News Karnataka Kannada
Wednesday, April 17 2024
Cricket
ಮಂಗಳೂರು

ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ದರೋಡೆಕೋರರ ಬಂಧನ

Charmadi
Photo Credit :

ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಅಪಘಾತವಾಗಿ ನಿಂತಿದ್ದ ಕಾರಿನಲ್ಲಿ ಕುಳಿತಿದ್ದ ಪ್ರಯಾಣಿಕರನ್ನು ಬೆದರಿಸಿ ನಗದು ಉಂಗುರ ಹಾಗೂ ಮೊಬೈಲನ್ನು ಕಸಿದ ಘಟನೆ ಮೇ 4ರ ತಡರಾತ್ರಿ ನಡೆದಿದೆ.

ಬೆಂಗಳೂರಿನ ದೇವನಹಳ್ಳಿಯ ಮಧುಸೂದನ್ ಎಂಬವರು ಈ ಬಗ್ಗೆ ಬಣಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಘಟನೆಯ ವಿವರ
ದೇವನಹಳ್ಳಿಯಿಂದ ಕೊಟ್ಟಿಗೆಹಾರ ಮೂಲಕ ಚಾರ್ಮಾಡಿ ಮಾರ್ಗವಾಗಿ ಸಾಗುತ್ತಿದ್ದ ಕಾರು ರಾತ್ರಿ 12.30ರ ಸುಮಾರಿಗೆ ರಸ್ತೆಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದಿತ್ತು. ಕಾರಿನಲ್ಲಿದ್ದ ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗೊಂಡು ಅಂಬುಲೆನ್ಸ್ ಗೆ ಕರೆ ಮಾಡಲು ನೆಟ್ ವರ್ಕ್ ಇಲ್ಲದ ಕಾರಣ ಕಾರಿನಲ್ಲೆ ಕುಳಿತಿದ್ದರು. ಈ ವೇಳೆ ದ ಕ ಜಿಲ್ಲೆ ಕಡೆಯಿಂದ ಬೈಕ್ ಹಾಗೂ ಸ್ಕೂಟರ್ ನಲ್ಲಿ ಬಂದ ಮೂವರು ಯುವಕರ ತಂಡ ಕಾರನ್ನು ಸುತ್ತುವರಿದು ಸೊತ್ತುಗಳನ್ನು ದೋಚಿ ಬೆದರಿಕೆ ಒಡ್ಡಿ ಪರಾರಿಯಾಗಿತ್ತು.

ಆರೋಪಿಗಳ ಬಂಧನ
ಈ ಕೃತ್ಯವನ್ನು ಎಸಗಿದ ದ.ಕ. ಮೂಲದ ಬಂಟ್ವಾಳ ತಾಲೂಕಿನ ಮಾಣಿ ಸೂರಿ ಕುಮೇರಿನ ಹಮೀದ್ ಎಂಬವರ ಪುತ್ರ ಪೈಂಟಿಂಗ್ ವೃತ್ತಿಯ ಮಹಮ್ಮದ್ ರಮೀಜ್ ಯಾನೆ ರಮ್ಮಿ(19),ಪೆರ್ನೆ ಸತ್ತಿಕಲ್ ಅಮೈಯ ಪುತ್ತು ಬ್ಯಾರಿ ಎಂಬವರ ಪುತ್ರ ರಜೀನ್ ಯಾನೆ ರಜ್ಜು (20) ಹಾಗೂ ಕೆದಿಲ ಗಡಿಯಾರ ಎಂಬಲ್ಲಿ ಅಬ್ದುಲ್ ರೆಹಮಾನ್ ಅವರ ಪುತ್ರ ಡೆಕೋರೇಟರ್ ವೃತ್ತಿಯ ಮಹಮ್ಮದ್ ಸವಾದ್ ಯಾನೆ ಸವಾದ್ ಕುಂಞ (18) ಎಂಬ ಮೂವರು ಆರೋಪಿಗಳನ್ನು ಮೂಡಿಗೆರೆ ಹಾಗೂ ಬಣಕಲ್ ಪೊಲೀಸರ ತಂಡ ಬಂಧಿಸಿದ್ದು, ಅವರಿಂದ ಸೊತ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳನ್ನು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು