News Karnataka Kannada
Wednesday, April 24 2024
Cricket
ಕಾಸರಗೋಡು

ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಹೊಂಡಕ್ಕೆ ಉರುಳಿ ಬಿದ್ದ ಪರಿಣಾಮ ಯುವಕನೋರ್ವ ಮೃತ

Kasar
Photo Credit :
ಕಾಸರಗೋಡು : ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಹೊಂಡಕ್ಕೆ ಉರುಳಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದ್ದ ಯುವಕನೋರ್ವ ಮೃತಪಟ್ಟ ಘಟನೆ ಕುಂಬಳೆ ಠಾಣಾ ವ್ಯಾಪ್ತಿಯ ಶಿರಿಯ ಎಂಬಲ್ಲಿ  ನಡೆದಿದೆ.
ರಾವಣೇಶ್ವರ ವಾಣಿಯಂಪಾರ ದ ನಿತೇಶ್ ( ೨೪) ಮೃತಪಟ್ಟ ಯುವಕ . ಕಾರಲ್ಲಿದ್ದ  ನಿತೇಶ್ ನ ಸಹೋದರ ಶ್ರವಣ್ ( ೧೪) ,   ಸಂಬಂಧಿಕರಾದ ರಕ್ಷಿತ್ ( ೨೫) ಅಭಿಷೇಕ್ ( ೨೫) ಮತ್ತು ಲೋಕೇಶ್ ( ೩೫) ಗಾಯಗೊಂಡಿದ್ದು , ಈ ಪೈಕಿ ಶ್ರವಣ್ ಮತ್ತು ರಕ್ಷಿತ್ ಗಂಭೀರ ಗಾಯಗೊಂಡಿದ್ದಾರೆ.
ಸೋಮವಾರ ಮುಂಜಾನೆ ಅಪಘಾತ ನಡೆದಿತ್ತು. ಪುತ್ತೂರು  ದೇವಸ್ಥಾನದ   ಉತ್ಸವದಲ್ಲಿ ಪಾಲ್ಗೊಂಡು ಮರಳುತ್ತಿದ್ದಾಗ  ನಿಯಂತ್ರಣ ತಪ್ಪಿದ ಕಾರು  ರಸ್ತೆ ಬದಿಯ ಹೊಂಡಕ್ಕೆ ಬಿದ್ದು ಈ ಅಪಘಾತ ನಡೆದಿತ್ತು.
ವಾಹನವೊಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲೆತ್ನಿಸಿದಾಗ ನಿಯಂತ್ರಣ ತಪ್ಪಿದ ಕಾರು ಅಪಘಾತಕ್ಕೀಡಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ . ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು