News Karnataka Kannada
Wednesday, April 17 2024
Cricket
ಮಂಗಳೂರು

ಮುಂಡಾಜೆ:ಸ್ಥಳೀಯರಿಂದ ಮನೆ ದುರಸ್ತಿ

Househouse
Photo Credit :

ಬೆಳ್ತಂಗಡಿ: ಇಲ್ಲಿನ ದುಂಬೆಟ್ಟು ಪ್ರದೇಶದಲ್ಲಿ ವಾಸವಾಗಿರುವ ಏಕಾಂಗಿ ವೃದ್ದ ಮಹಿಳೆ ಜಿನ್ನಮ್ಮ ಅವರ ಶಿಥಿಲಾವಸ್ಥೆಗೆ ತಲುಪಿದ ಮನೆಯನ್ನು ಸ್ಥಳೀಯರು ಸೇರಿ ಸಂಪೂರ್ಣ ದುರಸ್ತಿಗೊಳಿಸಿ ಕೊಟ್ಟಿದ್ದಾರೆ.

ಜಿನ್ನಮ್ಮ ಅವರ ಪುತ್ರ ಕಳೆದ ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದು,ಆ ಬಳಿಕ ಅವರು ಏಕಾಂಗಿಯಾಗಿ ವಾಸವಾಗಿದ್ದಾರೆ. ಸ್ಥಳೀಯವಾಗಿ ಕೂಲಿ ಕೆಲಸ ನಿರ್ವಹಿಸುತ್ತಿರುವ ಇವರ ಮನೆಯು ಪೂರ್ಣ ಶಿಥಿಲಾವಸ್ಥೆಯನ್ನು ತಲುಪಿ ಅಪಾಯದ ಪರಿಸ್ಥಿತಿಯಲ್ಲಿತ್ತು.

ಇಲ್ಲಿನ ಕಾರ್ಗಿಲ್ ವನದ ರೂವಾರಿ ಸಚಿನ್ ಭಿಡೆ,ಬಾಲಕೃಷ್ಣ ಪಣಿಕ್ಕಲ್ಲು,ಶಿವಣ್ಣ ಪಿಲತಡ್ಕ,ಶಶಿ ಚಾರ್ಮಾಡಿ,ಆಸರೆ ಸೇವಾಹಸ್ತ ಹಾಗೂ ಊರ-ಪರವೂರ ಜನರ ಸಹಾಯ ಹಸ್ತದಿಂದ, ಸ್ಥಳೀಯರು ಸೇರಿ ಮನೆಯ ಛಾವಣಿಗೆ ಶ್ರಮದಾನದ ಮೂಲಕ ಹೊಸ ಅಡ್ಡ,ರೀಪು, ಪಕ್ಕಾಸುಗಳನ್ನು ಅಳವಡಿಸಿ, ಅಲ್ಲಲ್ಲಿ ಹಾಳಾಗಿದ್ದ ಗೋಡೆ ಭಾಗವನ್ನು ದುರಸ್ತಿಪಡಿಸಿ, ಸುಣ್ಣಬಣ್ಣಗಳನ್ನು ಕೊಟ್ಟು ವಾಸಕ್ಕೆ ಯೋಗ್ಯವಾಗಿ ಮಾಡಿ ಕೊಟ್ಟಿರುತ್ತಾರೆ. ಜತೆಗೆ ಬಚ್ಚಲುಮನೆ ಕೊಟ್ಟಿಗೆಗಳನ್ನು ಕೂಡ ದುರಸ್ತಿಪಡಿಸಲಾಗಿದೆ.

ಮೇ 1 ಕಾರ್ಮಿಕರ ದಿನಾಚರಣೆ ಸಂದರ್ಭ ಈ ಮನೆಯಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿ ಫಲಾನುಭವಿಗೆ ಹಸ್ತಾಂತರಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು