News Karnataka Kannada
Wednesday, April 17 2024
Cricket
ಮಂಗಳೂರು

ಮಲೀನ ಗೊಂಡಿರುವ ‌ಅಳದಂಗಡಿಯ ಫಲ್ಗುಣಿ ನದಿ!

Palguni
Photo Credit :

ಬೆಳ್ತಂಗಡಿ: ತನ್ನ ಮನೆಯನ್ನು ಮಾತ್ರವಲ್ಲಿ ತನ್ನ ಸುತ್ತಲಿನ ಪರಿಸರವನ್ನೂ ಸ್ವಚ್ಛತೆಯನ್ನಿಟ್ಟುಕೊಳ್ಳಬೇಕು ಎಂಬುದನ್ನು ಸಾರಿ ಸಾರಿ ಹೇಳಿದರೂ ಜನರು ಮಾತ್ರ ಊರು,ನದಿ,ಕೆರೆ ಇತ್ಯಾದಿಗಳನ್ನು ಮಲೀನ ಮಾಡದೇ ಬಿಡುವುದಿಲ್ಲ. ಮನೆಯಲ್ಲಾದ ಘನರೂಪದ ತ್ಯಾಜ್ಯಗಳನ್ನು ಕಸದ ಬುಟ್ಟಿಗಳಲ್ಲಿ ಹಾಕಿ ಅದನ್ನು ಪಂಚಾಯತಿಯ ಕಸದ ವಾಹನಕ್ಕೆ ನೀಡಬೇಕು. ಆದರೆ ಇಲ್ಲಿ ಮಾತ್ರ ಹಾಗೆ ಮಾಡದೆ ತ್ಯಾಜ್ಯಗಳನ್ನು ನದಿಗೆ ಎಸೆಯುವುದು ಮಾಮೂಲಾಗಿದೆ. ನೀರನ್ನು ಗಂಗೆ-ಕಾವೇರಿ ಎಂದು ಪೂಜಿಸುವ ನಾವು ಅದರಂತೆ ಇರುವ ಫಲ್ಗುಣಿಯನ್ನು ಮಲೀನ ಮಾಡಲಾಗುತ್ತಿದೆ.

‌ಅಳದಂಗಡಿಯಲ್ಲಿ ಫಲ್ಗುಣಿ ನದಿ ಹರಿಯುತ್ತಿದೆ. ಅದಕ್ಕೆ ಅಡ್ಡಲಾಗಿರುವ ಸೇತುವೆಯಿಂದ ಇಣುಕಿ ನೋಡಿದರೆ ಪ್ರಜ್ಞಾವಂತರಿಗೆ ಛೇ ಎಂದು ಎಣಿಸದೇ ಇರಲಾರರು. ವಾಹನದಲ್ಲಿ ಹೋಗುತ್ತಿರುವಾಗ ಕಸದ ಕಟ್ಟನ್ನು ನದಿಕಡೆಗೆ ಹಾರಿಸಿಬಿಡುವುದು ಇಲ್ಲಿ ಮಾಮೂಲು. ತ್ಯಾಜ್ಯವನ್ನು ನದಿಗೆ ಎಸೆದು ಯುದ್ಧ ಗೆದ್ದವರಂತೆ ಸಾಗುತ್ತಾರೆ.

ಸದ್ಯ ನದಿಯಲ್ಲಿ ನೀರು ಕಡಿಮೆ ಇದೆ. ಇರುವ ನೀರು ಬಿಸಾಡಿದ ತ್ಯಾಜ್ಯದಿಂದಾಗಿ ಮಲೀನವಾಗಿದೆ. ಹರಿಯುವ ನೀರಿಗೆ ದೋಷವಿಲ್ಲ ಎನ್ನುತ್ತಾರೆ ಆದರೆ ಇಲ್ಲಿನ ಜಲವನ್ನು ಕುಡಿಯಲು ಉಪಯೋಗಿಸಿದರೆ ಆಸ್ಪತ್ರೆ ವಾಸ ಪಕ್ಕಾ. ನೀರು ರಭಸದಲ್ಲಿ ಹರಿಯದೇ ಇರುವುದರಿಂದ ತ್ಯಾಜಗಳು ಅಲ್ಲಲ್ಲಿ ತೇಲಿಕೊಂಡಿರುತ್ತವೆ. ನದಿಯ ದಡದಲ್ಲಂತೂ ತ್ಯಾಜ್ಯದ ರಾಶಿಯೇ ಇದೆ. ಇನ್ನು ಮಳೆಗಾಲ ಪ್ರಾರಂಭವಾದಾಗ ನೀರಿನ ಹರಿವಿಗೆ ಈ ತ್ಯಾಜ್ಯಗಳೆಲ್ಲ ಸಮುದ್ರ ಸೇರುತ್ತದೆಯಲ್ಲದೆ ನದಿಯುದ್ದಕ್ಕೂ ತ್ಯಜಿತ ಬಟ್ಟೆಬರೆಗಳು ಗಿಡಗಂಟಿಗಳಿಗೆ ಸಿಲುಕಿಕೊಂಡು ಅಣಕಿಸಿಕೊಂಡು ಇರುತ್ತವೆ.

ಅಳದಂಗಡಿ ಗ್ರಾಮ ಪಂಚಾಯತು ನದಿಗೆ ಕಸ ಎಸೆಯದಂತೆ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಇಲ್ಲಿ ಸಿಸಿ ಕ್ಯಾಮೆರಾವನ್ನು ಅಳವಡಿಸಿದಲ್ಲಿ ತ್ಯಾಜ್ಯ ಎಸೆಯುವವರು ಯಾರೆಂದು ತಿಳಿದುಕೊಳ್ಳಬಹುದಾಗಿದೆ. ನದಿಯ ನೀರನ್ನು ಮಲೀನ ಮಾಡುವ ಪ್ರವೃತ್ತಿಗೆ ಕಡಿವಾಣ ಬೀಳಬೇಕಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು