News Karnataka Kannada
Sunday, April 14 2024
Cricket
ಮಂಗಳೂರು

ಕ್ಷೇತ್ರದ ಅಭಿವೃದ್ಧಿಗೆ ರೂ. ೧೮೦೦ ಕೋಟಿಯಷ್ಟು ಅನುದಾನ: ಹರೀಶ್ ಪೂಂಜ

Untitled 1
Photo Credit : News Kannada

ಬೆಳ್ತಂಗಡಿ: ಕಳೆದ ೪ ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಿ.ಎಂ.ಗಳ, ಸಚಿವರುಗಳ ಕೈಕಾಲು ಹಿಡಿದು ರೂ. ೧೮೦೦ ಕೋಟಿಯಷ್ಟು ಅನುದಾನ ಒದಗಿಸಿದ್ದೇನೆ. ಪ್ರಸ್ತುತ ಪುಂಜಾಲಕಟ್ಟೆಯಿಂದ ಚಾರ್ಮಾಡಿ ರಸ್ತೆಯ ಪುನರ್ ನಿರ್ಮಾಣಕ್ಕೆ ರೂ. ೭೧೮ ಕೋಟಿ ಬಿಡುಗಡೆಯಾಗಿದ್ದು, ನವೆಂಬರ್ ವೇಳೆಗೆ ಕೆಲಸ ಚಾಲನೆ ಆಗಲಿದೆ, ಈ ಮೂಲಕ ತಾಲೂಕು ಪರಿವರ್ತನೆಯ ಹಾದಿ ಪಡೆದುಕೊಂಡಿದೆ ಎಂದು ಶಾಸಕ ಹರೀಶ್ ಪೂಂಜ ವಿಶ್ವಾಸ ವ್ಯಕ್ತಪಡಿಸಿದರು.

ದ.ಕ.ಜಿ.ಪಂ., ತಾ.ಪಂ. ಬೆಳ್ತಂಗಡಿ, ಗ್ರಾ.ಪಂ. ಹೊಸಂಗಡಿ ಹಾಗೂ ಬೆಳ್ತಂಗಡಿ  ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಹೊಸಂಗಡಿ ಗ್ರಾ.ಪಂ.ನ ಶೇ. ೨೫ ನಿಧಿಯಡಿ ಪ.ಜಾತಿ, ಪ.ಪಂಗಡ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣೆ, ಗ್ರಾ.ಪಂ.ನ ಡಿಜಿಟಲ್ ಗ್ರಂಥಾಲಯ ಲೋಕಾರ್ಪಣೆ ಹಾಗೂ ಜಲಜೀವನ್ ಮಿಷನ್ ಯೋಜನೆಯಡಿ ಬಡಕೋಡಿ ಗ್ರಾಮದ ಕುಡಿಯುವ ನೀರಿನ ಕಾಮಗಾರಿಗಳ ಶಿಲಾನ್ಯಾಸವನ್ನು ಶನಿವಾರ ಪೆರಿಂಜೆಯ ಸಂತೃಪ್ತಿ ಸಭಾಭವನದಲ್ಲಿ ನೆರವೇರಿಸಿ ಅವರು ಮಾತನಾಡಿದರು.

ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದ ಅನುವಂಶೀಯ ಆಡಳಿತದಾರರಾದ ಎ. ಜೀವಂಧರ ಕುಮಾರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶುಭ ಹಾರೈಸಿದರು.

ಹೊಸಂಗಡಿ ಗ್ರಾ.ಪಂ. ಅಧ್ಯಕ್ಷ ಕರುಣಾಕರ ಪೂಜಾರಿ ಅಧ್ಯಕ್ಷತೆ ವಹಿಸಿ, ಹೊಸಂಗಡಿ, ಬಡಕೋಡಿ ಗ್ರಾಮಸ್ಥರ ಬೇಡಿಕೆಗಳಿಗೆ ಶಾಸಕ ಸ್ಪಂದನೆ ಮೆಚ್ಚುವಂತಾಗಿದೆ. ಇನ್ನು ಹಲವು ಬೇಡಿಕೆಗಳಿದ್ದು, ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದರು.

ಬೆಳ್ತಂಗಡಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ, ಹೊಸಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ನಾಗರತ್ನ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಅಂಗನವಾಡಿ ಶಿಕ್ಷಕಿ ಸುಕನ್ಯಾ ಪ್ರಾರ್ಥಿಸಿ, ಪಂ. ಸದಸ್ಯೆ ಪ್ರಮೀಳ ಸ್ವಾಗತಿಸಿದರು. ಪಿಡಿಒ ಗಣೇಶ್ ಶೆಟ್ಟಿ ನಿರೂಪಿಸಿ, ಪಂ. ಸದಸ್ಯ ಲೋಕೇಶ್ ವಂದಿಸಿದರು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯನಿರ್ವಹಕ ಅಭಿಯಂತರ ಸೂರ್ಯನಾರಾಯಣ ಭಟ್ ಅವರನ್ನು ಸಮ್ಮಾನಿಸಲಾಯಿತು.   ಹಾಗೂ ಸಾರ್ವಜನಿಕವಾಗಿ ಕುಡಿಯುವ ನೀರು ಒದಗಿಸಿದ ಶಂಕರ ಉಜಿರಾದೆ, ರವಿಚಂದ್ರ ಶೆಟ್ಟಿ ಹಾಗೂ ಕಾಸಿರಾಜೇಂದ್ರನ್ ಅವರನ್ನು ಗೌರವಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು