News Karnataka Kannada
Monday, April 22 2024
Cricket
ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಸಿಡಿಲು ಮಿಂಚು ಗಾಳಿ ಸಹಿತ ಭಾರಿ ಮಳೆ

Heavy rain warning issued for these districts till December 1
Photo Credit : News Kannada

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಮಂಗಳವಾರ ತಡರಾತ್ರಿ ಮತ್ತು ಬುಧವಾರ ಸಿಡಿಲು ಮಿಂಚು ಗಾಳಿ ಸಹಿತ ಭಾರಿ ಮಳೆಯಾಗಿದೆ . ಕಳೆದ ಕೆಲವು ದಿನಗಳಿಂದ ಆಗಾಗ ಸುರಿಸುತ್ತಿದ್ದ ಸಾಮಾನ್ಯ ಮಳೆಯು ಇದೀಗ ತೀವ್ರತೆ ಪಡೆದುಕೊಂಡಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಕಾರಣ ಮೋಡದ ಚಲನೆ ಜೋರಾಗಿದ್ದು ಇವು ಮಳೆಯಾಗಿ ಪರಿವರ್ತನೆಯಾಗುತ್ತಿವೆ ಹಾಗಾಗಿ ಬುಧವಾರ ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಕಂಡು ಬಂದಿದೆ .ಗ್ರಾಮೀಣ ಭಾಗದ ಹಲವು ಕಡೆಗಳಲ್ಲಿ ಮಳೆ ಸುರಿಯಲು ಆರಂಭವಾಗಿದ್ದು ಆಕಾಶದಲ್ಲಿ ದಟ್ಟ ಮೋಡ ಕವಿದಿತ್ತು ಮಧ್ಯಾಹ್ನದ ಬಳಿಕ ಮಳೆ ಅಬ್ಬರ ತುಸು ಹೆಚ್ಚಾಗಿತ್ತು ಕೆಲವೆಡೆ ೨ ,3ಗಂಟೆಗಳ ಕಾಲ ಮಳೆಯಾಗಿದೆ.

ಉಳ್ಳಾಲ ತಾಲ್ಲೂಕಿನ ಹಲವು ಕಡೆಗಳಲ್ಲಿ ಭಾರಿ ಮಳೆಯಾಗಿದೆ ಮಂಗಳೂರಿನಲ್ಲಿ ಮಂಗಳವಾರ ತಡರಾತ್ರಿ ಗುಡುಗು ಸಹಿತ ಭಾರಿ ಮಳೆಯಾಗಿದ್ದು ರಸ್ತೆ ಬದಿಯಲ್ಲಿ ಗ್ಯಾಸ್ ನೀರಿನ ಪೈಪ್ ಲೈನ್ ಮಣ್ಣು ರಸ್ತೆಗೆ ಬಂದು ಬಿದ್ದಿದ್ದು ಬದಿಯಲ್ಲಿ ಹೊಂಡಗಳು ಉಂಟಾಗಿವೆ .ಬುಧವಾರ ಮುಂಜಾವ ದಿನದಿಂದಲೇ ಮೋಡ ಕವಿದ ವಾತಾವರಣವಿದ್ದು ಮಧ್ಯಾಹ್ನ ಹನಿ ಮಳೆಯಾಗಿದೆ ಸುಳ್ಯದ ಕಲ್ಮಡ್ಕ , ಹರಿಹರ , ಪಲ್ಲತ್ತಡ್ಕ ,ದೇವಚಳ್ಳ ,ಬಾಳಿಲ , ಉಬರಡ್ಕ ,ಮಿತ್ತೂರು ,ಕನಕಮಜಲು, ಪುತ್ತೂರಿನ ಬಡಗನ್ನೂರು ,ಅರಿಯಡ್ಕ , ರಾಮಕುಂಜ , ನೆಕ್ಕಿಲಾಡಿ ,ಕಡಬದ ಸುಬ್ರಹ್ಮಣ್ಯ ಸುತ್ತಮುತ್ತ ಬಂಟ್ವಾಳ ವಿಟ್ಲ ,ಬೆಳ್ತಂಗಡಿ, ಮೂಡಬಿದಿರೆ ತಾಲ್ಲೂಕಿನ ವಿವಿಧೆಡೆ ಮಳೆಯಾಗಿದೆ .

ಮಂಗಳೂರಿನಲ್ಲಿ ಗರಿಷ್ಠ ತಾಪಮಾನ ಮೂವತ್ತ 3ಪಾಯಿಂಟ್ 3ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ ಇಪ್ಪತ್ತ್ 3ಪಾಯಿಂಟ್ 5ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ .ಗುರುವಾರವೂ ಕರಾವಳಿಯಲ್ಲಿ ಯೆಲ್ಲೋ ಅಲರ್ಟ್ ಇದ್ದು ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು ಹವಾಮಾನ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು