News Karnataka Kannada
Monday, April 22 2024
Cricket
ಮಂಗಳೂರು

ತುಳುನಾಡಿನ ಜನತೆಗೆ ಬಿಸುಹಬ್ಬದ ಸಂಭ್ರಮ: ತುಳುವಿನಲ್ಲಿ ಶುಭಕೋರಿದ ಸಿಎಂ

Cm Bommai
Photo Credit :

ಬಿಸು ತುಳುನಾಡು ಪ್ರದೇಶದಲ್ಲಿ (ಮಂಗಳೂರು ಹಾಗು ಉಡುಪಿ ಜಿಲ್ಲೆಗಳು), ಸಾಮಾನ್ಯವಾಗಿ ಎಪ್ರಿಲ್ ಎರಡನೇ ವಾರದಲ್ಲಿ ಹೊಸವರ್ಷವಾಗಿ ಆಚರಿಸಲಾಗುತ್ತದೆ. ತುಳುನಾಡಿನಲ್ಲಿ ‘ಬಿಸು’ವಾಗಿಯೂ ಕೇರಳದಲ್ಲಿ ‘ವಿಸು’ವಾಗಿಯೂ ಅಚರಿಸಲ್ಪಡುವ ಬಿಸುಹಬ್ಬವೂ ಸುಗ್ಗಿಯನ್ನು ಸಂಕೇತಿಸುತ್ತದೆ.

ಕರಾವಳಿ ಭಾಗ ತುಳು ನಾಡಿನ ಜನತೆ ಈ ದಿನ ದೇವರ ಮನೆಯಲ್ಲಿ ವಿಷು ಕಣಿ ಎಂದು ಇಡುತ್ತಾರೆ. ವಿಷುವಿನ ಹಿಂದಿನ ದಿನ ರಾತ್ರಿ ಮನೆಯ ಹಿತ್ತಲಿನಲ್ಲಿ, ತೋಟದಲ್ಲಿ ಬೆಳೆದ ಫಲ ವಸ್ತುಗಳು, ಹೂವು-ಹಣ್ಣುಗಳು, ಕನ್ನಡಿ, ಮನೆಯಲ್ಲಿರುವ ಬಂಗಾರ-ಬೆಳ್ಳಿಯನ್ನು ದೇವರ ಮುಂದೆ ಇಡಲಾಗುತ್ತದೆ.

ಬೆಳಗ್ಗೆ ಎದ್ದ ತಕ್ಷಣ ಮನೆಯ ಗೃಹಿಣಿಯರು, ಮಕ್ಕಳು ಮುಖ ತೊಳೆದು ಬಂದು ನೇರವಾಗಿ ದೇವರ ಮನೆಗೆ ಹೋಗಿ ಕನ್ನಡಿಯಲ್ಲಿ ವಿಷು ಕಣಿ ನೋಡುವ ಸಂಪ್ರದಾಯ ಕರಾವಳಿ ಭಾಗದಲ್ಲಿದೆ. ನಂತರ ದೇವರಿಗೆ, ಮನೆಯ ಹಿರಿಯ ಸದಸ್ಯರಿಗೆ ನಮಸ್ಕರಿಸಿ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಸಂಭ್ರಮಿಸುತ್ತಾರೆ.

ವಿಷು ಹಬ್ಬದ ಸಲುವಾಗಿ ಎಳೆ ಗೇರುಬೀಜದ ಪಾಯಸ, ಹಬ್ಬದಡುಗೆ ಮಾಡಿ ಮನೆಯವರೆಲ್ಲಾ ಸೇರಿ ಸಂಭ್ರಮದಿಂದ ಊಟ ಮಾಡುವ ಪದ್ಧತಿಯಿದೆ. ತಮಿಳು ನಾಡಿನ ಜನತೆಗೆ ಸಹ ಇಂದು ಹೊಸ ವರ್ಷ ಆರಂಭ.

ವಿಷು ಹಬ್ಬ ತುಳುನಾಡಿನ ಜನತೆಗೆ ವಿಶೇಷ. ಹೀಗಾಗಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುಳು ಭಾಷೆಯಲ್ಲಿಯೇ ಕರಾವಳಿ ಜನತೆಗೆ ಸೋಷಿಯಲ್ ಮೀಡಿಯಾ ಮೂಲಕ ಶುಭಾಶಯ ತಿಳಿಸಿದ್ದಾರೆ.

ತುಳುವಿನಲ್ಲಿ ಶುಭಕೋರಿದ ಮುಖ್ಯಮಂತ್ರಿ “ಪೊಸ ವರ್ಸೊದ ಪೊಸ ಗಲಿಗೆಗ್ ಪೊಸ ಬುಲೆಕ್ ಲೆನ ಕಣಿ ದೀದ್ ಪೊಲ್ಸುದ ತುಡರ್ ಪೊತ್ತಾದ್ ಬಿಸು-ಕಣಿಕ್ ಎಡ್ಡೆಪ್ಪು ಬಾಮ್ಯೊಂದುಲ್ಲೆ… ಮಹಾ ಜನತೆ ಗ್ ಬಿಸು-ವಿಷು ಪರ್ಬೊದ ಎಡ್ಡೆಪ್ಪುಲು” ಎಂದು ಬರೆದುಕೊಂಡಿದ್ದಾರೆ.

ವಿಷು ಹಬ್ಬಕ್ಕೆ ಶುಭಾಶಯ ಕೋರಿದ ನಳಿನ್ ಕುಮಾರ್ ಕಟೀಲ್, ಎಲ್ಲಾ ತುಳು ನಾಡಿನ ಜನರಿಗೆ ವಿಷು ಹಬ್ಬದ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.

ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ಶುಭಕೋರಿ, ತುಳುವ ಸಂಸ್ಕೃತಿದ ಪೂಸ ವರ್ಸ ಬಿಸು ಪರ್ಬದ ಎಡ್ಡೆಪ್ಪುಲು ಎಂದು ತುಳು ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ.

ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ,ಮಾತ ತುಳು ಬಂಧುಲೆಗ್ ತುಳುವೆರೆ ಪೊಸ ವರ್ಸ ಬಿಸು ಪರ್ಬದ ಎಡ್ಡೆಪ್ಪುಲು. ಎಂದು ಬಿಸು ಹಬ್ಬಕ್ಕೆ ಶುಭಾಶಯ ತಿಳಿಸಿದರು.

ತುಳುನಾಡಿನ ಜನತೆಗೆ ವಿಷು ಹಬ್ಬದ ಶುಭಾಶಯಗಳು ತಿಳಿಸಿದ ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ ನಾರಾಯಣ್ , ಈ ಸೌರಮಾನ ಯುಗಾದಿಯು, ಎಲ್ಲರ ಬಾಳಿನಲ್ಲೂ ಸುಖ, ಸಂತೋಷಗಳನ್ನು ತರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು