News Karnataka Kannada
Thursday, April 25 2024
Cricket
ಮಂಗಳೂರು

ಕ್ರೈನ್ ಚಾಲಕನ ಅಜಾಗರೂಕತೆ; ಕಾರ್ಮಿಕನ‌ ಮೇಲೆ‌ ಮರ ಉರುಳಿ ಮೃತ್ಯು

Ullal: Man commits suicide by pouring petrol
Photo Credit :

ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದ ದಿಡುಂಬಿ ಕರಿಯ‌ಗ ಗೌಡ ಅವರ ಜಾಗದಲ್ಲಿ‌‌ ಕಡಿದಿದ್ದ ಮ್ಯಾಂಜಿಯಂ ಮರವನ್ನು ಸಾಗಾಟಕ್ಕೆ ಅಣಿಗೊಳಿಸುತ್ತಿದ್ದಾಗ ಕ್ರೈನ್ ಚಾಲಕ‌ ಅಜಾಗರೂಕತೆಯಿಂದ ವರ್ತಿಸಿದ್ದರ ಪರಿಣಾಮ ಕಾರ್ಮಿಕನೊಬ್ಬನ ಮೇಲೆ ಮರದ ದಿಮ್ಮಿ ಉರುಳಿ ಬಿದ್ದಿದ್ದು ಆತ ಮೃತಪಟ್ಟ ಘಟನೆ ನಡೆದಿದೆ.

ಮದ್ದಡ್ಕದ ಹಮೀದ್ ಎಂಬವರೇ ಮೃತರಾದವರು. ಮರದ ವ್ಯಾಪಾರಿಯಾಗಿರುವ ಮದ್ದಡ್ಕದ ಅನಿಲ‌‌ ನಿವಾಸಿ ಇಸ್ಮಾಯಿಲ್ ಅವರು ಧರ್ಮಸ್ಥಳ ಗ್ರಾಮದ ದಿಡುಂಬಿ ಕರಿಯ ಗೌಡ ಜಾಗದಿಂದ ಮ್ಯಾಂಜಿಯಮ್ ಮರವನ್ನು ಖರೀದಿಸಿದ್ದು ಎ.10 ರಂದು ಮರಗಳನ್ನು ಬೇರೆ ಸ್ಥಳಕ್ಕೆ ಸಾಗಿಸುವರೇ ಕೂಲಿ ಕೆಲಸಕ್ಕೆಂದು ತನ್ನ ಜೊತೆ ಹಮೀದ್, ಶಿಯಾಬ್ ಮತ್ತು ರಾಜೇಶ ಎಂಬವರನ್ನು ಕರೆದುಕೊಂಡು ಬಂದಿದ್ದರು.

ಕ್ರೇನ್ ಮುಖಾಂತರ ಮರಗಳನ್ನು ಸ್ಥಳಾಂತರಿಸುವರೇ ತೊಡಗಿದ್ದ ವೇಳೆ ಮಧ್ಯಾಹ್ನ 12.30 ಗಂಟೆಗೆ ಇಸ್ಮಾಯಿಲ್ ಅವರು ನೋಡು ನೋಡುತ್ತಿದ್ದಂತೆ ಕ್ರೇನ್ ಚಾಲಕ ಇಬ್ರಾಹಿಂ ತಾನು ಚಲಾಯಿಸುತ್ತಿದ್ದ ಕ್ರೇನ್ ನ ಕೊಕ್ಕೆಯನ್ನು ಒಮ್ಮೆಗೆ ಕೆಳಗೆ ಇಳಿಸಿದ ಪರಿಣಾಮ ಕ್ರೇನ್ ನ ಕೊಕ್ಕೆಯು ಹಮೀದ್ ಅವರ ಕುತ್ತಿಗೆಯ ಭಾಗಕ್ಕೆ ತಾಗಿದ್ದು ಕ್ರೇನ್ ನ ಕೊಕ್ಕೆಯಲ್ಲಿದ್ದ ಮರವು ಹಮೀದ್ ನ ಬೆನ್ನಿಗೆ ಬಿದ್ದ ಪರಿಣಾಮ ಹಮೀದ್ ಗೆ ಗಂಭೀರ ಗಾಯಗೊಂಡಿದ್ದರು.

ಬಳಿಕ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಆದರೆ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟರು. ಧರ್ಮಸ್ಥಳ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು