News Karnataka Kannada
Friday, April 19 2024
Cricket
ಮಂಗಳೂರು

ಕಲ್ಲಡ್ಕ ಶ್ರೀ ರಾಮ ವಿದ್ಯಾಸಂಸ್ಥೆಯಲ್ಲಿ “ಸೀತಾ ರಸೋಯಿ” ಪಾಕಶಾಲಾ ಸಮುಚ್ಚಯ ಉದ್ಘಾಟನೆ

Kaldka
Photo Credit :

ಬಂಟ್ವಾಳ : ಅಕ್ಷರ ಜ್ಞಾನ ಬಹುದೊಡ್ಡ ಸಂಪತ್ತು, ಜ್ಞಾನ ದಾಸೋಹದ ಪವಿತ್ರ ಕ್ಷೇತ್ರ ಶ್ರೀರಾಮ ವಿದ್ಯಾಸಂಸ್ಥೆಯಾಗಿದ್ದು, ಹಸಿದ ಹೊಟ್ಟೆಗೆ ಅನ್ನವನ್ನು ನೀಡುವ ವಿದ್ಯಾಸಂಸ್ಥೆಯು ಆಗಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ ಅವರು ಹೇಳಿದ್ದಾರೆ.

ಶನಿವಾರ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಕಾರದಿಂದ ನೂತನವಾಗಿ ನಿರ್ಮಾಣಗೊಂಡ 4 ಮಹಡಿಯುಳ್ಳ ಕಟ್ಟಡ” ಸೀತಾ ರಸೋಯಿ” ಪಾಕಶಾಲಾ ಸಮುಚ್ಚಯದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಧರ್ಮ ಉಳಿದರೆ ನಾವು ಉಳಿಯಲು ಸಾಧ್ಯ ಎಂದರು.

ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಮಾತಾನಂದಮಯೀ ಅವರು ಆಶೀರ್ವನಗೈದು,ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ‍್ಯವನ್ನು ಈ ವಿದ್ಯಾ ಸಂಸ್ಥೆಯಿಂದ ನಡೆಯುತ್ತಾ ಬಂದಿರುವುದು ಅಭಿನಂದನೀಯ, ಧರ್ಮವೇ ನಮ್ಮ ದೇಶದ ಸತ್ವವಾಗಿದ್ದು ತ್ಯಾಗ, ಸೇವಾ ಮನೋಭಾವವನ್ನು ಅಳವಡಿಸಿದಾಗ ದೇಶದ ಅಭಿವೃದ್ಧಿ ಕೂಡ ಸಾಧ್ಯ ಎಂದರು.

ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ಭೀಮೇಶ್ವರ ಜೋಶಿ ದಂಪತಿಗಳು ಉಪಸ್ಥಿತರಿದ್ದರು.ಈ ಸಂದರ್ಭ ಮಾತನಾಡಿದ ಡಾ.ಭೀಮೇಶ್ವರ ಜೋಶಿ ವಿದ್ಯಾರ್ಥಿಗಳ ಆರೋಗ್ಯವೇ ನನ್ನ ಬದುಕಿನ ಗುರಿ ಎಂಬ ಭಾವನೆ ಇಟ್ಟುಕೊಂಡವರು ಡಾ. ಪ್ರಭಾಕರ ಭಟ್ ಅವರು ಶ್ರೀರಾಮನ ಆದರ್ಶ, ಗುರುಕುಲ ಪದ್ಧತಿ ವ್ಯವಸ್ಥೆ, ಉತ್ತಮ ಸಂಸ್ಕಾರದ ನೀರನ್ನು ಹಾಕಿ ಗಿಡವಾಗಿ ಬೆಳೆಸಿದ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಾ ಬಂದಿರುವುದು ನಿಜಕ್ಕೂ ಇದು ಹೆಮ್ಮೆಯ ಸಂಸ್ಥೆ ಎಂದು ಹೇಳಿದರು. ಸಮಾರಂಭದಲ್ಲಿ ಗೌರವ ಉಪಸ್ಥಿತರಿದ್ದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಮಕ್ಕಳಿಗೆ ಬೇಕಾದಂತಹ ಸಂಸ್ಕಾರವನ್ನು ನೀಡುವ ಕಲೆ ಇದ್ರೆ ಮಾತ್ರ ಆತ ಜ್ಞಾನಿ ಆಗಲು ಸಾಧ್ಯ. ಧರ್ಮ, ಸಂಸ್ಕೃತಿ, ಜೀವನ ಮೌಲ್ಯಗಳಿಂದ ವಿದ್ಯಾರ್ಥಿಗಳು, ಹಿಂದೂ ಸಮಾಜ ವಂಚಿತರಾಗಬಾರದೆಂಬ ನಿಟ್ಟಿನಲ್ಲಿ ಈ ವಿದ್ಯಾಸಂಸ್ಥೆ ಆರಂಭಿಸಲಾಯಿತು ಎಂದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಡಾ.ಚಂದ್ರಶೇಖರ ಶೆಟ್ಟಿ ಕೆರಾಡಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ‍್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ವಿದ್ಯಾಕೇಂದ್ರದ ಅಧ್ಯಕ್ಷರಾದ ಬಿ. ನಾರಾಯಣ ಸೋಮಯಾಜಿ, ಡಾ. ಕಮಲಾ ಪ್ರಭಾಕರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. “ಸೀತಾ ರಸೋಯಿ” ಪಾಕಶಾಲಾ ಸಮುಚ್ಚಯ ಎರಡು ಭೋಜನಾಲಯ, ಒಂದು ಅಡುಗೆ ಶಾಲೆ ಹಾಗೂ ಕಚೇರಿ, ಉಗ್ರಾಣವನ್ನೊಳಗೊಂಡಿದ್ದು, ಇಲ್ಲಿ ೫೦೦೦ ಮಂದಿಗೆ ಏಕಕಾಲದಲ್ಲಿ ಅಡುಗೆ ಸಿದ್ಧಪಡಿಸಬಹುದಾಗಿದೆ. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಯಣ ಭಟ್ ಅವರ ನೇತೃತ್ವದಲ್ಲಿ ವೈಧಿಕ ವಿಧಿವಿಧಾನಗಳು ನೆರವೇರಿತು. ಅತಿಥಿಗಳು ಗಂಟೆ ಬಾರಿಸಿದಾಗ ಸಮುಚ್ಚಯದ ಮುಖ್ಯ ದ್ವಾರದ ಪರದೆ ಪಕ್ಕಕ್ಕೆ ಸರಿಯುವ ಮೂಲಕ ಕಟ್ಟಡವು ಉದ್ಘಾಟನೆಗೊಂಡಿತು. ವಿದ್ಯಾಕೇಂದ್ರದ ಸಂಚಾಲಕರು ವಸಂತ ಮಾಧವ ಪ್ರಾಸ್ತಾವಿಕ ಮಾತನಾಡಿ, ಶ್ರೀರಾಮ ವಿದ್ಯಾಸಂಸ್ಥೆ ಸಂಸ್ಕಾರಯುತವಾದ ಶಿಕ್ಷಣ ನೀಡುತ್ತಾ ಬಂದಿದೆ. ಸರಕಾರ ಆರಂಭಿಸುವ ಮೊದಲೇ ನಮ್ಮ ವಿದ್ಯಾಕೇಂದ್ರದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು ಎಂದರು.ಇದೇ ವೇಳೆ ಪದವಿ ಪರೀಕ್ಷೆಯಲ್ಲಿ  ರ‍್ಯಾಂಕ್‌ಗಳಿಸಿದ ಆದಿತ್ಯ ಕೆ ಮತ್ತು ಕಟ್ಟಡ ನಿರ್ಮಾಣಕ್ಕೆ ಇಂಜಿನಿಯರ್ ಆಗಿ ಸಹಕರಿಸಿದ ರಾಮ್‌ಪ್ರಸಾದ್ ಇವರಿಗೆ ಗೌರವಿಸಲಾಯಿತು.

ಉತ್ಸಾಹದಿಂದ ಭಾಗವಹಿಸಿದ ಡಾ.ಭಟ್: ಮೂರುದಿನಗಳ ಹಿಂದೆಯಷ್ಠೆ ಆರೋಗ್ಯದಲ್ಲಿ ಏರುಪೇರಾಗಿ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ ಕಲ್ಲಡ್ಕ‌ ಡಾ.ಪ್ರಭಾಕರ ಭಟ್ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿ ಶನಿವಾರ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ನಡೆದ ಸೀತಾ ರಸೋಯಿ ಪಾಕಶಾಲಾ ಸಮುಚ್ಚಯದ ಉದ್ಘಾಟನಾ ಸಮಾರಂಭದಲ್ಲಿ ಎಂದಿನಂತೆ ಉತ್ಸಾಹದಿಂದ ಪಾಲ್ಗೊಂಡರು. ಕಾರ್ಯಕ್ರಮದ ಉದ್ದಕ್ಕೂ ಎಂದಿನ ಲವಲವಿಕೆಯಿಂದ ನಗುಮೊಗದಿಂದಲೇ ಅತಿಥಿಗಳ ಜೊತೆ ದಿನ ಕಳೆದರು. ಆಸ್ಪತ್ರೆಯಿಂದ ಬಂದ ಡಾ.ಭಟ್ ಅವರನ್ನು ವಿದ್ಯಾರ್ಥಿಗಳು, ಸಿಬ್ಬಂದಿಗಳು ಹಾಗೂ ಪ್ರಮುಖರು ಡಾ.ಭಟ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು