News Karnataka Kannada
Sunday, April 21 2024
Cricket
ಮಂಗಳೂರು

ಮಂಗಳೂರು:ಚಿಕನ್ ಸೆಂಟರ್ ಸಿಬ್ಬಂದಿಯ ಹಲ್ಲೆ ಪ್ರಕರಣ; ಇಬ್ಬರು ರೌಡಿಶೀಟರ್ ಗಳ ಬಂಧನ

Accused
Photo Credit : News Kannada

ಮಂಗಳೂರು : ನಗರದ ವೆಲೆನ್ಸಿಯಾದಲ್ಲಿ ಚಿಕನ್ ಅಂಗಡಿಯ ಸಿಬ್ಬಂದಿಗೆ ಹಲ್ಲೆಗೈದು ಸಾರ್ವಜನಿಕರಿಗೆ ಬೆದರಿಕೆ ಹಾಕಿದ ಪ್ರಕರಣ ನಡೆದಿದ್ದು ಘಟನೆಗೆ ಸಂಬಂಧಿಸಿ ಪೊಲೀಸರು ಇಬ್ಬರು ರೌಡಿಗಳನ್ನು ಬಂಧಿಸಿದ್ದಾರೆ.

ಕಂಕನಾಡಿ ನಗರ ಠಾಣೆ ವ್ಯಾಪ್ತಿಯ ರೌಡಿಶೀಟರ್ ಗಳಾದ ಪ್ರೀತಂ ಅಲಿಯಾಸ್ ಪ್ರೀತಮ್ ಪೂಜಾರಿ ಮತ್ತು ಧೀರಜ್ ಕುಮಾರ್ ಅಲಿಯಾಸ್ ಬಂಧಿತರು . ಭಾನುವಾರ ಸಂಜೆ ವೆಲೆನ್ಸಿಯಾದ ಕೋಳಿ ಅಂಗಡಿಯ ಮುಂದೆ ಇವರಿಬ್ಬರು ಸೇರಿ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸುತ್ತಿದ್ದರು ಈ ವೇಳೆ ಕೋಳಿ ಅಂಗಡಿ ಉಳಿದ ಸಿಬ್ಬಂದಿ ಪ್ರಶ್ನೆ ಮಾಡಿದ್ದು ಇಲ್ಲಿ ರಂಪಾಟ ಮಾಡದಂತೆ ಸೂಚಿಸಿದ್ದಾರೆ .

ಇದರಿಂದ ಸಿಟ್ಟಿಗೆದ್ದ ರೌಡಿಗಳು ಚಿಕನ್ ಸೆಂಟರ್ ನಲ್ಲಿದ್ದ ಸುನಿಲ್ ಅನಂತ್ ಮತ್ತು ಜೀವನ ಎಂಬ ಮೂವರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಅಲ್ಲದೆ ಚೂರಿಯಿಂದ ಇರಿಯಲು ಯತ್ನಿಸಿದ್ದಾರೆ ಅಷ್ಟರಲ್ಲಿ ಇತರ ಸಾರ್ವಜನಿಕರು ಸೇರಿದ್ದು ಚೂರಿಯಿಂದ ಹಲ್ಲೆ ಮಾಡುವುದನ್ನ ತಪ್ಪಿಸಿದ್ದಾರೆ . ಅನಂತರ ಸಾರ್ವಜನಿಕರಿಗೂ ಚೂರಿ ತೋರಿಸಿ ಬೆದರಿಸಿದ್ದು ಯಾರಾದ್ರೂ ಹತ್ತಿರ ಬಂದಲ್ಲಿ ತೆಗೆಯುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ .ಇಷ್ಟರಲ್ಲೇ ಪೊಲೀಸರು ಕಂಟ್ರೋಲ್ ರೂಮಿಗೆ ಫೋನ್ ಹೋಗಿತ್ತು ಸಂಜೆ 7ಗಂಟೆ ಸುಮಾರಿಗೆ ಬೀದಿ ರಂಪ ಮಾಡುತ್ತಿದ್ದ ಜಾಗಕ್ಕೆ ಪೊಲೀಸರು ಬಂದಿದ್ದು ಸಾರ್ವಜನಿಕರ ಸಹಾಯದಿಂದ ಇಬ್ಬರು ರೌಡಿಗಳನ್ನ ಬಂಧಿಸಿದ್ದಾರೆ .

ಹೆಲ್ಮೆಟ್ ಕಲ್ಲುಗಳನ್ನು ಬಳಸಿ ಚಿಕನ್ ಸೆಂಟರ್ ಸಿಬ್ಬಂದಿಗೆ ಹಲ್ಲೆ ನಡೆಸಿದ್ದರು .ಪೋಲಿಸರು ಅವರಲ್ಲಿದ್ದ 2ಚೂರಿಯನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು ಕುಡಿದ ಮತ್ತಿನಲ್ಲಿದ್ದು ಪ್ರೀತಮ್ ಗಾಂಜಾ ವ್ಯಸನಿಯೂ ಆಗಿದ್ದ ಪಿತಂ ಬಜಲ್ ಜಲ್ಲಿಗುಡ್ಡೆ ನಿವಾಸಿಯಾಗಿದ್ದು ಡಕಾಯಿತಿ ಸುಲಿಗೆ ಕೊಲೆಯತ್ನ ಸೇರಿ 8ಪ್ರಕರಣ ಎದುರಿಸುತ್ತಿದ್ದಾನೆ. ಕಂಕನಾಡಿ ನಗರ ಗ್ರಾಮಾಂತರ ಮತ್ತು ಕದ್ರಿ ಠಾಣೆಯಲ್ಲಿ ಕೇಸುಗಳಿವೆ . ಧೀರಜ್ ಕುಮಾರ್ ಕೊಲೆ ಯತ್ನ ರಾಬರಿ ಸೇರಿ ಹತ್ತು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಮಂಗಳೂರು 4ಠಾಣೆಗಳ ವ್ಯಾಪ್ತಿಯಲ್ಲಿ ಈತನ ವಿರುದ್ಧ ಕೇಸುಗಳಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು