News Karnataka Kannada
Thursday, April 25 2024
Cricket
ಮಂಗಳೂರು

ಬೆಳ್ತಂಗಡಿ ಏಕತಾ ಸೌಧದಲ್ಲಿ ರಾಜ್ಯ ಸರಕಾರಿ ನೌಕರರ ದಿನಾಚರಣೆ

Belthangady
Photo Credit :

ಬೆಳ್ತಂಗಡಿ : ಸರಕಾರಿ ನೌಕರರಲ್ಲಿ ಸೇವಾ ಮನೋಭಾವನೆ ಮುಖ್ಯ. ಪ್ರಸ್ತುತ ಸಿಬ್ಬಂದಿಗಳ ಕೊರತೆಯ ನಡುವೆ ಜೊತೆಗೆ ರಾಜಕೀಯ ಒತ್ತಡ, ಜನರ ಒತ್ತಡಗಳ ನಡುವೆ ಕೆಲಸ ಮಾಡುವ ಸರಕಾರಿ ನೌಕರರು ಸರಕಾರದ ಗುರಿಯನ್ನು ತಲುಪಿಸುವ ಕಾರ್ಯ ಮಾಡುತ್ತಾರೆ. ಇದರೊಂದಿಗೆ ತಾಲೂಕಿನ ಸರಕಾರಿ ನೌಕರರು ಪ್ರತೀ ತಿಂಗಳು ಕೈಲಾದಷ್ಟು ಉಳಿತಾಯ ಮಾಡಿ ನೊಂದ ಕುಟುಂಬಗಳಿಗೆ ನೆರವು ನೀಡುತ್ತಿರುವ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ವಿಧಾನಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಹೇಳಿದ್ದಾರೆ.

ಅವರು ಗುರುವಾರ ಬೆಳ್ತಂಗಡಿ ಏಕತಾ ಸೌಧದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಇದರ ವತಿಯಿಂದ ನಡೆದ ರಾಜ್ಯ ಸರಕಾರಿ ನೌಕರರ ದಿನಾಚರಣೆ ಮತ್ತು ೨೦೨೧ನೇ ಸಾಲಿನ ಸಾಧಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಸರಕಾರಿ ನೌಕರರು ಕೂಡ ತನ್ನ ಸೇವೆಯಲ್ಲಿ ಅಮೋಘ ಸಾಧನೆ ಮಾಡಿಕೊಂಡಿದ್ದು ಇವರಿಗೆ ಸರಕಾರ ಹಾಗೂ ಸಂಘ ಸಂಸ್ಥೆಗಳು ವಿವಿಧ ಬಿರುದುಗಳನ್ನು ನೀಡಿ ಗೌರವಿಸುತ್ತಿದೆ. ಅಂತಹವರನ್ನು ಕೂಡ ಗುರುತಿಸುವ ಕಾರ್ಯ ಮಾಡುತ್ತಿರುವುದರ ಜೊತೆಗೆ ಕೃಷಿ ಸಾಧಕರನ್ನು ಗೌರವಿಸುತ್ತಿರುವುದು ಅಭಿನಂದನೀಯ ಎಂದರು.

ರಾ.ಸ.ನೌ.ಸಂಘ ಬೆಳ್ತಂಗಡಿ ಶಾಖೆಯ ಅಧ್ಯಕ್ಷ ಜಯರಾಜ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ರಾ.ಸ.ನೌ.ಸಂಘ ಬೆಳ್ತಂಗಡಿ ಶಾಖೆಯ ಮಾಜಿ ಅಧ್ಯಕ್ಷ ವಿಠಲ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು.

ಇದೇ ಸಂದರ್ಭದಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ವಿಧಾನಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್‌ರವರನ್ನು ಗೌರವಿಸಲಾಯಿತು. ಬೆಳಕು ಯೋಜನೆಯ ವತಿಯಿಂದ ಇಬ್ಬರು ಫಲಾನುಭವಿಗಳಿಗೆ ತಲಾ ಹತ್ತುಸಾವಿರದಂತೆ ನೆರವನ್ನು ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಕೆ. ಶ್ರೀಧರ ರಾವ್ (ಜಿಲ್ಲಾ ಪ್ರಶಸ್ತಿ), ಯು ಸದಾಶಿವ ಶೆಟ್ಟಿ ( ಜಿಲ್ಲಾ ಪ್ರಶಸ್ತಿ), ಶೇಷಪ್ಪ ಶೆಟ್ಟಿ (ತಾಲೂಕು ಮಟ್ಟದ ಪ್ರಥಮ), ಸುರೇಶ್ ಶೆಟ್ಟಿ (ತಾಲೂಕು ಮಟ್ಟದ ದ್ವಿತೀಯ), ಸುಂದರ ಪೂಜಾರಿ (ತಾಲೂಕು ಮಟ್ಟದ ತೃತೀಯ), ಪೋಲೀಸ್ ಇಲಾಖೆಯ ರಾಜ್ಯಮಟ್ಟದ ಮುಖ್ಯಮಂತ್ರಿ ಚಿನ್ನದ ಪದಕ ವಿಜೇತರಾದ ನಂದಕುಮಾರ್ ಎಂ.ಎ. ಆರೋಗ್ಯ ಇಲಾಖೆಯ ಸುಭಾಷಿಣಿ (ಅಡಿuಛಿiಚಿಟ ಠಿಡಿಚಿಥಿeಜ ಅವಾರ್ಡ್ ಜಿಲ್ಲಾಮಟ್ಟ ಕೋವಿಡ್ ಸಂದರ್ಭ ಸೇವೆ), ಶಿಕ್ಷಣ ಇಲಾಖೆಯ ಎಡ್ವರ್ಡ್ ಡಿಸೋಜಾ (ರಾಷ್ಟç ಪ್ರಶಸ್ತಿ ವಿಜೇತರು), ಅಜಿತ್ ಕೆ. (ಜಿಲ್ಲಾ ಪ್ರಶಸ್ತಿ ವಿಜೇತರು ಹೈಸ್ಕೂಲ್). ಅಮಿತಾನಂದ ಹೆಗ್ಡೆ (ಜಿಲ್ಲಾ ಪ್ರಶಸ್ತಿ ವಿಜೇತರು), ಶಿವಾನಂದ ಭಂಡಾರಿ (ಜಿಲ್ಲಾ ಪ್ರಶಸ್ತಿ ವಿಜೇತರು), ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಲಾಯಿಲ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಂಯುಕ್ತ ಪ್ರಭು, ಕಾಯರ್ತಡ್ಕ ಸರಕಾರಿ ಪ್ರೌಢಶಾಲೆಯ ಹರ್ಷಿತಾ, ಪಂಚಾಯತ್ ರಾಜ್ ಇಲಾಖೆಯ ಮೋಹನ್ ಬಂಗೇರ(ರಾಜ್ಯ ಪ್ರಶಸ್ತಿ ಉದ್ಯೋಗ ಖಾತ್ರಿ), ಪ್ರಕಾಶ್ ಶೆಟ್ಟಿ ನೊಚ್ಚ (ಸ್ವಚ್ಚತೆ ಜಿಲ್ಲಾಮಟ್ಟದ ಪ್ರಶಸ್ತಿ), ಕ್ರೀಡಾ ಕ್ಷೇತ್ರದ ಸಾಧಕರಾದ ಹೇಮಚಂದ್ರ (ರಾಷ್ಟçಮಟ್ಟದ ಪವರ್ ಲಿಫ್ಟಿಂಗ್), ಕವನ್ ಕುಮಾರ್ (ರಾಷ್ಟç ಮಟ್ಟದ ಕಬಡ್ಡಿ), ಯೋಗೀಶ್ (ರಾಜ್ಯಪ್ರಶಸ್ತಿ ಕುಸ್ತಿ) ಲಕ್ಷಿö್ಮÃಕಾಂತ್ (ರಾಜ್ಯ ಪ್ರಶಸ್ತಿ ಈಜು) ಇವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ತಹಶಿಲ್ದಾರ್ ಮಹೇಶ್ ಜೆ, ಕೋಶಾಧಿಕಾರಿ ಮೇರಿ ಎನ್.ಜೆ, ರಾಜ್ಯ ಪರಿಷತ್ ಸದಸ್ಯ ಆನಂದ ಡಿ., ಸಂಚಾಲಕ ಕೆ. ಧರಣೇಂದ್ರ ಜೈನ್ ಉಪಸ್ಥಿತರಿದ್ದರು.

ರಾಜ್ಯ ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಕೆ. ಜಯಕೀರ್ತಿ ಜೈನ್ ಸ್ವಾಗತಿಸಿದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು