ಜ್ವರದಿಂದ ಬಾಲಕ ಮೃತ ; ಗಂಟಲ ದ್ರವ ತಪಾಸಣೆ

ಕಾಸರಗೋಡು : ಚೆಂಗಳ ಪಂಚಾಯತ್ ವ್ಯಾಪ್ತಿಯಲ್ಲಿ  ಜ್ವರದಿಂದ ಬಾಲಕನೋರ್ವ ಮೃತಪಟ್ಟಿದ್ದು , ಈತನ ಗಂಟಲ ದ್ರವ ಮಾದರಿಯನ್ನು ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ನಿಫಾ ಸೋಂಕಿನ  ಶಂಕೆ ಹಿನ್ನಲೆಯಲ್ಲಿ  ತಪಾಸಣೆಗೆ ಕಳುಹಿಸಲಾಗಿದೆ. ಕೋಜಿಕ್ಕೋಡ್ ಹಾಗೂ ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಜ್ವರದಿಂದ ಬಳಲುತ್ತಿದ್ದ ಐದು  ವರ್ಷದ ಬಾಲಕ ಮೃತಪಟ್ಟಿದ್ದು , ಕೋವಿಡ್ ತಪಾಸಣೆಯಿಂದ ನೆಗಟಿವ್ ವರದಿ ಬಂದಿದೆ. ಆದರೆ ಬಾಲಕನಲ್ಲಿನ ರೋಗ ಲಕ್ಷಣಗಳು ನಿಫಾ ಶಂಕೆ ಮೂಡಿಸಿದ್ದು , ಸಂಶಯ ದೂರ ಮಾಡಲು ಗಂಟಲ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದೆ ಎಂದು  ವೈದ್ಯರು ತಿಳಿಸಿದ್ದಾರೆ.
ಆರೋಗ್ಯ  ಇಲಾಖಾ  ಅಧಿಕಾರಿಗಳು  ಬಾಲಕನ ಮನೆ ಹಾಗೂ ಪರಿಸರದಲ್ಲಿ ತಪಾಸಣೆ ನಡೆಸಿದ್ದಾರೆ.
ಚೆಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ  ಜನರು ಸೇರುವ  ಕಾರ್ಯಕ್ರಮಗಳನ್ನು ತಪಾಸಣಾ ವರದಿ ಲಭಿಸುವ ತನಕ ನಿಷೇಧಿಸಲಾಗಿದೆ.

ಈ ದಿನಗಳಲ್ಲಿ   ಕೋವಿನ ವ್ಯಾಕ್ಸಿನ್ ಕೂಡಾ  ಈ ಅವಧಿಯಲ್ಲಿ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

 

Raksha Deshpande

Recent Posts

ಭಾರಿ ಪ್ರವಾಹ : ಮೃತರ ಸಂಖ್ಯೆ 50ಕ್ಕೆ ಏರಿಕೆ, 27 ಮಂದಿ ನಾಪತ್ತೆ

ಪಶ್ಚಿಮ ಇಂಡೋನೇಷ್ಯದಲ್ಲಿ ಸಂಭವಿಸಿದ ಜ್ವಾಲಮುಖಿ ಸ್ಪೋಟದಿಂದ ಉಂಟಾದ ಪ್ರವಾಹ ಮತ್ತು ಶೀತ ಲಾವ ಹರಿವಿನಿಂದ ಮೃತಪಟ್ಟವರ ಸಂಖ್ಯೆ 50ಕ್ಕೆ ಏರಿದೆ.…

7 mins ago

ಚಾಲಕನ ನಿಯಂತ್ರಣ ತಪ್ಪಿ ಟ್ರಕ್‌ಗೆ ಕಾರು ಡಿಕ್ಕಿ : 6 ಜನ ಮೃತ್ಯು

ಟ್ರಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ 6 ಜನ ಮೃತಪಟ್ಟಿರುವ ಘಟನೆ ಬ್ರಜ್‌ಘಾಟ್ ಟೋಲ್ ಪ್ಲಾಜಾ ಬಳಿ ನಡೆದಿದೆ ಎಂದು…

17 mins ago

ಲೊಕಸಾಭಾ ಚುನಾವಣೆ : ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ

ಇಂದು ಪ್ರಧಾನಿ ನರೇಂದ್ರ ಮೋದಿ ಅವರು 3ನೇ ಬಾರಿ ನಾಮಪತ್ರ ಸಲ್ಲಿಸಿದ್ದಾರೆ. ಇಂದು ಬೆಳಗ್ಗೆ ಕಾಲಭೈರವನ ದರ್ಶನ ಪಡೆದು ಬಳಿಕ…

31 mins ago

ಸಾಣೂರು ಬಿಕರ್ನಕಟ್ಟೆ ರಾಷ್ಟ್ರೀಯ ಹೆದ್ದಾರಿ -169 : ಸಮಸ್ಯೆಗಳು ಹತ್ತಾರು

ರಾಷ್ಟ್ರೀಯ ಹೆದ್ದಾರಿ-169 ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಸಾಣೂರು ಗ್ರಾಮದಿಂದ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮಹಾನಗರ ಪಾಲಿಕೆಯ ಬಿಕರ್ನ…

37 mins ago

ರಘುಪತಿ ಭಟ್ ಮನೆಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ಭೇಟಿ

ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ತಪ್ಪಿದ ಕಾರಣ ಅಸಮಾಧಾನಗೊಂಡ ಮಾಜಿ ಶಾಸಕ ಕೆ. ರಘುಪತಿ ಭಟ್ ಪಕ್ಷೇತರ ಅಭ್ಯರ್ಥಿಯಾಗಿ…

49 mins ago

ಬೆಂಗಳೂರಿನ ಖಾಸಗಿ ಶಾಲೆಗೆ ಮಧ್ಯರಾತ್ರಿ ಬಾಂಬ್‌ ಬೆದರಿಕೆ

ದೇಶದಾದ್ಯಂತ ಬಾಂಬ್‌ ಬೆದರಿಕೆ ಹಾಕುತ್ತಿರುವ ಹಿನ್ನಲೆಯಲ್ಲಿ ಇದೀಗ ನಗರದ ಖಾಸಗಿ ಶಾಲೆಯೋಂದಕ್ಕೆ ದುಷ್ಕರ್ಮಿಗಳು ಬಾಂಬ್‌ ಬೆದರಿಕೆ ಹಾಕಿದ್ದಾರೆ. ಅಮೃತಹಳ್ಳಿ ಠಾಣಾ…

1 hour ago