News Karnataka Kannada
Monday, April 22 2024
Cricket
ಮಂಗಳೂರು

ಥೈಲ್ಯಾಂಡ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಶಿವಾನಿ ಆಯ್ಕೆ

Shivani
Photo Credit : News Kannada

ಮಂಗಳೂರು : ಅಂತಾರಾಷ್ಟ್ರೀಯ ಯೂತ್ ಯೋಗಿಕ್ ಸೈನ್ಸ್ ಫೆಡರೇಷನ್ ಮತ್ತು ವರ್ಷಿಣಿ ಯೋಗ ಎಜುಕೇಷನ್ ಸಂಸ್ಥೆಗಳು, ಗವರ್ನಮೆಂಟ್ ಆಫ್ ಆಯುಷ್ ಆಂಡ್  ಯೂತ್ ಸ್ಪೋರ್ಟ್ಸ್ ಸರ್ವಿಸಸ್ ಸಹ ಭಾಗಿತ್ವದೊಂದಿಗೆ ಆಯೋಜಿಸಿದ ರಾಷ್ಟ್ರೀಯ ಮಟ್ಟದ ಎಂಟನೇ ಯೋಗಾಸನ ಸ್ಪರ್ಧೆ ೨೦೨೨ರಲ್ಲಿ ದಿನಾಂಕ ೧೫/೦೪/೨೦೨೨ ರಂದು ಗೋವಾದಲ್ಲಿ ಜರುಗಿದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ೮ ರಿಂದ ೧೦ ವರ್ಷದೊಳಗಿನ ವಯೋಮಾನ ವಿಭಾಗದಲ್ಲಿ ಭಾಗವಹಿಸಿದ ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿಯ ೫ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಶಿವಾನಿ ಶೆಟ್ಟಿ ಪ್ರಥಮ ಸ್ಥಾನ ಪಡೆದಿರುತ್ತಾಳೆ.

ಈಕೆ ಬೇಳಂಜೆ  ಶಿವಾನಂದ ಶೆಟ್ಟಿ ಹಾಗೂ ಹೆಬ್ರಿ ಶ್ರೀಮತಿ ಸುಜಾತ ಶೆಟ್ಟಿ ದಂಪತಿಗಳ ಸುಪುತ್ರಿಯಾಗಿದ್ದು, ಯೋಗ ಗುರು ಕೆ. ನರೇಂದ್ರ ಕಾಮತ್ ಕಾರ್ಕಳ ಇವರ ಶಿಷ್ಯೆಯಾಗಿರುತ್ತಾಳೆ. ಈ ಮೊದಲು ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಿಯೂ ಹಾಗೂ ಇತ್ತೀಚೆಗೆ ನಡೆದ ಮಲೇಷಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜರುಗಿದ ಯೋಗಾಸನ ಸ್ಪರ್ಧೆಯಲ್ಲಿ ತೃತೀಯ ಸ್ಥಾನಿಯಾಗಿ ಪುರಸ್ಕೃತ ಳಾಗಿದ್ದಾಳೆ. ಇವಳ ಈ ಸಾಧನೆಯನ್ನು ಮೆಚ್ಚಿ ಹಲವಾರು ಸಂಘ ಸಂಸ್ಥೆಗಳು, ಹಿರಿಯ ವ್ಯಕ್ತಿಗಳು ಅಭಿನಂದಿಸಿ ಉಜ್ವಲ ಭವಿಷ್ಯವನ್ನು ಬಯಸಿರುತ್ತಾರೆ. ಅಲ್ಲದೇ  ಈಕೆ ಇದೇ ಮೇ ತಿಂಗಳ ಕೊನೆಯ ವಾರದಲ್ಲಿ ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ೧೦ ವರ್ಷದೊಳಗಿನ ವಯೋಮಿತಿಯಲ್ಲಿ ಆಯ್ಕೆಯಾಗಿರುತ್ತಾಳೆ.

ಶಿವಾನಿ ಶೆಟ್ಟಿ ಹೆಬ್ರಿ ಅವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಆರ್ಥಿಕ ನೆರವು ನೀಡುವುದಾಗಿ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ ಶೆಟ್ಟಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು