News Karnataka Kannada
Sunday, May 19 2024
ಕಾಸರಗೋಡು

ಕಾಸರಗೋಡು: ಚೂಡಿದಾರ್ ಶಾಲ್ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

Kasargod: Woman dies after being hit by churidar shawl machine
Photo Credit : By Author

ಕಾಸರಗೋಡು: ಹುಟ್ಟು ಹಬ್ಬದ ದಿನದಂದೇ ಚೂಡಿದಾರ್ ನ ಶಾಲ್ ಯಂತ್ರಕ್ಕೆ ಸಿಲುಕಿ ಕಾರ್ಮಿಕೆಯೊರ್ವಳು ದಾರುಣವಾಗಿ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಮಂಜೇಶ್ವರ ತೂಮಿನಾಡಿನಲ್ಲಿ ನಡೆದಿದೆ.

ಮೃತದುರ್ದೈವಿ ಜಯಶೀಲ ( ೨೪) ಮೃತಪಟ್ಟವರು. ತೂಮಿನಾಡಿನಲ್ಲಿರುವ ಬೇಕರಿಯೊಂದರ ಕಾರ್ಮಿಕೆಯಾಗಿದ್ದು, ಎಂದಿನಂತೆ ಬೇಕರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಯಂತ್ರಕ್ಕೆ ಚೂಡಿದಾರ್ ಶಾಲು ಸಿಲುಕಿ ದುರ್ಘಟನೆ ನಡೆದಿದೆ.

ಗಂಭೀರ ಸ್ಥಿತಿಯಲ್ಲಿದ್ದ ಜಯಶೀಲರನ್ನು ಅಲ್ಲಿದ್ದವರು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಇಂದು ಜಯಶೀಲರ ಹುಟ್ಟು ಹಬ್ಬವಾಗಿದ್ದು, ಇದರ ನಡುವೆ ದಾರುಣ ಘಟನೆ ನಡೆದಿದೆ. ಒಂದೂವರೆ ವರ್ಷಗಳ ಹಿಂದೆ ವಿವಾಹವಾಗಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಜೇಶ್ವರ ತಾಲೂಕು ಆಸ್ಪತ್ರೆಯಲ್ಲಿರಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು