ಕಾಸರಗೋಡು: ಕಾಸರಗೋಡು ನೂತನ ಜಿಲ್ಲಾಧಿಕಾರಿಯಾಗಿ ಕೆ. ಇನ್ಬ್ ಶೇಖರ್ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಜಿಲ್ಲಾಧಿಕಾರಿ ಯಾಗಿದ್ದ ಭಂಡಾರಿ ಶೇಖರ್ ರವರ ಬದಲಿಗೆ ಇನ್ಬ್ ಶೇಖರ್ ರವರನ್ನು ರಾಜ್ಯ ಸರಕಾರ ನೇಮಿಸಿತ್ತು. ಜಿಲ್ಲಾ ಹೆಚ್ಚುವರಿ ದಂಡನಾಧಿಕಾರಿ ಕೆ. ನವೀನ್ ಕುಮಾರ್ ಉಪ ಜಿಲ್ಲಾಧಿಕಾರಿ ಸೂಫಿ ಯಾನ್ ಅಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.
ತಮಿಳುನಾಡು ನೀಲಗಿರಿ ಮೂಲದ ಸೇಕರ್ ರವರು, ಕೋಜಿಕ್ಕೊಡ್, ಫೋರ್ಟ್ ಕೊಚ್ಚಿ, ತಿರುವನಂತಪುರ ಮೊದಲಾದೆಡೆ ಉಪ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ