News Karnataka Kannada
Sunday, April 21 2024
Cricket
ಮಂಗಳೂರು

ಎಂಸಿಸಿ ಬ್ಯಾಂಕ್ ಸಂಸ್ಥಾಪಕರ ದಿನಾಚರಣೆ ಮತ್ತು ನವೀಕೃತ ಬ್ಯಾಂಕ್ ಕಟ್ಟಡ ಉದ್ಘಾಟನೆ

Janaspandana Sabha at Keravadi, lays foundation stone for works worth Rs 2 crore
Photo Credit :

ಮಂಗಳೂರು : ಎಂಸಿಸಿ ಬ್ಯಾಂಕ್ ಮಂಗಳೂರು ಇದರ ಸಂಸ್ಥಾಪಕರ ದಿನಾಚರಣೆ ಮತ್ತು ನವೀಕೃತ ಬ್ಯಾಂಕ್ ಕಟ್ಟಡದ ಟುಲೆವೆಲ್ ಕಾರ್ ಪಾರ್ಕಿಂಗ್, ಸ್ಟಾಫ್ ಟ್ರೈನಿಂಗ್ ಸೆಂಟರ್, ಪಿಎಫ್ಎಕ್ಸ್ ಸಲ್ಡಾನ್ಹಾ ಮೆಮೋರಿಯಲ್ ಹಾಲ್ ನ ಉದ್ಘಾಟನಾ ಕಾರ್ಯಕ್ರಮ ಮಂಗಳೂರು ಲೈಟ್ ಹೌಸ್ ಹಿಲ್ ರೋಡ್ ನ ಎಂಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ನೆರವೇರಿತು.

ನವೀಕೃತ ಟೂಲೆವೆಲ್ ಕಾರ್ ಪಾರ್ಕಿಂಗ್ ಗೆ ಎಂಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವೆಲೆನ್ಟೈನ್ ಡಿಸಿಲ್ವ ಚಾಲನೆ ನೀಡಿದರು.

 

ಬಳಿಕ ಎಂಸಿಸಿ ಬ್ಯಾಂಕ್ ಸಂಸ್ಥಾಪಕ ಪಿಎಫ್ಎಕ್ಸ್ ಸಲ್ಡಾನ್ಹಾ ಭಾವಚಿತ್ರಕ್ಕೆ ಮಿಲಾಗ್ರೀಸ್ ಚರ್ಚ್ ನ ಧರ್ಮ ಗುರು ಫಾ. ಬೊನವೆಂಚರ್ ನಝ್ರತ್ ಪುಷ್ಪಾರ್ಚಣೆ ಮಾಡಿದರು. ನೂತನ ಸ್ಟಾಫ್ ಟ್ರೈನಿಂಗ್ ಸೆಂಟರ್ ಗೆ ಎಂಸಿಸಿ ಬ್ಯಾಂಕ್ ನ ಅಧ್ಯಕ್ಷ ಅನೀಲ್ ಲೋಬೊ ಚಾಲನೆ ನೀಡಿದರು.

ಪಿಎಫ್ಎಕ್ಸ್ ಸಲ್ಡಾನ್ಹಾ ಮೆಮೋರಿಯಲ್ ಹಾಲ್ಅನ್ನು ನ್ಯಾಯವಾದಿ ಎಂಪಿ ನೊರೊನ್ಹಾ ಉದ್ಘಾಟಿಸಿದರು.

ಈ ವೇಳೆ ಎಂಸಿಸಿ ಬ್ಯಾಂಕ್ ನ ಸಂಸ್ಥಾಪಕರ ದಿನಾಚರಣೆ ಲೋಗೊ ಅನಾವರಣ ಹಾಗೂ ಬ್ಯಾಂಕ್ ನ ಬುಲೆಟಿನ್ ಬಿಡುಗಡೆಯನ್ನು ಎಂಸಿಸಿ ಬ್ಯಾಂಕ್ ಸಂಸ್ಥಾಪಕ ಪಿಎಫ್ಎಕ್ಸ್ ಸಲ್ಡಾನ್ಹಾ ಅವರ ಮೊಮ್ಮಗ ಹೆರಾಲ್ಡ್ ಆರ್ಟಿ ಮತ್ತು ಬ್ಯಾಂಕ್ ನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಬ್ಯಾಂಕ್ ಜನರಲ್ ಮ್ಯಾನೇಜರ್ ಸುನಿಲ್ ಮಿನೇಜಸ್ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು