ಕಾಸರಗೋಡು: ಜಿಲ್ಲೆಯಲ್ಲಿ ಶನಿವಾರ 283 ಮಂದಿಗೆ ಕೋವಿಡ್ ಪಾಸಿಟಿವ್

ಕಾಸರಗೋಡು: ಜಿಲ್ಲೆಯಲ್ಲಿ ಶನಿವಾರ 283 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಪೈಕಿ 273 ಜನರಿಗೆ ಸಂಪರ್ಕದ ಮೂಲಕ ವೈರಸ್ ತಗಲಿದೆ. ಅಲ್ಲದೆ ಜಿಲ್ಲೆಯಲ್ಲಿ 355 ಮಂದಿ ಸೋಂಕುಮುಕ್ತರಾದರು. ಕೊರೋನಾ ಬಾಧಿಸಿ ಜಿಲ್ಲೆಯಲ್ಲಿ ಶನಿವಾರ ಯಾವುದೇ ಸಾವು ಸಂಭವಿಸಿಲ್ಲ.

ಅದರಂತೆ ಒಟ್ಟು ಸಾವಿನ ಸಂಖ್ಯೆ 518 ಆಗಿದೆ. ಕೇರಳದಲ್ಲಿ ಹೊಸದಾಗಿ 16,671 ಜನರಿಗೆ ಕೋವಿಡ್ ವೈರಸ್ ದೃಢಪಟ್ಟಿದೆ. ಇದರಲ್ಲಿ 15,794 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ರಾಜ್ಯದಲ್ಲಿ 14,242 ಜನರು ಗುಣಮುಖರಾದರು.

ಕೇರಳದ ಜಿಲ್ಲೆಗಳ ಪೈಕಿ ಎರ್ನಾಕುಳಂ ಜಿಲ್ಲೆಯಲ್ಲಿ 2500, ತಿರುವನಂತಪುರ 1961, ತೃಶೂರು 1801, ಕಲ್ಲಿಕೋಟೆ 1590, ಕೊಲ್ಲಂ 1303, ಮಲಪ್ಪುರಂ 1200, ಕೋಟ್ಟಾಯಂ 1117, ಪಾಲಕ್ಕಾಡು 1081, ಆಲಪ್ಪುಳ 949, ಕಣ್ಣೂರು 890, ಪತ್ತನಂತ್ತಿಟ್ಟ 849, ವಯನಾಡು 661, ಇಡುಕ್ಕಿ 486, ಕಾಸರಗೋಡು ಜಿಲ್ಲೆಯಲ್ಲಿ 283 ಜನರಿಗೆ ಕೊರೋನಾ ಪಾಸಿಟಿವ್ ಆಗಿದೆ.

ಈ ಮಧ್ಯೆ ಕೋವಿಡ್ ವೈರಸ್ ಬಾಧಿಸಿ ಕೇರಳದಲ್ಲಿ ಶನಿವಾರ 120 ಮಂದಿ ಅಸುನೀಗಿದರು. ಈ ಮೂಲಕ ಇದುವರೆಗೆ ರಾಜ್ಯದಲ್ಲಿ ಒಟ್ಟು 24,248 ಜನರು ಮೃತಪಟ್ಟರು.

Sneha Gowda

Recent Posts

ಭಾರತದಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ಅಕ್ಷಯ್‌ ಕುಮಾರ್‌

ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 49…

16 mins ago

ಕಾಶ್ಮೀರ ವಾಪಸ್ ಪಡೆದೇ ಪಡೆಯುತ್ತೇವೆ: ಗೃಹ ಸಚಿವ ಅಮಿತ್ ಶಾ

ಪಾಕಿಸ್ತಾನದ ಬಳಿ ಪರಮಾಣು ಬಾಂಬ್​ ಇದೆ ಹಾಗಾಗಿ ನಾವು ಅವರನ್ನು ಗೌರವಿಸಬೇಕಾಗುತ್ತದೆ ಎಂಬ ಕಾಂಗ್ರೆಸ್​ ನಾಯಕ ಮಣಿಶಂಕರ್​ ಐಯ್ಯರ್​ ಹೇಳಿಕೆಗೆ…

34 mins ago

ಖಾಸಗಿ ಶಾಲೆಗಳಲ್ಲಿ 30% ವರೆಗೆ ಶುಲ್ಕ ಏರಿಕೆ : ಕಂಗಾಲಾದ ಪೋಷಕರು

2024-25ನೇ ಸಾಲಿಗೆ ಶಾಲಾ ಪ್ರವೇಶ ಪ್ರಕ್ರಿಯೆ ನಡೆಸುತ್ತಿರುವ ಖಾಸಗಿ ಶಾಲೆಗಳು ಶೇ.20ರಿಂದ 30ರವರೆಗೆ ಶುಲ್ಕ ಹೆಚ್ಚಿಸುವ ಮೂಲಕ ಸುಲಿಗೆ ಪದ್ಧತಿ…

1 hour ago

ಯುವಕನೊಬ್ಬ ಎಂಟು ಬಾರಿ ಮತ ಚಲಾಯಿಸಿದ ವೀಡಿಯೊ ವೈರಲ್

ಯುವಕನೋರ್ವ ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತಹಾಕಿರುವ ಘಟನೆ ಉತ್ತರ ಪ್ರದೇಶದ ಇಟಾ ಜಿಲ್ಲೆಯ ನಯಾ ಗಾಂವ್ ಪಟ್ಟಣದಲ್ಲಿ ನಡೆದಿದೆ.…

1 hour ago

ʻಮೋದಿಗೆ ಯಾರೂ ವೋಟ್ ಹಾಕಬೇಡಿ’ ಎಂದಿದ್ದ ಶಿಕ್ಷಕ ಅರೆಸ್ಟ್‌

ಯಾರು ಮೋದಿಗೆ ವೋಟ್​ ಹಾಕಬೇಡಿ ಎಂದು ಶಾಲಾ ಮಕ್ಕಳಿಗೆ ಹೇಳಿದ್ದ ಸರ್ಕಾರಿ ಶಾಲೆಯ ಶಿಕ್ಷಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ…

2 hours ago

ರೇವ್‌ ಪಾರ್ಟಿ ಮೇಲೆ ಪೊಲೀಸ್‌ ದಾಳಿ : ತೆಲುಗು ನಟಿ, ಮಾಡೆಲ್​ ಸಿಸಿಬಿ ವಶಕ್ಕೆ

ಸಿಸಿಬಿ ಪೊಲೀಸರು ರಾಜಧಾನಿಯಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯೊಂದರ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಆಂಧ್ರಪ್ರದೇಶದಿಂದ ತೆಲುಗು ನಟಿಯರನ್ನು ಕರೆಸಿಕೊಂಡು…

2 hours ago