News Karnataka Kannada
Monday, April 29 2024
ಕಾಸರಗೋಡು

ಕೆಎಸ್ಆರ್ಟಿಸಿ ಬಸ್ಸುಗಳ ಸೇವೆ ಎಲ್ಲಾ ಹಳ್ಳಿಗಳಿಗೂ ತಲುಪಿಸುವ ಗುರಿ- ಕೇರಳ ಸಾರಿಗೆ ಸಚಿವ

KSRTC buses to reach all villages: Kerala Transport Minister
Photo Credit : By Author

ಕಾಸರಗೋಡು: ಕೆಎಸ್ಆರ್ಟಿಸಿ ಬಸ್ಸುಗಳ ಸೇವೆ ಎಲ್ಲಾ ಹಳ್ಳಿ ಗಳಿಗೂ ತಲುಪಿಸುವ ಗುರಿ ರಾಜ್ಯ ಸರಕಾರ ಹೊಂದಿದೆ ಎಂದು ಕೇರಳ ಸಾರಿಗೆ ಸಚಿವ ಆಂಟನಿ ರಾಜು ಹೇಳಿದರು.

ಅವರು ಶುಕ್ರವಾರ ಕುಂಬಳೆ ಯಲ್ಲಿ ಜಿಲ್ಲೆಯ ಮೊದಲ ಗ್ರಾಮ ವಂಡಿ ( ಗ್ರಾಮೀಣ ವಾಹನ) ಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.ಗ್ರಾಮೀಣ ಪ್ರದೇಶದ ಎಲ್ಲರಿಗೂ ಈ ಪ್ರಯಾಣ ಸೇವೆ ಲಭಿಸಬೇಕಿದೆ. ಗ್ರಾಮೀಣ ಪ್ರದೇಶದ ಪ್ರಯಾಣ ಸಮಸ್ಯೆ. ಪರಿಹರಿಸಲು ಕುಂಬಳೆ ಗ್ರಾಮ ಪಂಚಾಯತ್ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮ ಜಂಟಿಯಾಗಿ ಗ್ರಾಮ ವಂಡಿ ಯೋಜನೆ ಜಾರಿಗೆ ತರಲಾಗಿದೆ ಎಂದು ಹೇಳಿದ ಅವರು, ಮಂಗಳೂರಿನ ವಿವಿಧ ಕಾಲೇಜುಗಳಿಗೆ ಶಿಕ್ಷಣಕ್ಕೆ ತೆರಳುತ್ತಿರುವ ಜಿಲ್ಲೆಯ ವಿದ್ಯಾರ್ಥಿಗಳಿಗೆ ಕೆ ಎಸ್ ಆರ್ ಟಿ ಸಿ ಬಸ್ಸುಗಳಲ್ಲಿ ರಿಯಾಯಿತಿ ದರ ನೀಡಬೇಕೆಂಬುದು ಹಲವು ಸಮಯದ ಕನಸಾಗಿತ್ತು. ಈ ಕನಸು ಈಡೇರಿಸಲಾಗಿದೆ ಎಂದರು.

ಎ.ಐ ಕ್ಯಾಮಾರ ಅಳವಡಿಕೆ ಸಂದರ್ಭದಲ್ಲಿ ಹಲವು ವಿರೋಧಗಳು ಕಂಡು ಬಂದಿತ್ತು. ಕ್ಯಾಮಾರ ಅಳವಡಿಕೆ ಬಳಿಕ ಭನ ಚಾಲನಾ ಉಲ್ಲಂಘನೆ , ಅಪಘಾತಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಹೇಳಿದರು.

ಶಾಸಕ ಎ ಕೆ. ಎಂ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಸಿ. ಎ ಸೈಮಾ, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಸಮೀನಾ ಟೀಚರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕುಂಬಳೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾಸಿರ್ ಮೊಗ್ರಾಲ್ , ಬ್ಲಾಕ್ ಪಂಚಾಯತ್ ಸದಸ್ಯ ಅಶ್ರಫ್ ಕಾರ್ಲ, ಜಿಲ್ಲಾ ಪಂಚಾಯತ್ ಸದಸ್ಯೆ ಜಮೀಲಾ ಸಿದ್ದೀಕ್, ಪಂಚಾಯತ್ ಸದಸ್ಯ ರಾದ ಅಶ್ರಫ್ ಕಾರ್ಲ, ಪ್ರೇಮ ಶೆಟ್ಟಿ, ನಾಸಿರ್, ಪಂಚಾಯತ್ ಸದಸ್ಯ ರಾದ ಎಂ ಸಬೂರಾ, ನಸೀಮಾ ಖಾಲಿದ್, ಬಿ. ಎ ರಹಮಾನ್, ಅನ್ವರ್ ಹುಸೈನ್, ಕೆ
.ಮೋಹನ್, ಯೂಸಫ್ ಉಳುವಾರ್, ಪುಷ್ಪಲತಾ ಶೆಟ್ಟಿ, ,ವಿವಿಧ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು, ಕೆ ಎಸ್ ಆರ್ ಟಿಸಿ ಅಧಿಕಾರಿಗಳಾದ ಜಿ.ಪಿ ಪ್ರದೀಪ್ ಕುಮಾರ್, ವಿ.ಮನೋಜ್ ಕುಮಾರ್, ಕೆ.. ಪ್ರಿಯೇಶ್ ಕುಮಾರ್, ಮೋಹನ್ ಕುಮಾರ್, ಬಿಜು ಮೋನ್ ,ಸಿ.ಎಚ್ ಹರೀಶ್ ಕುಮಾರ್, ಕುಂಬಳೆ ಪಂಚಾಯತ್ ಕಾರ್ಯದರ್ಶಿ ವೀರಾಜ್ ತಂಬೂರಾನ್,ಅಶ್ರಫ್ ಕೊಡ್ಯಮ್ಮೆ ಮೊದಲಾದವರು ಉಪಸ್ಥಿತ ರಿದ್ದರು. ಪಂಚಾಯತ್ ಅಧ್ಯಕ್ಷೆ ಯು. ಪಿ ತಾಯಿರಾ ಯೂಸಫ್ ಸ್ವಾಗತಿಸಿ, ಗ್ರಾಮ ವಂಡಿ ವಿಶೇಷ ಅಧಿಕಾರಿ ವಿ.ಎಂ ತಾಜುದ್ದೀನ್ ವಂದಿಸಿದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು