News Karnataka Kannada
Sunday, April 21 2024
Cricket
ಮಂಗಳೂರು

ಪ್ರತಿಮೆಗಳು ಆದರ್ಶ ಜೀವನಕ್ಕೆ ಪ್ರೇರಣೆ ನೀಡಬಲ್ಲವು : ಡಾl ಪದ್ಮನಾಭ ಮರಾಠೆ

Inauguration of administrative office of Federation of Bunts Associations at Mulki on April 5
Photo Credit :

ಬೆಳ್ತಂಗಡಿ: ಸಮಾಜದಲ್ಲಿ ಬ್ರಾಹ್ಮ- ಕ್ಷಾತ್ರಗಳ ಸಮನ್ವಯವಾದಲ್ಲಿ ರಾಷ್ಟ್ರ ಬಲಯುತವಾಗುವುದರಲ್ಲಿ ಸಂದೇಹವಿಲ್ಲ ಎಂದು ಕಟೀಲಿನ ಶ್ರೀ ದುರ್ಗಾ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದ ನಿರ್ದೇಶಕ ಡಾl ಪದ್ಮನಾಭ ಮರಾಠೆ ಹೇಳಿದರು.

ಶನಿವಾರ ಅವರು ಅಳದಂಗಡಿ ಸನಿಹದ ಸೂಳಬೆಟ್ಟು ಬರಯ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ನಿರ್ಮಿಸಲಾದ ಗೋಪಾಲಕೃಷ್ಣ, ಪರಶುರಾಮ ಹಾಗೂ ಕೊಡಮಣಿತ್ತಾಯ ದೈವದ ಪ್ರತಿಮೆಗಳನ್ನು ಲೋಕಾರ್ಪಣ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಹತ್ತು ಜನರಿಗೆ ಉಪಕಾರವಾಗುವಂತಹ ಕಾರ್ಯ ನಾವು ಮಾಡಬೇಕು. ಪ್ರತಿಮೆಗಳು ಆದರ್ಶ ಜೀವನಕ್ಕೆ ಪ್ರೇರಣೆ ನೀಡಬಲ್ಲವು ಎಂದರು.

ಅತಿಥಿಗಳಾಗಿದ್ದ ಲೋಕಾಯುಕ್ತ ಮಂಗಳೂರು ಎಸ್.ಪಿ. ಕುಮಾರ ಸ್ವಾಮಿ ಅವರು ಪ್ರಸ್ತುತ ಲೋಕಾಯುಕ್ತಕ್ಕೆ ಕಡಿಮೆ ಅಧಿಕಾರವಿದ್ದರೂ ಜನರು ಸಣ್ಣಪುಟ್ಟ ಸಮಸ್ಯೆಗಳಿಗೂ ಲೋಕಾಯುಕ್ತವನ್ನೇ ಅವಲಂಬಿಸಿದ್ದಾರೆ. ಜನರ ಭಾವನೆಗಳನ್ನು ನಾವು ಗೌರವಿಸುತ್ತೇವೆ ಎಂದರು.

ಅಧ್ಯಕ್ಷತೆಯನ್ನು ಅಳದಂಗಡಿ ಅರಮನೆಯ ಡಾl ಪದ್ಮಪ್ರಸಾದ ಅಜಿಲ ಅವರು ವಹಿಸಿದ್ದರು. ದೇವಳದ ತಂತ್ರಿಗಳಾದ ಸೀತಾರಾಮ ಕೇಳ್ಕರ್, ಪುರೋಹಿತ ಪದ್ಮನಾಭ ಜೋಶಿ, ಆಡಳಿತ ಮೊಕ್ತೇಸರ ಸದಾನಂದ ಸಹಸ್ರಬುದ್ಧ್ಯೆ ಉಪಸ್ಥಿತರಿದ್ದರು.
ಕವಯತ್ರಿಗಳಾದ ಭಾಷಿಣಿ ಬೆಳ್ತಂಗಡಿ, ಶಾಂತಾ ಜೆ.ಸಾಲಿಯಾನ್ ಪಿಲ್ಯ, ಶಕುಂತಲಾ ನಾತು ಸೂಳಬೆಟ್ಟು ಇವರನ್ನು ಅತಿಥಿಗಳು ಸಮ್ಮಾನಿಸಿದರು.

ತಮ್ಮ ಹಿರಿಯರ ಸ್ಮರಣಾರ್ಥ ಪ್ರತಿಮೆಗಳನ್ನು ನಿರ್ಮಾಣ ಮಾಡಿದ ದಾನಿ, ಅಳದಂಗಡಿ ಸಿ.ಎ.ಬ್ಯಾಂಕಿನ ನಿವೃತ್ತ ಕಾರ್ಯದರ್ಶಿ ಶ್ರೀಕಾಂತ ಜೋಶಿ ಅವರನ್ನು ಸಮ್ಮಾನಿಸಲಾಯಿತು. ಮೊಕ್ತೇಸರರಾದ ಚಂದ್ರಕಾಂತ ಗೋರೆ ಸ್ವಾಗತಿಸಿದರೆ, ಗಜಾನನ‌ ನಾತು ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು