News Karnataka Kannada
Tuesday, April 16 2024
Cricket
ಕಾಸರಗೋಡು

ಕಾಸರಗೋಡು :  ಹೊಳೆಗಿಳಿದ  ಮೂವರು ನೀರಿನಲ್ಲಿ ಮುಳುಗಿ ಮೃತ

Madikeri: Boy killed in tiger attack at Palleri
Photo Credit :

ಕಾಸರಗೋಡು :  ಹೊಳೆಗಿಳಿದ  ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಸೋಮವಾರ  ಸಂಜೆ  ಪಯಸ್ವಿನಿ ಹೊಳೆಯ ತೋನಿಕಡವು ಯಲ್ಲಿ  ನಡೆದಿದೆ .

ಕುಂಡಂಗುಳಿ  ಗದ್ದೆಮೂಲೆಯ   ನಿತಿನ್ ( 38) , ಪತ್ನಿ ದೀಕ್ಷಾ (30) ಮತ್ತು ಸಂಬಂಧಿಕ  ಮನೀಶ್ ( 16) ಮೃತಪಟ್ಟವರು
ಸಂಜೆ 3 ಗಂಟೆ ಸುಮಾರಿಗೆ ಘಟನೆ ನಡೆದಿದೆ.

ನೀರಿನಲ್ಲಿ ಸಿಲುಕಿದ್ದ  ದೀಕ್ಷಾಳನ್ನು ರಕ್ಷಿಸಲೆತ್ನಿಸಿದಾಗ ಇಬ್ಬರು ನೀರುಪಾಲಾಗಿದ್ದು ,  ಪೊಲೀಸರು , ಅಗ್ನಿಶಾಮಕ ದಳದ ಸಿಬಂದಿಗಳು  ಹಾಗೂ ಪರಿಸರವಾಸಿಗಳು  ಗಂಟೆಗಳ ಕಾಲ ನಡೆಸಿದ ಶೋಧದ  ಬಳಿಕ  ಮೂವರ  ಮೃತದೇಹವನ್ನು  ಮೇಲಕ್ಕೆತ್ತಲಾಯಿತು.

ಕೆಲ ದಿನಗಳ ಹಿಂದೆಯಷ್ಟೇ ಗಲ್ಫ್ ನಿಂದ ಬಂದಿದ್ದ ನಿತಿನ್   ಹಾಗೂ ಕುಟುಂಬದ 9 ಮಂದಿ ಸಂಜೆ  ಹೊಳೆ  ಬದಿಗೆ  ಬಂದಿದ್ದರು.   ನಿತಿನ್ ಮತ್ತು ದೀಕ್ಷಾ ನೀರಿಗಿಳಿದಿದ್ದು , ಈ ಸಂದರ್ಭದಲ್ಲಿ  ಮುಳುಗಿದ ದೀಕ್ಷಾಳನ್ನು ರಕ್ಷಿಸಲು ನಿತಿನ್  ಯತ್ನಿಸಿದರೂ ಸಾಧ್ಯವಾಗಲಿಲ್ಲ .

ಇದರಿಂದ ಮನೀಶ್ ಕೂಡಾ  ನೀರಿಗೆ  ಹಾರಿದ್ದು , ನೀರಲ್ಲಿ ಸಿಲುಕಿದ ನ್ನು  ಗಮನಿಸಿದ ಜೊತೆಗಿದ್ದವರ ಬೊಬ್ಬೆ ಕೇಳಿ ಧಾವಿಸಿ ಬಂದ  ಪರಿಸರವಾಸಿಗಳು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.  ಬಳಿಕ ನಡೆಸಿದ ಹುಡುಕಾಟದಿಂದ ಆರು ಗಂಟೆ ಸುಮಾರಿಗೆ ಮೂವರ ಮೃತದೇಹವನ್ನು ಮೇಲಕ್ಕೆತ್ತಲಾಯಿತು.  ಮೃತದೇಹವನ್ನು  ಕಾಸರಗೋಡು  ಜನರಲ್ ಆಸ್ಪತ್ರೆಯ             ಶವಾಗಾರದಲ್ಲಿರಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು