News Karnataka Kannada
Saturday, April 13 2024
Cricket
ಕಾಸರಗೋಡು

ಕೇರಳದಲ್ಲಿ ಪ್ರತಿಯೊಬ್ಬರೂ ಸ್ವಂತ ಭೂಮಿಯನ್ನು ಹೊಂದಬೇಕು- ಕೆ. ರಾಜನ್

Everyone in Kerala should own their own land: K Chandrasekhar Rao Rajan
Photo Credit : By Author

ಮಂಜೇಶ್ವರ: ಕೇರಳದಲ್ಲಿ ಪ್ರತಿಯೊಬ್ಬರೂ ಸ್ವಂತ ಭೂಮಿಯನ್ನು ಹೊಂದಬೇಕು ಎಂಬುದು ಸರಕಾರದ ಗುರಿಯಾಗಿದೆ ಎಂದು ಕಂದಾಯ ಸಚಿವ ಕೆ. ರಾಜನ್ ಹೇಳಿದರು.

ಅವರು ಶುಕ್ರವಾರ ಮಂಜೇಶ್ವರದ ಕಡಂಬಾರ್ ಮತ್ತು ಮೀ೦ಜ ಸ್ಮಾರ್ಟ್ ಗ್ರಾಮ ಕಚೇರಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಸ್ವಂತ ಜಮೀನು ಇಲ್ಲದ ಸ್ಥಿತಿ  ತಲೆದೋರಬಾರದು. ಈ ನಿಟ್ಟಿನಲ್ಲಿ ಸರಕಾರ ಎಲ್ಲಾ ರೀತಿಯ ಯೋಜನೆಗಳನ್ನು ಕೈಗೊಳ್ಳುತ್ತಿದೆ. ರಾಜ್ಯದಲ್ಲಿ ಡಿಜಿಟಲ್ ಮರು ಸಮೀಕ್ಷೆ ಯನ್ನು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು. ಸಮೀಕ್ಷೆಯಿಂದ ಭೂಮಿ ಕಳೆದುಕೊಳ್ಳುವ ಸ್ಥಿತಿ ಯಾರಿಗೂ ಉಂಟಾಗದು. ಎಲ್ಲರಿಗೂ ಮೂಲ ಭೂಮಿ ಸಿಗಲಿದೆ. ಅಕ್ರಮ ಒತ್ತುವರಿ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶಮೀನಾ ಟೀಚರ್, ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್.ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯೆ ಕೆ.ಕಮಲಾಕ್ಷಿ, ಬ್ಲಾಕ್ ಪಂಚಾಯತ್ ಸದಸ್ಯೆ ಅಶ್ವಿನಿ ಪಜ್ವ, ಮೀಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯರಾಮ ಬಳ್ಳಂಕುಡೇಲ್, ಪಂಚಾಯತ್ ಸದಸ್ಯ ಕೆ.ಮಿಸ್ರಿಯಾ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಕೆ.ಆರ್.ಜಯಾನಂದ, ಬಿ.ವಿ.ರಾಜನ್, ಪಿ.ಸೋಮಪ್ಪ, ಡೇನಿಯಲ್ ಡಿಸೋಜಾ, ಡಾ. ಕೆ.ಎ.ಖಾದರ್, ವಿ.ಡಿ.ಜಯಕುಮಾರ್, ಶಂಕರ ನಾರಾಯಣ ಭಟ್, ಕಡಂಬಾರ್ ಗ್ರಾ.ಪಂ.ಅಧಿಕಾರಿ ಅಶೋಕ್ ನಾಯ್ಕ್, ಮೀಂಜ ಗ್ರಾಮಾಧಿಕಾರಿ ಕಿರಣ್ ಕುಮಾರ್ ಶೆಟ್ಟಿ ಮಾತನಾಡಿದರು. ಜಿಲ್ಲಾಧಿಕಾರಿ ಕೆ.ಇಂಪಾಶೇಖರ್ ಸ್ವಾಗತಿಸಿ, ಕಾಸರಗೋಡು ಆರ್ ಡಿಒ ಅತುಲ್ ಎಸ್ ನಾಥ್ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು