ರೈಲುಗಳ ಮೇಲೆ ನಿರಂತರ ಕಲ್ಲೆಸೆತ: ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಪೊಲೀಸರು

ಕಾಸರಗೋಡು: ರೈಲುಗಳ ಮೇಲೆ ನಿರಂತರ ಕಲ್ಲೆಸೆತದ ಘಟನೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಕಾಸರಗೋಡು ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

ಇಂದು ಬೆಳಿಗ್ಗೆಯಿಂದ ಪೊಲೀಸರು ನಡೆಸಿದ ತಪಾಸಣೆಯಿಂದ ೫೦ ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ರೈಲು ಹಳಿ ಇರುವ ಪರಿಸರದಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ ಹಿನ್ನಲೆಯಲ್ಲಿ ಇವರನ್ನು ವಶಕ್ಕೆ ಪಡೆದು ಮಾಹಿತಿ ಕಲೆ ಹಾಕಲಾಗುತ್ತಿದೆ.
ತಪ್ಪಿತಸ್ಥರ ವಿರುದ್ಧ ೧೦ ವರ್ಷಗಳ ಕಠಿಣ ಶಿಕ್ಷೆ ನೀಡುವ ಮೊಕದ್ದಮೆಯನ್ನು ಇವರ ಮೇಲೆ ಹೂಡಲಾಗುವುದು. ರೈಲ್ವೆ ಹಳಿ ಕೇಂದ್ರೀಕರಿಸಿ ಪೊಲೀಸ್ ನಿಗಾ ಹಾಗೂ ಸಿ ಸಿ ಟಿ ವಿ ಕ್ಯಾಮರಾ ಅಳವಡಿಸಲಾಗಿದೆ. ರೈಲ್ವೆ ಹಳಿ ಪರಿಸರದ ಮನೆಗಳನ್ನು ಕೇಂದ್ರೀಕರಿಸಿ ಪೊಲೀಸರು ನಿಗಾ ವಹಿಸಿದ್ದಾರೆ. ರೈಲುಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ಕಾಸರಗೋಡು – ಕಣ್ಣೂರು ನಡುವೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಹತ್ತಕ್ಕೂ ಅಧಿಕ ಕಲ್ಲೆಸೆತದ ಘಟನೆಗಳು ಹಾಗೂ ಹಳಿಯಲ್ಲಿ ಕಲ್ಲು ಸೇರಿದಂತೆ ಹಲವು ವಸ್ತುಗಳು ಪತ್ತೆಯಾದ ಹಿನ್ನಲೆಯಲ್ಲಿ ಪೊಲೀಸರು ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

Gayathri SG

Recent Posts

ಭಾರತದಲ್ಲಿ ಹಿಂದುಗಳ ಸಂಖ್ಯೆ ಇಳಿಕೆ, ಮುಸ್ಲಿಮರ ಸಂಖ್ಯೆ ಏರಿಕೆ: ಆರ್ಥಿಕ ಸಲಹಾ ಮಂಡಳಿ

ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆ ಕುಸಿತವಾಗುತ್ತಿದ್ದು ಇದೇ ವೇಳೆ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ ಎಂದು ಪ್ರಧಾನ ಮಂತ್ರಿ ಆರ್ಥಿಕ ಸಲಹಾ…

15 mins ago

ಪಟಾಕಿ ತಯಾರಿಕಾ ಕಾರ್ಖಾನೆ ಸ್ಫೋಟ: 8 ಮಂದಿ ಮೃತ್ಯು

ಕಾರ್ಖಾನೆಯೊಂದರಲ್ಲಿ ಪಟಾಕಿ ಸಿಡಿದು 8 ಜನರು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಶಿವಕಾಶಿಯಲ್ಲಿ ನಡೆದಿದೆ.

32 mins ago

ಹಾಸನ ವಿಡಿಯೋ ಪ್ರಕರಣ: ಸುಳ್ಳು ದೂರಿನ ಒತ್ತಡ

ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಸಂಸದ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿದ್ದಾರೆ. ಶಾಸಕ ರೇವಣ್ಣ ಜೈಲು ಶಿಕ್ಷೆಗೆ ಗುರಿಗಾಗಿದ್ದಾರೆ. ಈ…

46 mins ago

ಮದುವೆ ರದ್ದು, ಕೋಪದಿಂದ ಅಪ್ರಾಪ್ತ ಬಾಲಕಿಯ ರುಂಡ ಕತ್ತರಿಸಿ ಕೊಲೆ ಮಾಡಿದ ಪ್ರೇಮಿ

ಮದುವೆ ಕ್ಯಾನ್ಸಲ್ ಆದ ಕೋಪಕ್ಕೆ ಬಾಲಕಿಯನ್ನು ಎಳೆದೊಯ್ದು ರುಂಡ ಕತ್ತರಿಸಿ ಕೊಲೆ ಮಾಡಿದ ಘಟನೆ ಕೊಡಗಿನ ಸೋಮವಾರಪೇಟೆಯ ಸುರ್ಲಬ್ಬಿಯಲ್ಲಿ ನಡೆದಿದೆ.

1 hour ago

ಅಕ್ಷಯ ತೃತೀಯದಂದು ಲಕ್ಷ್ಮಿ ಮತ್ತು ಕುಬೇರನಿಗೆ ವಿಶೇಷ ಪೂಜೆ

ಅಕ್ಷಯ ತೃತೀಯವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಂದಿನ ದಿನ ಭರವಸೆ, ಸಂತೋಷ,…

1 hour ago

ಅಕ್ಷಯ ತೃತೀಯ ದಿನದಂದು ಚಿನ್ನ, ಬೆಳ್ಳಿ ದರ ಪಟ್ಟಿ ಹೀಗಿದೆ!

ಇಂದು ಅಕ್ಷಯ ತೃತೀಯ ದಿನವಾಗಿದ್ದು, ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಸತತ ಏರಿಕೆಯ ಬಳಿಕ ಎರಡು ದಿನ ಸತತ ಬೆಲೆ…

2 hours ago