ಕಾಸರಗೋಡು ಮೂಲದ ನಗ್ಮಾ ಪೋಲೆಂಡ್‌ನಲ್ಲಿ ಭಾರತದ ರಾಯಭಾರಿಯಾಗಿ ನೇಮಕ

ಕಾಸರಗೋಡು: ಕಾಸರಗೋಡು ಮೂಲದ ನಗ್ಮಾ ಮುಹಮ್ಮದ್ ಮಲಿಕ್ ಅವರು ಪೋಲೆಂಡ್‌ನ ಭಾರತೀಯ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ನಗ್ಮಾ ಮುಹಮ್ಮದ್ ಮಲಿಕ್ ಅವರು ಕಾಸರಗೋಡಿನ ಫೋರ್ಟ್ ರೋಡ್‌ನಲ್ಲಿ ವಾಸವಾಗಿದ್ದ ದಿ.ಮುಹಮ್ಮದ್ ಹಬೀಬುಲ್ಲಾ ಮತ್ತು ಝುಲು ಬಾನು ದಂಪತಿಯ ಪುತ್ರಿ.

ಹಬೀಬುಲ್ಲಾ ಅವರು ಕೇಂದ್ರ ಸರಕಾರದ ಸಾಗರೋತ್ತರ ಸಂವಹನ ಇಲಾಖೆಯಲ್ಲಿ ಉದ್ಯೋಗಕ್ಕೆ ನಿಯುಕ್ತಿಗೊಂಡ ಬಳಿಕ ಕುಟುಂಬ ಸಮೇತ ಕಾಸರಗೋಡಿನಿಂದ ಹೊಸದಿಲ್ಲಿಗೆ ತೆರಳಿ ಅಲ್ಲಿಯೇ ವಾಸವಾಗಿದ್ದರು. ನಗ್ಮಾ ಅವರು ಹುಟ್ಟಿ ಬೆಳೆದಿದ್ದು ಹೊಸದಿಲ್ಲಿಯಲ್ಲಿ. ಸೈಂಟ್ ಸ್ಟೀಫನ್ಸ್ ಕಾಲೇಜು ಮತ್ತು ಹೊಸದಿಲ್ಲಿಯ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಅಧ್ಯಯನ ಮಾಡಿದ ಅವರು, ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.

1991ರಲ್ಲಿ ವಿದೇಶಾಂಗ ಇಲಾಖೆಯಲ್ಲಿ ವೃತ್ತಿ ರಾಜತಾಂತ್ರಿಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಅವರು, ಪ್ಯಾರೀಸ್‌ನ ಯುನೆಸ್ಕೋ ಭಾರತೀಯ ಮಿಷನ್‌ಗೆ ಮೊದಲು ನೇಮಕಗೊಂಡರು. ನಂತರ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲದೆ ತುನಿಷಿಯಾ ಮತ್ತು ಬ್ರೂನಿ ದೇಶಗಳ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು.

ಕಟ್ಮಂಡು, ಕೊಲಂಬೋ, ಬ್ಯಾಂಕಾಕ್ ಗಳ ಭಾರತೀಯ ರಾಯಭಾರ ಕಚೇರಿಗಳಲ್ಲೂ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಅಲ್ಲದೆ ಮಾಜಿ ಪ್ರಧಾನಮಂತ್ರಿಗಳಾದ ಐ.ಕೆ.ಗುಜ್ರಾಲ್‌ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಸಿಬ್ಬಂದಿ ಅಧಿಕಾರಿಯಾಗಿದ್ದರು. ವಿದೇಶಾಂಗ ಇಲಾಖೆಯ ಶಿಷ್ಟಾಚಾರ ವಿಭಾಗದ ಉಪ ಮುಖ್ಯಸ್ಥೆಯಾದ ದೇಶದ ಪ್ರಥಮ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಯೂ ಇವರಿಗೆ ಸಲ್ಲುತ್ತದೆ. ಇವರು ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್ ಅವರ ಸಹೋದರನ ಪುತ್ರಿಯೂ ಆಗಿದ್ದಾರೆ.

Sneha Gowda

Recent Posts

ಆರ್​ಸಿಬಿಗೆ ಟ್ವೀಟ್​ ಮೂಲಕ ವಿಜಯ್​ ಮಲ್ಯ ಅಭಿನಂದನೆ

ಶನಿವಾರ ತಡರಾತ್ರಿ ನಡೆದ ಐಪಿಎಲ್​ನ ರೋಚಕ ಪಂದ್ಯದಲ್ಲಿ ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಹಾಲಿ ಚಾಂಪಿಯನ್​…

5 mins ago

ತಾಯಿಯ ಶವದ ಜೊತೆಗೆ ನಾಲ್ಕು ದಿನ ಕಳೆದಿದ್ದ ಬುದ್ಧಿಮಾಂದ್ಯ ಪುತ್ರಿಯೂ ಮೃತ್ಯು

ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿದ ತನ್ನ ತಾಯಿಯ ಮೃತದೇಹದ ಮುಂದೆ ಅನ್ನ ನೀರು ಇಲ್ಲದೆ ಇದ್ದ ವಿಶೇಷಚೇತನ ಮಗಳು ಕೂಡ…

11 mins ago

ಗರ್ಭಿಣಿಯರಲ್ಲಿ ಅಧಿಕ ರಕ್ತದೊತ್ತಡ ಜೀವಕ್ಕೆ ಗಂಡಾಂತರ

ಇಂದಿನ ದಿನಗಳಲ್ಲಿ ರಕ್ತದೊತ್ತಡದ ಸಮಸ್ಯೆ ಸರ್ವೇಸಾಮಾನ್ಯವಾಗಿದೆ. ಹೀಗೆ ರಕ್ತದೊತ್ತಡ ಸಮಸ್ಯೆ ಕಾಡುವುದಕ್ಕೆ ಕಾರಣಗಳು ಹಲವು. ಅದರಲ್ಲಿಯೂ ಮುಖ್ಯವಾಗಿ ನಮ್ಮ ಜೀವನ…

15 mins ago

ಬೆಂಗಳೂರಿನಲ್ಲಿ ತಿಂಗಳಿಗೆ ಸರಾಸರಿ 4.3 ಕೋಟಿ ಯೂನಿಟ್‌ ಹೆಚ್ಚಳ ವಿದ್ಯುತ್ ಬಳಕೆ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಗೃಹ ಬಳಕೆಗೆ ತಿಂಗಳಿಗೆ ಸರಾಸರಿ 4.3 ಕೋಟಿ ಯೂನಿಟ್‌ ಹೆಚ್ಚುವರಿಯಾಗಿ ಬಳಕೆಯಾಗಿದೆ.

17 mins ago

ಮೊಬೈಲ್‌ಗಾಗಿ ತಮ್ಮನನ್ನೆ ಕೊಂದ ಪಾಪಿ ಅಣ್ಣ

ಆನೇಕಲ್ ತಾಲ್ಲೂಕಿನ ನೆರಿಗಾ ಗ್ರಾಮದಲ್ಲಿ ನಡೆದಿದ್ದ 15 ವರ್ಷದ ಬಾಲಕನ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮೃತ ಬಾಲಕ…

28 mins ago

ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಬಾಲಿವುಡ್​ನಿಂದ ಹೊರಬರುತ್ತೇನೆ: ಕಂಗನಾ ರಣಾವತ್

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಾಜಕೀಯದ ಮೊದಲ ಇನ್ನಿಂಗ್ಸ್​ ಆರಂಭಿಸಿದ ಕಂಗನಾ ರಣಾವತ್ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ…

30 mins ago