News Karnataka Kannada
Saturday, April 20 2024
Cricket
ಮಂಗಳೂರು

ಏ. 27ರಂದು ಜೆಸಿಸಿಇ(1)ಬೆಳ್ತಂಗಡಿ ಘಟಕ ಉದ್ಘಾಟನೆ

Untitled 91
Photo Credit : News Kannada

ಮಂಗಳೂರು : ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿ ಕಾರ್ಯಗಳಲ್ಲಿ ಸರಕಾರದ ಜೊತೆ ಕೈಜೋಡಿಸುವ ದೃಷ್ಠಿಯಿಂದ ರಾಷ್ಟ್ರಮಟ್ಟದ ಅಭಿಯಂತರುಗಳ ಸಂಘಟನೆಯಾದ ಎಸಿಸಿಇ(೧) ಬೆಂಗಳೂರು ಇದರ ವ್ಯಾಪ್ತಿಗೆ ಬರುವ ಬೆಳ್ತಂಗಡಿ ಘಟಕವನ್ನು ಎ.೨೭ರಂದು ಸಂಜೆ ಉಜಿರೆ ಕೃಷ್ಣಾನುಗ್ರಹ ಸಭಾಭವನದಲ್ಲಿ ಉದ್ಘಾಟಿಸಲಾಗುವುದು ಎಂದು ಘಟಕದ ಚೆರ್‌ಮನ್ ಜಗದೀಶ್ ಪ್ರಸಾದ್ ಎನ್. ತಿಳಿಸಿದ್ದಾರೆ.

ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವೃತ್ತಿಯಲ್ಲಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದು, ಸರಕಾರಿ ನೀತಿಗಳಿಂದ ಸಾರ್ವಜನಿಕರಿಗೆ ಆಗುವ ತೊಂದರೆಗಳಿಗೆ ಸೂಕ್ತ ಸಲಹೆಗಳನ್ನು ನೀಡಿ ಅದು ಜಾರಿಗೆ ಬರುವಂತೆ ನೋಡಿಕೊಳ್ಳುವುದು, ಹೊಸ ಯೋಜನೆಗಳ ಬಗ್ಗೆ ಸರಕಾರದ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಲಹೆ ಸೂಚನೆಗಳನ್ನು ನೀಡುವುದು, ಸರಕಾರಿ ದಾಖಲೆಗಳ ದೃಡೀಕರಣಕ್ಕೆ ಸೂಕ್ತ ಅನುಭವಿ ಪರಿಶೀಲನೆ ನಡೆಸಿ ಸೂಕ್ತ ತಾಂತ್ರಿಕ ವರದಿಯನ್ನು ತಯಾರಿಸುವುದು ಹಾಗೂ ಎಲ್ಲಾ ವಿಧದ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದು ನಮ್ಮ ಸಂಘಟನೆಯ ಉದ್ಧೇಶವಾಗಿದೆ.
ತಾಲೂಕಿನಲ್ಲಿ ಯಾರದರೂ ನೋಂದಾವಣೆ ಬಾಕಿ ಇದ್ದಲ್ಲಿ ಸಂಘಟನೆಯೊಂದಿಗೆ ಹೆಸರನ್ನು ನೋಂದಾಯಿಸಬೇಕೆಂದು ವಿನಂತಿಸಿದರು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರಧ್ವಾಜ್, ಘಟಕದ ರಾಷ್ಟ್ರೀಯ ಅಧ್ಯಕ್ಷ ವಿಜಯ್ ಕೆ ಸನಪ್, ಶಾಸಕ ಹರೀಶ್ ಪೂಂಜಾ, ವಿಧಾನಪರಿಷತ್ ಸದಸ್ಯರಾದ ಪ್ರತಾಪ್‌ಸಿಂಹ ನಾಯಕ್, ಕೆ. ಹರೀಶ್ ಕುಮಾರ್, ಸೌತ್ ಎಸಿಎಸಿಇ(೧) ಉಪಾಧ್ಯಕ್ಷ ಕಚರ್ಲ ರಾಜ್‌ಕುಮಾರ್, ಎಸಿಎಸಿಇ(೧) ಪ್ರಧಾನ ಕಾರ್ಯದರ್ಶಿ ವಿಜಯ್ ವಿಷ್ಣು ಮಯ್ಯ ಟಿ, ಕೋಶಾಧಿಕಾರಿ ಆರ್. ಶ್ರೀನಿವಾಸನ್ ಮೊದಲಾದವರು ಉಪಸ್ಥಿತರಿರಲಿದ್ದಾ ಎಂದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ವಿದ್ಯಾ ಕುಮಾರ್ ಕ., ಕೋಶಾಧಿಕಾರಿ ಸುರೇಶ್ ಬಂಗೇರ ಎಂ.ಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರವೀಣ್ ಬಿ.ಜಿ., ಕೇಶವ ಮೊದಲಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು