ಟಿಪ್ಪರ್ ಲಾರಿ ಹಾಗೂ ಬೈಕ್ ನಡುವೆ ಅಪಘಾತ: ಇಬ್ಬರು ವಿದ್ಯಾರ್ಥಿಗಳು ಸಾವು

ಕಾಸರಗೋಡು: ಟಿಪ್ಪರ್ ಲಾರಿ ಹಾಗೂ ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಶುಕ್ರವಾರ ಬೆಳಿಗ್ಗೆ ಬಂದ್ಯೋಡು ಬಳಿಯ ಮುಟ್ಟಂ ಗೇಟ್ ಬಳಿ ನಡೆದಿದೆ.

ಉಪ್ಪಳ ನಯಾಬಜಾರಿನ ಮುಹಮ್ಮದ್ ಮುಸಾಬ್(೨೦) ಮತ್ತು ಮಂಜೇಶ್ವರ ವಾಮಂಜೂರಿನ ಮುಹಮ್ಮದ್ ಅಮೀನ್
ಮಹರೂಫ್(೨೦) ಮೃತ ಪಟ್ಟವರು.

ಇಬ್ಬರೂ ಮಂಗಳೂರು ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು. ಕಾಸರಗೋಡಿಗೆ ತೆರಳಿ ಮನೆಗೆ ಮರಳುತ್ತಿದ್ದಾಗ ರಾಷ್ಟೀಯ ಹೆದ್ದಾರಿ ಕಾಮಗಾರಿಯ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡ ಇಬ್ಬರನ್ನೂ ಮಂಗಳೂರು ಆಸ್ಪತ್ರೆಗೆ ದಹಲಿಸಿದರೂ ಮುಸಾಬ್ ಮಧ್ಯಾಹ್ನ ಹಾಗೂ ಮಹರೂಫ್ ಸಂಜೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.

ಅಪಘಾತದ ರಭಸಕ್ಕೆ ಇಬ್ಬರೂ,ರಸ್ತೆಗೆಸೆಯಲ್ಪಟ್ಟಿದ್ದು ಗಂಭೀರ ಗಾಯಗೊಂಡಿದ್ದರು. ಕಾಸರಗೋಡಿನಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ಪಾಲ್ಗೊಂಡು ಬೈಕ್ ನಲ್ಲಿ ಮನೆಗೆ ಮರಳುತ್ತಿದ್ದರು. ಇಬ್ಬರ ಮೃತದೇಹಗಳನ್ನು ಮಂಜೇಶ್ವರ ಪೊಲೀಸರು ಮಹಜರು ನಡೆಸಿದರು.

Ashika S

Recent Posts

ಇಂದು ತಾಯಂದಿರ ದಿನ : ಈ ದಿನದ ಮಹತ್ವ ,ಹಿನ್ನೆಲೆ ಏನು?

ತಾಯಂದಿರ ದಿನ , ತಾಯಂದಿರ ಗೌರವಾರ್ಥ ರಜಾದಿನವನ್ನು ವಿಶ್ವದಾದ್ಯಂತ ದೇಶಗಳಲ್ಲಿ ಆಚರಿಸಲಾಗುತ್ತದೆ. ಅದರ ಆಧುನಿಕ ರೂಪದಲ್ಲಿ ರಜಾದಿನವು ಹುಟ್ಟಿಕೊಂಡಿತುಯುನೈಟೆಡ್ ಸ್ಟೇಟ್ಸ್…

5 mins ago

ಇಂದಿನ ರಾಶಿ ಫಲ : ಯಾರಿಗೆ ಶುಭ, ಯಾರಿಗೆ ಅಶುಭ

ವಾರದ ಆರಂಭದಲ್ಲೇ ಶುಭ ಸುದ್ದಿ. ಮನೆಯಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದ್ದು, ವಾರಾಂತ್ಯದಲ್ಲಿ ಎಲ್ಲವೂ ಸರಿದೂಗಲಿದೆ. ಕಾರ್ಮಿಕರಿಗೆ ಲಾಭ.…

19 mins ago

ಇಂದು ಶಂಕರ ಜಯಂತಿ : ಶಂಕರಾಚಾರ್ಯರ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ

ಹೆಸರೇ ಸೂಚಿಸುವಂತೆ, ಆದಿ ಶಂಕರ ಜಯಂತಿಯನ್ನು ಭಾರತೀಯ ತತ್ವಜ್ಞಾನಿ ಮತ್ತು ದೇವತಾಶಾಸ್ತ್ರಜ್ಞ ಆದಿ ಶಂಕರರ ಜನ್ಮದಿನದ ಸವಿ ನೆನಪಿಗಾಗಿ ಆಚರಿಸಲಾಗುತ್ತದೆ.…

29 mins ago

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

8 hours ago

ಜಿಯೋ ಬಂಪರ್‌ ಆಫರ್‌ : 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್

ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…

9 hours ago

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

9 hours ago