ರಸ್ತೆಯ ತ್ಯಾಜ್ಯ ವ್ಯಾಪಿಸುತ್ತಿದೆ.

ಬ್ರಾಹ್ಮಣ ಸಂಘದ ವತಿಯಿಂದ ನ್ಯಾಯವಾದಿ ಶೈಲೇಶ್ ಠೋಸರ್ ಹಾಗೂ ಶಶಿಧರ್ ಠೋಸರ್ ನೇತೃತ್ವದಲ್ಲಿ ನಡೆದ ಸ್ವಚ್ಛತೆ ಕಾರ್ಯಕ್ರಮದಲ್ಲಿ ಶ್ರೀನಿವಾಸ ಕಾಕತ್ಕರ್, ಶ್ರೀಧರ ಮರಾಠೆ, ಸುಜಾತಾ ಫಡ್ಕೆ,ಅಶೋಕ್ ಭಟ್ ಶಾಂತಾ ಠೋಸರ್, ಲೋಲಾಕ್ಷಿ ಆಠವಳೆ ಮತ್ತಿತರರು ಭಾಗವಹಿಸಿದ್ದರು.

ಮುನ್ನೆಚ್ಚರಿಕೆ ಅಗತ್ಯ
ಈ ಭಾಗದಲ್ಲಿ ಆಗಾಗ ಮಳೆ ಸುರಿಯುತ್ತಿರುವುದರ ಜತೆ ಸಾಕಷ್ಟು ತ್ಯಾಜ್ಯವು ರಸ್ತೆ ವ್ಯಾಪ್ತಿಯಲ್ಲಿದ್ದು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಬಹುದು. ರಸ್ತೆಬದಿಯ ಹೆಚ್ಚಿನ ಸ್ವಚ್ಛತೆ ಹಾಗೂ ಕಸ ಹಾಕುವುದನ್ನು ತಡೆಗಟ್ಟಲು ಸಂಬಂಧಪಟ್ಟ ಇಲಾಖೆಗಳು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ.ರಸ್ತೆಯ ಇಕ್ಕೆಲಗಳಲ್ಲು ಹುಲ್ಲು,ಗಿಡಗಂಟಿಗಳು ತುಂಬಿದ್ದು,ಚರಂಡಿಗಳಲ್ಲಿ ಹೂಳು ತುಂಬಿ ಮಳೆ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು