ಕಾಸರಗೋಡು

ಕಾಸರಗೋಡು: ಅರಣ್ಯ ಸ್ನೇಹಿ ಸಭೆ ಉದ್ಘಾಟಿಸಿದ ಎ.ಕೆ ಶಶೀ೦ದ್ರನ್

ಕಾಸರಗೋಡು: ರಕ್ಷಿತಾರಣ್ಯ ಪ್ರದೇಶಗಳಲ್ಲಿ ವಾಸಿಸುವ ಜನರ ಭಯವನ್ನು ಹೋಗಲಾಡಿಸಲು ಹಾಗೂ ದಾಳಿ ತಡೆಗಟ್ಟಲು ಅಗತ್ಯ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಕೇರಳ ಅರಣ್ಯ ಖಾತೆ ಸಚಿವ ಎ.ಕೆ ಶಶೀ೦ದ್ರನ್ ಹೇಳಿದರು.

ಕುತ್ತಿಕೋಲ್ ನ ಸೋಪಾನಂ ಸಭಾಂಗಣದಲ್ಲಿ ನಡೆದ ಅರಣ್ಯ ಸ್ನೇಹಿ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಅರಣ್ಯ ಒತ್ತುವರಿ, ಕಾಡುಹಂದಿ, ಮಂಗಗಳ ಕಾಟ, ಅರಣ್ಯ ಭೂಮಿಯಲ್ಲಿ ರಸ್ತೆ ನವೀಕರಣ, ಕುಡಿಯುವ ನೀರಿನ ಪೈಪ್‌ಲೈನ್‌ ಹಾಕಲು ಅನುಮತಿ, ಪರಿಹಾರ ಸೇರಿದಂತೆ ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಎತ್ತಿರುವ ಎಲ್ಲ ಸಮಸ್ಯೆಗಳ ಕುರಿತು 15 ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು.

ವನ್ಯಜೀವಿ ದಾಳಿಗೆ ತುತ್ತಾಗುವವರಿಗೆ, ಮೃತರ ಕುಟುಂಬಕ್ಕೆ ನೀಡುವ ಪರಿಹಾರ ಧನ ಹೆಚ್ಚಳ, ಅರಣ್ಯ ಪ್ರದೇಶದ ಸಮೀಪ ಪರಿಸರ ಪ್ರವಾಸೋದ್ಯಮ ಯೋಜನೆ, ಅರಣ್ಯ ಬಲ್ಲವರನ್ನು ವೀಕ್ಷಕರನ್ನಾಗಿ ನೇಮಿಸಲಾಗುವುದು ಎಂದು ಸಚಿವ ಎ.ಕೆ.ಸಶೀಂದ್ರನ್ ಹೇಳಿದರು.

ಡಿಸೆಂಬರ್ 2022 ರವರೆಗಿನ ವಾಚರ್‌ಗಳ ಬಾಕಿ ವೇತನವನ್ನು ಪಾವತಿಸಲಾಗಿದೆ. 2023ರ ಜನವರಿ ಮತ್ತು ಮಾರ್ಚ್‌ ತಿಂಗಳಿಗೆ ಶೀಘ್ರವೇ ನೀಡಲಾಗುವುದು ಎಂದು ತಿಳಿಸಿದರು. ಪರಿಹಾರಕ್ಕಾಗಿ ರಾಜ್ಯದಲ್ಲಿ 50 ಲಕ್ಷ ರೂಪಾಯಿ ಮಂಜೂರು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು. ಕಾಸರಗೋಡು ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದ 43 ಬೀಟ್ ಅಧಿಕಾರಿಗಳನ್ನು ಶೀಘ್ರವೇ ನೇಮಕ ಮಾಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ಬಂದರು ಸಚಿವ ಅಹ್ಮದ್ ದೇವರ್ ಕೋವಿಲ್ ವಹಿಸಿದ್ದರು. ಶಾಸಕ ಎಂ.ರಾಜಗೋಪಾಲನ್ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಮತ್ತು ಕಾಞಂಗಾಡ್ ಸಬ್ ಕಲೆಕ್ಟರ್ ಸುಫಿಯಾನ್ ಅಹಮ್ಮದ್ ಮುಖ್ಯ ಅತಿಥಿಗಳಾಗಿದ್ದರು.

ಕಾರಡ್ಕ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮುರಳಿ ಪಯ್ಯಂಗಾನಂ (ಕುತ್ತಿಕೋಲ್ ), ಜೆ.ಎಸ್.ಸೋಮಶೇಖರ್(ಎಣ್ಮಕಜೆ), ಜೀನ್ ಲವೀನ್ ಮೊಂತೆರೊ(ಮಂಜೇಶ್ವರ),ಎಸ್.ಭಾರತಿ(ವರ್ಕಾಡಿ), ಎಂ.ಧನ್ಯ (ಬೇಡಡ್ಕ) ಮತ್ತು ಟಿ.ಕೆ.ನಾರಾಯಣನ್.(ಕಲ್ಲರ), ಗಿರಿಜಾ ಮೋಹನ್ (ವೆಸ್ಟ್ ಎಳೇರಿ), ಎಚ್.ಮುರಳಿ (ಕುತ್ತಿಕೋಲ್ ), ರಾಜು ಕಟ್ಟಕ್ಕಯಂ (ಬಳಾಲ್), ಪಿ.ವಿ.ಮಿನಿ (ಮುಳಿಯಾರ್), ಅಬ್ದುಲ್ಲ (ಉಪಾಧ್ಯಕ್ಷ ದೇಲಂಪಾಡಿ), ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಯಪ್ರಸಾದ್, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಮೋದ್.ಜಿ. ಕೃಷ್ಣನ್, ಉತ್ತರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್.ದೀಪಾ, ವಿಭಾಗೀಯ ಅರಣ್ಯಾಧಿಕಾರಿ ಪಿ.ಬಿಜು, ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಧನೇಶ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜೀವನ್, ಫ್ಲೈಯಿಂಗ್ ಸ್ಕ್ವಾಡ್ ವಿಭಾಗೀಯ ಅರಣ್ಯಾಧಿಕಾರಿ ಅಜಿತ್ ಕೆ.ರಾಮನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಧನೇಶ್ ಕುಮಾರ್, ಡಿಎಫ್‌ಒ ಅಜಿತ್ ಕೆ.ರಾಮನ್, ಪ್ರಧಾನ ಕೃಷಿ ಅಧಿಕಾರಿ ಪ್ರಭಾರಿ ಕೆ.ಆನಂದ, ಜಿಲ್ಲಾ ಮಣ್ಣು ಸಂರಕ್ಷಣಾಧಿಕಾರಿ ಬಿ.ಎಸ್.ಅನುರಾಧ, ಕಾರಡುಕ ಬ್ಲಾಕ್ ಪಂಚಾಯಿತಿ ಕೆ.ಕೃಷ್ಣನ್, ಕುಟ್ಟಿಕೋಲ್ ಪಂಚಾಯಿತಿ ಮಾಧವನ್ ವೆಳ್ಳಾಲ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್.ದೀಪಾ, ರಾಜಕೀಯ ಪಕ್ಷದ ಮುಖಂಡರಾದ ಎಂ.ಅನಂತನ್, ಕೆ. ಬಲರಾಮನ್ ನಂಬಿಯಾರ್, ಕೆ.ಕುಂಜಿರಾಮನ್, ಜೋಸೆಫ್ ಮೈಕಲ್, ಇ.ಟಿ.ಮತ್ತಾಯಿ, ಎಂ.ಹಮೀದ್ ಹಾಜಿ, ಮಹೇಶ್ ಗೋಪಾಲನ್, ಸನ್ನಿ ಅರಮನೆ, ಸುರೇಶ್ ಪುತಿಧಾತ್, ರಾಘವನ್ ಕೌಲೇರಿ, ಜೆಟೊ ಜೋಸೆಫ್, ವಿ.ಕೆ.ರಮೇಶ ಮಾತನಾಡಿದರು.

ಅರಣ್ಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಯೋಜನೆ ಮತ್ತು ಅಭಿವೃದ್ಧಿ ಡಿ.ಜಯಪ್ರಸಾದ್ ಸ್ವಾಗತಿಸಿ, ಕಾಸರಗೋಡು ವಿಭಾಗೀಯ ಅರಣ್ಯಾಧಿಕಾರಿ ಪಿ.ಬಿಜು ವಂದಿಸಿದರು.

Ashika S

Recent Posts

ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನಿಷೇಧ !

ಭಾರತದ ಎಂಡಿಎಚ್​ ಹಾಗೂ ಎವರೆಸ್ಟ್​ ಮಸಾಲೆ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಇರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ನೇಪಾಳವು…

44 mins ago

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಮಳೆಯ ಅಬ್ಬರ

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ,…

58 mins ago

ಮನೆಗೆ ನುಗ್ಗಿ ಅಂಜಲಿ ಕೊಲೆ ಮಾಡಿದ್ದ ಆರೋಪಿ ಅರೆಸ್ಟ್

ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಅಂಜಲಿ ಅಂಬಿಗೇರ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಿಶ್ವ ಅಲಿಯಾಸ್ ಗಿರೀಶ್​ನನ್ನು ಪೊಲೀಸರು ಬಂಧಿಸಿದ್ದಾರೆ.…

2 hours ago

ಚಿತ್ರದುರ್ಗ: ಮನೆಯೊಂದರಲ್ಲಿ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

ನಗರದ ಜೈಲು ರಸ್ತೆಯ ಮನೆಯೊಂದರಲ್ಲಿ ಪತ್ತೆಯಾಗಿದ್ದ ಐದು ಅಸ್ಥಿಪಂಜರಗಳಿಗೆ ಸಂಬಂಧಿಸಿದ ಎಫ್‌ಎಸ್‌ಎಲ್‌ ಅಂತಿಮ ವರದಿ ಪೊಲೀಸರ ಕೈ ಸೇರಿದ್ದು, ಸಾವಿಗೆ…

2 hours ago

ಬಿರುಗಾಳಿ ಸಹಿತ ಮಳೆಗೆ ಕುಸಿದ ಮಹಾದ್ವಾರ

ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಬಸವ ಮಹಾದ್ವಾರ ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ…

2 hours ago

ಮತ್ತೆ ಭರ್ಜರಿ ಏರಿಕೆ ಕಂಡ ‌ಚಿನ್ನದ ಬೆಲೆ !

ಜಾಗತಿಕವಾಗಿ ಚಿನ್ನಕ್ಕೆ ಈಗ ಸಖತ್ ಬೇಡಿಕೆ ಸೃಷ್ಟಿಯಾಗಿರುವುದು ಈ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ಒಂದು ತಿಂಗಳಿನಿಂದ ಚಿನ್ನದ ಬೆಲೆ…

2 hours ago